More

    ಸಿಇಟಿಗೆ ಈ ವರ್ಷ ಕಡಿಮೆ ಅರ್ಜಿ ಸಲ್ಲಿಕೆ: ಕಳೆದ ವರ್ಷಕ್ಕೆ ಹೋಲಿಸಿದರೆ 21 ಸಾವಿರ ಅರ್ಜಿ ಕಮ್ಮಿ

    ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸುವ 2021ರ ಸಾಮಾನ್ಯ ಪ್ರವೇಶ ಪರೀಕ್ಷೆಗೆ(ಸಿಇಟಿ)ಈ ಬಾರಿ ಕಡಿಮೆ ಅರ್ಜಿ ಸಲ್ಲಿಕೆಯಾಗಿವೆ.

    2021ರ ಸಿಇಟಿಗೆ 1,70,100 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. 2020ರಲ್ಲಿ 1.91 ಲಕ್ಷ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು. 2019ರಲ್ಲಿ 1.94 ಲಕ್ಷ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು.

    2021 ಹಾಗೂ 2020ಕ್ಕೆ ಹೋಲಿಕೆ ಮಾಡಿದರೆ, ಈ ಬಾರಿ 21 ಸಾವಿರ ಅರ್ಜಿಗಳು ಕಡಿಮೆ ಬಂದಿವೆ. ಅರ್ಜಿ ಸಲ್ಲಿಸಲು ಜು.10 ಕೊನೆಯ ದಿನವಾಗಿದ್ದು, ಇನ್ನು ಒಂದೆರಡು ಸಾವಿರ ಅರ್ಜಿಗಳು ಹೆಚ್ಚಿಗೆ ಬರುವ ಸಾಧ್ಯತೆ ಇದೆ ಕೆಇಎ ಅಂದಾಜಿಸಿದೆ.

    ಜೂ.15ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಿಸಿತ್ತು. ಸಿಇಟಿ ಆಗಸ್ಟ್ 28ರಿಂದ 30ರವರೆಗೆ ನಡೆಯಲಿದೆ. ಅರ್ಜಿಗಳ ಸಂಖ್ಯೆ ಇಳಿ ಮುಖವಾಗಿರುವುದಕ್ಕೆ ಯಾವುದೇ ನಿಖರವಾದ ಮಾಹಿತಿ ತಿಳಿದು ಬಂದಿಲ್ಲ. ಪ್ರತಿ ವರ್ಷ ಅರ್ಜಿಗಳ ಸಲ್ಲಿಕೆಯಲ್ಲಿ ಏರಿಳಿತ ಸಾಮಾನ್ಯವಾಗಿರುತ್ತದೆ ಎಂದು ಕೆಇಎ ತಿಳಿಸಿದೆ.

    ವಿಶೇಷ ಪ್ರವರ್ಗದ ಪ್ರಮಾಣ ಪತ್ರಗಳನ್ನು ಜು.14ರಿಂದ 20ರವರೆಗೆ ಖುದ್ದು ಸಹಾಯ ಕೇಂದ್ರಗಳಿಗೆ ಹೋಗಿ ಪ್ರಮಾಣ ಪತ್ರಗಳನ್ನು ಸಲ್ಲಿಸಬಹುದು. ಬೆಂಗಳೂರು, ಮೈಸೂರು, ಮಂಗಳೂರು, ದಾವಣಗೆರೆ, ಬೆಳಗಾವಿ, ಕಲಬುರಗಿಯಲ್ಲಿ ಕೇಂದ್ರಗಳನ್ನು ಗುರುತಿಸಿದೆ. ಈ ಕೇಂದ್ರಗಳಿಗೆ ಭೇಟಿ ನೀಡಿ ಪ್ರಮಾಣ ಪತ್ರ ಸಲ್ಲಿಸಬಹುದಾಗಿದೆ. ಈ ಪ್ರಮಾಣ ಪತ್ರ ಸಲ್ಲಿಸುವ ಮುನ್ನ ಸಿಇಟಿ ಅರ್ಜಿಯಲ್ಲಿ ವಿಶೇಷ ವರ್ಗವನ್ನು ಕ್ಲೇಮ್ ಮಾಡಿರಬೇಕು. ಪ್ರಮಾಣ ಪತ್ರಗಳ ಎರಡು ಸೆಟ್ ಜೆರಾಕ್ಸ್ ಪ್ರತಿಯನ್ನು ನೀಡಬೇಕು ಎಂದು ಕೆಇಎ ತಿಳಿಸಿದೆ.

    *ಸಿಇಟಿಗೆ ಸಲ್ಲಿಕೆಯಾಗಿರುವ ಮಾಹಿತಿ

    ವರ್ಷ ಸಲ್ಲಿಕೆಯಾದ ಅರ್ಜಿಗಳು
    2017-18 1,75,079
    2018-19 1,98,655
    2019-20 1,94,308
    2020-21 1,91,200
    2021-22 1,70,100

    ಜು.20ರೊಳಗೆ ದ್ವಿತೀಯ ಪಿಯು ಫಲಿತಾಂಶ ಬಿಡುಗಡೆಗೆ ನಿರ್ಧಾರ: ಎಸ್ಸೆಸ್ಸೆಲ್ಸಿ-ಪಿಯು ಅಂಕ ಪರಿಶೀಲನೆಗೆ ಅವಕಾಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts