More

    ದೇಶವನ್ನು ವಿಕಸಿತಗೊಳಿಸುವ ಸಂಕಲ್ಪದ ಮುಂಗಡಪತ್ರ: ಮಹೇಶ ನಾಲವಡ

    ಗದಗ: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ‌ವು ಮಧ್ಯಂತರ ಮುಂಗಡಪತ್ರದ ಮೂಲಕ ಕೃಷಿ, ರಕ್ಷಣೆ, ನಾರಿಶಕ್ತಿ, ರೈಲ್ವೆ, ಆರ್ಥಿಕತೆ ಸೇರಿದಂತೆ ಎಲ್ಲಾ ವಲಯಗಳಲ್ಲಿ ದೇಶವನ್ನು ವಿಕಸಿತಗೊಳಿಸುವ ಸಂಕಲ್ಪದೊಂದಿಗೆ ಯೋಜನೆ ರೂಪಿಸಿದೆ.

    ಶ್ರೀಮತಿ ನಿರ್ಮಲಾ ಸೀತಾರಾಮನ್ ಇಂದು ಮಂಡಿಸಿದ ಕೇಂದ್ರ ಬಜೆಟ್ ೨೦೨೪, ಅತ್ಯಂತ ಸ್ವಾಗತಾರ್ಹವಾಗಿದೆ. ಈ ಮಧ್ಯಂತರ ಮುಂಗಡ ಪತ್ರದಲ್ಲಿ ಬರಲಿರುವ ಚುನಾವಣೆಯನ್ನು ಗಣನೆಗೆ ತೆಗೆದುಕೊಳ್ಳದೇ, ದೀರ್ಘ ಕಾಲದಲ್ಲಿ ದೇಶಕ್ಕೆ ಹಣಕಾಸಿನ ಭದ್ರತೆ ಮತ್ತು ಅಭಿೃದ್ಧಿಪರ ನಿರ್ಧಾರಗಳನ್ನು ಬಜೆಟನಲ್ಲಿ ತೆಗೆದುಕೊಳ್ಳಲಾಗಿದೆ.
    ಕೃಷಿ, ಮೀನುಗಾರಿಕೆ, ಆರೋಗ್ಯ ಕ್ಷೇತ್ರಗಳಿಗೆ ಹೆಚ್ಚಿನ ವತ್ತು ನೀಡಲಾಗಿದೆ ಎಂದು ಹೇಳಲು ಸಂತಸವಾಗುತ್ತದೆ.
    ೧೧.೧೧ ಲಕ್ಷ ಕೋಟಿ ರೂಪಾಯಿಗಳನ್ನು ಮೂಲಭೂತ ಸೌಕರ್ಯಗಳಿಗೆ ಹಂಚಿಕೆ ಆಗಿರುವುದು ಒಂದು ಐತಿಹಾಸಿಕ ಬೆಳೆವಣಿಗೆ.  ಇಷ್ಟು ದೊಡ್ಡ ಮೊತ್ತದ ಹಣವನ್ನು ಇನ್ಫ್ರಾಸ್ಟ್ರಕ್ಚರ್ ಸೆಕ್ಟರಗೆ ಹಿಂದೆ ಯಾವ ಸರ್ಕಾರಗಳೂ ನೀಡಿರಲಿಲ್ಲ. ರಸ್ತೆ, ರೈಲು ಮತ್ತು ವಿಮಾನಯಾನ ಕ್ಷೇತ್ರಗಳಿಗೆ ಈ ಹಂಚಿಕೆ ಮೂಲಕ ಸಾಕಷ್ಟು ಪ್ರಾಮುಖ್ಯತೆ ನೀಡಿರುವುದು ಮಹತ್ತರವಾದ ಬೆಳವಣಿಗೆ. ಹಸಿರು ಶಕ್ತಿ, ಪರಿಸರ ಸ್ನೇಹಿ ಸುಧಾರಣೆಗಳನ್ನು ಬಜೆಟ್ನಲ್ಲಿ ಆರ್ಥಿಕ ಮಂತ್ರಿ ಅಳವಡಿಸಿಕೊಂಡಿದ್ದಾರೆ.
    ೨೦೨೪-೨೫ ರಲ್ಲಿ  ೨೬.೦೨ ಲಕ್ಷ ಕೋಟಿ ತೆರಿಗೆ ಆದಾಯವನ್ನು ಪರಿಗಣಿಸಿದ್ದು ದೇಶವು ಪ್ರಗತಿಯತ್ತ ದಾಪುಗಾಲು ಹಾಕಿರುವುದು ವೇದ್ಯವಾಗಿದೆ. ಶ್ರೀಮಾನ್ ನರೇಂದ್ರ ಮೋದಿ ನೇತೃತ್ವದ ಭಾಜಪ ಸರ್ಕಾರ ಸರ್ವರ ಜೊತೆ, ಸರ್ವರ ಅಭಿವೃದ್ಧಿ ಮತ್ತು ಸರ್ವರ ವಿಶ್ವಾಸ ಎಂಬ ಧ್ಯೆಯವಾಕ್ಯದೊಂದಿಗೆ ಹೊಸ ವಿಕಸಿತ ಭಾರತ ನಿರ್ಮಾಣದತ್ತ ಹೆಜ್ಜೆ ಹಾಕಿದೆ ಎಂದು ಹೇಳಲು ಬಹಳ ಸಂತೋಷವಾಗುತ್ತದೆ.

    ಜುಲೈ ೨೦೨೪ ಕ್ಕೆ ಮತ್ತೆ ಮೋದಿ ಸರ್ಕಾರ ಪೂರ್ಣಪ್ರಮಾಣದ ಮುಂಗಡ ಪತ್ರವನ್ನೂ  ಮಂಡಿಸುವದು ಖಚಿತವಾಗಿದ್ದು,  ತೆರಿಗೆ ಹಾಗೂ ಇತರ ಸುಧಾರಣೆಗಳನ್ನು ನಾವು ನಿರೀಕ್ಷೆ ಮಾಡಬಹುದು

    • ಮಹೇಶ ನಾಲವಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts