More

    ಹರಿವರಾಸನಂ ಹಾಡಿಗೆ ನೂರರ ಸಂಭ್ರಮ


    ಕುಂಬಳೆ (ಕಾಸರಗೋಡು):
    ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿಯ ಸುಪ್ರಭಾತ ಗೀತೆ ‘ಹರಿವರಾಸನಂ ವಿಶ್ವಮೋಹನಂ ಹರಿದಧೀಶ್ವರಂ ಆರಾಧ್ಯಪಾದುಕಂ’ ಹಾಡಿಗೆ ನೂರರ ಸಂಭ್ರಮ.

    ಈ ಸ್ತೋತ್ರವನ್ನು 1923ರಲ್ಲಿ ರಚಿಸಲಾಗಿತ್ತು. ಆದರೆ, 1975ರಲ್ಲಿ ಬಿಡುಗಡೆಯಾದ ಸ್ವಾಮಿ ಅಯ್ಯಪ್ಪನ್ ಎಂಬ ಚಿತ್ರದಲ್ಲಿ ಇದನ್ನು ಹಾಡಿನ ರೂಪದಲ್ಲಿ ಬಳಸಿದ ಬಳಿಕ ಈ ಹಾಡು ಜನಪ್ರಿಯತೆ ಪಡೆದುಕೊಂಡಿತು. ದೇವರಾಜನ್ ಸಂಗೀತ ನಿರ್ದೇಶನದಲ್ಲಿ ಈ ಗೀತೆಯನ್ನು ಗಾಯಕ ಕೆ.ಜೆ.ಏಸುದಾಸ್ ಹಾಡಿದ್ದರು. ಮಧ್ಯಮಾವತಿ ರಾಗದ ಹಾಡನ್ನು ಅಯ್ಯಪ್ಪ ಭಕ್ತರು ಬಹಳ ಮೆಚ್ಚಿಕೊಂಡಿದ್ದರು. ಪ್ರತಿ ಸಾಲಿನಲ್ಲಿ 11 ಅಕ್ಷರಗಳೊಂದಿಗೆ ಸಂಸ್ಕೃತದ 32 ಸಾಲುಗಳಿವೆ.

    ಭೋಜನ ಪೂಜೆಯ ನಂತರ ಮತ್ತು ಶಬರಿಮಲೆ ದೇವಸ್ಥಾನವನ್ನು ಮುಚ್ಚುವ ಮೊದಲು ಸನ್ನಿಧಾನದಲ್ಲಿ ಈ ಹಾಡನ್ನು ನಿಯಮಿತ ವಾಗಿ ಪಠಿಸಲಾಗುತ್ತದೆ. ಇದು ಯಾವಾಗ ಪ್ರಾರಂಭಗೊಂಡಿತು ಎನ್ನುವುದನ್ನು ದೃಢಪಡಿಸುವ ದಾಖಲೆಗಳು ಲಭ್ಯವಿಲ್ಲ. ಆದರೆ, ಕೆಲವು ಹಿರಿಯ ಗುರುಸ್ವಾಮಿಗಳ ಪ್ರಕಾರ, ಈ ಕೀರ್ತನೆಯು 1952ರಿಂದ ಸನ್ನಿಧಾನದಲ್ಲಿ ನಿಯಮಿತವಾಗಿ ಬಳಲಾಗುತ್ತಿದೆ. ಹರಿವರಾಸನಂ ಗೀತೆಯನ್ನು ಒಳಗೊಂಡಿರುವ ಸಣ್ಣ ಪುಸ್ತಕವೂ(ಶ್ರೀ ಧರ್ಮಶಾಸ್ತಾ ಸ್ತುತಿ ಕದಂಬಂ)ಪ್ರಕಟವಾಗಿದೆ.

    ಶತಮಾನೋತ್ಸವಕ್ಕೆ ಸಿದ್ಧತೆ: ಹರಿವರಾಸನಂ ಶತಮಾನೋತ್ಸವ ಆಚರಿಸಲು ಭಕ್ತರು ವಿವಿಧ ಕಾರ್ಯಕ್ರಮಗಳನ್ನು ಸಿದ್ಧಪಡಿಸುತ್ತಿದ್ದಾರೆ. ಶಬರಿಮಲೆ ಅಯ್ಯಪ್ಪ ಸೇವಾ ಸಮಾಜದ ಜತೆಗೆ ಆಚಾರ್ಯ ವೃಂದ, ಆಧ್ಯಾತ್ಮಿಕ ಸಂಘಟನೆಗಳು, ಹಿಂದು ಸಂಘಟನೆಗಳು, ವಿವಿಧ ಅಯ್ಯಪ್ಪ ಭಕ್ತ ಸಮಿತಿಗಳು ಮುಂದಿನ 18 ತಿಂಗಳ ಕಾಲ ನಡೆಯುವ ಕಾರ್ಯಕ್ರಮಗಳನ್ನು ಸಿದ್ಧಪಡಿಸಿವೆ. ಕಾರ್ಯಕ್ರಮಗಳು ಕೇರಳ ರಾಜ್ಯಾದ್ಯಂತ ನಡೆಯಲಿದ್ದು, ಅಯ್ಯಪ್ಪ ಸ್ವಾಮಿಯ ಜನ್ಮಸ್ಥಳವಾದ ಪಂದಳಂನಿಂದ ಪ್ರಾರಂಭವಾಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts