More

    ದುರ್ಗ ಪ್ರವೇಶಿಸಿದ ರೈತ ಚೈತನ್ಯ ಯಾತ್ರೆ

    ಚಿತ್ರದುರ್ಗ: ಬ್ಯಾಂಕ್‌ವೊಂದರ ಕೃಷಿ ಸಾಲ ವಸೂಲಾತಿ ವಿರೋಧಿಸಿ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಮಾ. 6 ರಂದು ಬಳ್ಳಾರಿಯಿಂದ ಆರಂಭಿಸಿದ ರೈತ ಚೈತನ್ಯಯಾತ್ರೆ ಮಂಗಳವಾರ ನಗರ ಪ್ರವೇಶಿಸಿತು.

    ಸೇನೆ ರಾಜ್ಯಾಧ್ಯಕ್ಷ ಆರ್. ಮಾಧವರೆಡ್ಡಿ ಮಾತನಾಡಿ, ಸಾಲ ವಸೂಲಾತಿ ವಿರೋಧಿಸಿ ಕಳೆದೊಂದು ವರ್ಷದಿಂದ ಹೋರಾಟ ನಡೆಸುತ್ತಿದ್ದೇವೆ. ಈ ಕುರಿತು ಸಿಎಂ ಗಮನ ಸೆಳೆದಿದ್ದೇವೆ. 1 ಲಕ್ಷ ರೂ. ಸಾಲಕ್ಕೆ 10 ಲಕ್ಷ ರೂ. ಬಡ್ಡಿ ಹಾಕಿದ್ದಾರೆ. ಇದು ಯಾವ ಲೆಕ್ಕಾಚಾರ ಎಂದು ಪ್ರಶ್ನಿಸಿದರು.

    ಎಸ್‌ಬಿಐನಂತ ರಾಷ್ಟ್ರೀಕೃತ ಬ್ಯಾಂಕ್ ರೈತರು ಪಡೆದಿರುವ ಸಾಲದ ಅಸಲಿನ ಶೇ. 10ರಷ್ಟು ಹಣ ಪಾವತಿಸಿಕೊಂಡು ಉಳಿದದ್ದನ್ನು ಮನ್ನಾ ಮಾಡಿದೆ. ಆದರೆ, ರಾಜ್ಯದ ಗ್ರಾಮೀಣ ಬ್ಯಾಂಕ್‌ವೊಂದು ಈ ವಿಚಾರದಲ್ಲಿ ರೈತರನ್ನು ನಿಕೃಷ್ಟವಾಗಿ ನಡೆಸಿಕೊಳ್ಳುತ್ತಿದೆ ಎಂದು ದೂರಿದರು.

    ಯಾತ್ರೆಯೂ ಬೆಂಗಳೂರಿನ ಸ್ವಾತಂತ್ರ ಉದ್ಯಾನದಲ್ಲಿ 29ಕ್ಕೆ ಸಮಾರೋಪಗೊಳ್ಳಲಿದ್ದು, ಆರ್‌ಬಿಐ ಎದುರು ಸಾಲ ವಸೂಲಾತಿ ವಿರೋಧಿಸಿ ಪ್ರತಿಭಟಿಸಲಾಗುವುದು ಎಂದು ತಿಳಿಸಿದರು. ರೈತ ಮುಖಂಡರಾದ ಕೆ.ಬಸವರೆಡ್ಡಿ, ಬಿ.ಸುರೇಂದ್ರ, ವಿಶ್ವನಾಥ, ಉಮಾಪತಿಗೌಡ, ಸತ್ಯಪ್ಪ, ಕುಮಾರ್ ಸಮತಳ, ಟಿ.ಶಫಿವುಲ್ಲಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts