More

    ಕೋವಿಡ್​ 19 ನಿರ್ವಹಣೆಗೆ ಎಲ್ಲ ರಾಜ್ಯಗಳಿಗೆ 11,092 ಕೋಟಿ ರೂ. ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ

    ನವದೆಹಲಿ: ರಾಷ್ಟ್ರದಲ್ಲಿ ಕರೊನಾ ಸೋಂಕು ಹರಡದಂತೆ ತಡೆಯಲು ರಾಜ್ಯ ವಿಪತ್ತು ನಿರ್ವಹಣಾ ನಿಧಿಯಡಿ (ಎಸ್​ಡಿಆರ್​ಎಂಎಫ್​) ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೆ 11,092 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ.

    ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಸಿಎಂಗಳ ಜತೆ ನಡೆಸಿದ್ದ ವಿಡಿಯೋ ಕಾನ್ಫರೆನ್ಸಿಂಗ್​ನಲ್ಲಿ ಅನುದಾನ ಒದಗಿಸುವ ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ 11,0092 ಕೋಟಿ ರೂ. ಅನುದಾನ ಬಿಡುಗಡೆಗೆ ಕೇಂದ್ರ ಗೃಹ ಸಚಿವ ಅಮಿತ್​ ಷಾ ಶುಕ್ರವಾರ ಅನುಮೋದನೆ ನೀಡಿದ್ದಾರೆ.

    ಈ ನಿಧಿಯನ್ನು ಬಳಸಿಕೊಂಡು ರಾಜ್ಯ ಸರ್ಕಾರಗಳು ಕ್ವಾರಂಟೈನ್​ ಸೌಲಭ್ಯ ಕಲ್ಪಿಸಬಹುದು. ರಕ್ತ ಮತ್ತು ಗಂಟಲು ದ್ರವ ಮಾದರಿ ಸಂಗ್ರಹ ಮತ್ತು ಪರಿಶೀಲನೆ, ಹೆಚ್ಚುವರಿ ಪ್ರಯೋಗಾಲಯಗಳ ಸ್ಥಾಪನೆ, ವೈದ್ಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿ, ಪೊಲೀಸ್​, ಮುನ್ಸಿಪಲ್​ ಮತ್ತು ಅಗ್ನಿಶಾಮಕದಳ ಸಿಬ್ಬಂದಿಗೆ ರಕ್ಷಣಾ ಕವಚಗಳ ಖರೀದಿ, ಥರ್ಮಲ್​ ಸ್ಕ್ಯಾನರ್​ಗಳ ಖರೀದಿ, ವೆಂಟಿಲೇಟರ್​, ಗಾಳಿ ಶುದ್ಧಗೊಳಿಸುವ ಯಂತ್ರಗಳು ಮತ್ತು ಸರ್ಕಾರಿ ಆಸ್ಪತ್ರೆಗಳಿಗೆ ಅಗತ್ಯವಾದ ವಸ್ತುಗಳ ಖರೀದಿಗೆ ಈ ನಿಧಿಯನ್ನು ಬಳಸಬಹುದಾಗಿದೆ.

    ಬ್ರಿಟನ್​ ರಾಜಕುಮಾರ ಚಾರ್ಲ್ಸ್‌ ಕರೊನಾ ಸೋಂಕಿಗೆ ಆಯುರ್ವೇದ ಔಷಧಿ ಪಡೆದಿಲ್ಲ: ರಾಜಮನೆತನದ ವಕ್ತಾರರ ಸ್ಪಷ್ಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts