More

    ಗೋಮಾಳ ಒತ್ತುವರಿಗೆ ಆಕ್ರೋಶ

    ಚಳ್ಳಕೆರೆ: ಬೂದಿಹಳ್ಳಿಯಲ್ಲಿ ಸರ್ಕಾರಿ ಶಾಲೆಗೆ ನಿಗದಿಪಡಿಸಿರುವ ಗೋಮಾಳ ಭೂಮಿ ಒತ್ತುವರಿ ತೆರವಿಗೆ ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

    ಗ್ರಾಮದ ಸಮೀಪದ ರಿ.ಸ.ನಂ: 156ರ ಒಂದೂವರೆ ಎಕರೆ ಗೋಮಾಳ ಭೂಮಿಯನ್ನು ಸರ್ಕಾರಿ ಶಾಲೆಗೆ ಗುರುತು ಮಾಡಲಾಗಿದ್ದು, ಇದರಲ್ಲಿ ಒತ್ತುವರಿಯಾಗಿ ಕೇವಲ ಅರ್ಧ ಎಕರೆ ಉಳಿದಿದೆ. ಈ ಜಮೀನು ದಾಖಲೆಗಳಲ್ಲಿ ಶಾಲೆಗೆ ನಿದಿಯಾಗಿಲ್ಲವೆಂಬ ಕಾರಣಕ್ಕೆ ಸ್ಥಳೀಯ ಆಡಳಿತ, ಗೋಮಾಳ ಭೂಮಿಯಲ್ಲಿ ಮನೆ ನಿರ್ಮಿಸಲು ಹಕ್ಕುಪತ್ರ ನೀಡಲಾಗಿದೆ ಎಂದು ದೂರಿದ್ದಾರೆ.

    ಪಂಚಾಯಿತಿಗೆ ಮನವಿ ಸಲ್ಲಿಸಿ ಅಧಿಕೃತವಾಗಿ ಗೋಮಾಳ ಭೂಮಿಯನ್ನು ಶಾಲೆಗೆ ಮೀಸಲಿರಿಸುವಂತೆ ಒತ್ತಾಯಿಸಿದರೆ ಶಾಲೆ ಅರಣ್ಯಭೂಮಿಯಲ್ಲಿರುವ ಕಾರಣ ದಾಖಲೆ ಮಾಡಿಕೊಡಲು ಬರುವುದಿಲ್ಲ ಎಂಬ ಸಬೂಬು ಹೇಳಿ ಅಕ್ರಮವಾಗಿ ಹಕ್ಕುಪತ್ರ ನೀಡಲು ಮುಂದಾಗಿದೆ.

    ಮುಖ್ಯಮಂತ್ರಿ, ಡಿಸಿ, ತಹಸೀಲ್ದಾರ್ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಹೀಗಾಗಿ ಪಾದಯಾತ್ರೆ ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದು ಗ್ರಾಪಂ ಸದಸ್ಯ ಈ.ರವಿ, ಮಾಜಿ ಅಧ್ಯಕ್ಷ ಪಾಲಣ್ಣ, ತಪಸ್ ಫೌಂಡೇಷನ್ ಅಧ್ಯಕ್ಷ ಟಿ.ರಾಜು ಬೂದಿಹಳ್ಳಿ, ಟಿ.ಗಿರೀಶ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts