More

    6ರಂದು ಕಾಗೋಡಿನಿಂದ ವಿಧಾನಸಭೆ ಚಲೋ

    ಸಾಗರ: ರೈತ, ದಲಿತ, ಕಾರ್ವಿುಕರ ಐಕ್ಯ ಹೋರಾಟ ಸಮಿತಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದ ರೈತ ವಿರೋಧಿ ಕಾಯ್ದೆ ತಿದ್ದುಪಡಿ ಖಂಡಿಸಿ ಕಾಗೋಡಿನಿಂದ ಡಿ.6ರಂದು ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಸಂಚಾಲನಾ ಸಮಿತಿ ಸದಸ್ಯ ಬಿ.ಆರ್.ಜಯಂತ್ ಹೇಳಿದರು.

    ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ಮತ್ತು ಕಾರ್ವಿುಕ ಕಾಯ್ದೆಗಳಿಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತಂದಿರುವುದನ್ನು ರದ್ದುಪಡಿಸುವಂತೆ ಒತ್ತಾಯಿಸಿ ಕಾಗೋಡು ಗ್ರಾಮದ ರಾಮ ಮನೋಹರ ಲೋಹಿಯಾ ಸ್ಮಾರಕ ಭವನದಲ್ಲಿ ಬೆಳಗ್ಗೆ 7ಕ್ಕೆ ಬೆಂಗಳೂರು ಚಲೋ ಕಾರ್ಯಕ್ರಮಕ್ಕೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಚಾಲನೆ ನೀಡುವರೆಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ನವದೆಹಲಿಯಲ್ಲಿ ಕಾಯ್ದೆ ವಿರುದ್ಧ ರೈತರು ಬೃಹತ್ ಹೋರಾಟ ನಡೆಸುತ್ತಿದ್ದು ದೆಹಲಿಯ ಬಹುತೇಕ ರಸ್ತೆಗಳು ಬಂದ್ ಆಗಿವೆ. ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಹೋರಾಟ ಮಾಡಲು ರೈತರು, ದಲಿತರು, ಕಾರ್ವಿುಕರು, ಪ್ರಗತಿಪರ ಚಿಂತಕರು ಚಿಂತನೆ ನಡೆಸಿದ್ದು ಈ ಹಿನ್ನೆಲೆಯಲ್ಲಿ ಕಾಗೋಡಿನಿಂದ ವಾಹನ ಮೂಲಕ ಜಾಥಾ ಆಯೋಜಿಸಲಾಗಿದೆ ಎಂದರು.

    ಜಾಥಾ ಸಾಗುವ ದಾರಿಯ ಹಲವು ಊರುಗಳಲ್ಲಿ ಕಾರ್ನರ್ ಸಭೆ ನಡೆಸಿ ಜನರನ್ನು ಎಚ್ಚರಿಸುವ ಪ್ರಯತ್ನ ಮಾಡುತ್ತಿದ್ದು, ಡಿ. 7ರ ಬೆಳಗ್ಗೆ ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ಬೃಹತ್ ಹೋರಾಟ ನಡೆಯಲಿದೆ ಎಂದು ಹೇಳಿದರು.

    ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಫ್ರೀಡಂ ಪಾರ್ಕ್​ನಿಂದ ವಿಧಾನಸೌಧ ಚಲೋ ಹಮ್ಮಿಕೊಳ್ಳುತ್ತೇವೆ. ವಿಧಾನಸೌಧ ಚಲೋ ಕಾರ್ಯಕ್ರಮಕ್ಕೆ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಚಾಲನೆ ನೀಡುವರು ಎಂದು ತಿಳಿಸಿದರು.

    ಸಂಚಾಲನಾ ಸಮಿತಿಯ ಶಿವಾನಂದ ಕುಗ್ವೆ, ಪ್ರಮುಖರಾದ ಪರಮೇಶ್ವರ ದೂಗೂರು, ಎಚ್.ಬಿ.ರಾಘವೇಂದ್ರ, ತೀ.ನ.ಶ್ರೀನಿವಾಸ್, ಎನ್.ಲಲಿತಮ್ಮ, ನಾಗರಾಜ್, ಭೀಮನೇರಿ ಶಿವಪ್ಪ, ಅಣ್ಣಪ್ಪ ಬಾಳೆಗುಂಡಿ, ಹಿರೇನೆಲ್ಲೂರು ಮಂಜಪ್ಪ, ದಿನೇಶ್ ಶಿರವಾಳ, ರಾಮಣ್ಣ ಹಸಲರು, ಎನ್.ಡಿ.ವಸಂತಕುಮಾರ್, ಎ.ಎ.ಶೇಟ್ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts