More

    ಪರಿಹಾರ ತಾರತಮ್ಯಕ್ಕೆ ಖಂಡನೆ ; ನಾರಾಯಣಪುರ, ಯರವರಹಳ್ಳಿ, ಹೊಸೂರು ಗ್ರಾಮಸ್ಥರ ಪ್ರತಿಭಟನೆ

    ಶಿರಾ: ಎಚ್‌ಪಿಸಿಎಲ್ ಗ್ಯಾಸ್ ಪೈಪ್‌ಲೈನ್ ಹಾದುಹೋಗುತ್ತಿರುವ ಜಮೀನುಗಳ ಖಾತೆದಾರರಿಗೆ ಪರಿಹಾರ ಹಣ ನೀಡುವಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಗೌಡಗೆರೆ ಹೋಬಳಿಯ ನಾರಾಯಣಪುರ, ಯರವರಹಳ್ಳಿ, ಹೊಸೂರು ಗ್ರಾಮಸ್ಥರು ಗುರುವಾರ ಪ್ರತಿಭಟನೆ ನಡೆಸಿದರು.

    ಪೈಪ್‌ಲೈನ್ ಹಾದುಹೋಗುವ ಜಮೀನಿನ ರೈತರಿಗೆ ಸ್ಥಳೀಯ ಮಾರುಕಟ್ಟೆ ದರದ ಅನುಗುಣವಾಗಿ ಪರಿಹಾರ ಹಣ ನಿಡಬೇಕು. ಇದಕ್ಕೆ ಸಂಬಂಧಿಸಿದಂತೆ ಶಾಸಕ, ಡಿಸಿ, ತಹಸೀಲ್ದಾರ್ ನಾಹಿದಾ ಜಂ ಜಂಗೆ ಮನವಿ ಅರ್ಜಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.

    ಹಾಸನ- ಆಂಧ್ರದ ಚರ್ಲೆಪಲ್ಲಿ ಪೈಪ್‌ಲೈನ್ ತಿಪಟೂರು, ಚಿಕ್ಕನಾಯಕನಹಳ್ಳಿ, ಶಿರಾ ಮೂಲಕ ಹಾದುಹೋಗಲಿದ್ದು, 3 ಅಡಿ ಬಳಸುತ್ತೇವೆ ಎಂದು ಹೇಳುವ ಗ್ಯಾಸ್ ಕಂಪನಿಯವರು 53 ಅಡಿಯವರೆಗೂ ಪ್ರವಾಣ ಪತ್ರ ವಾಡಿಸಿಕೊಳ್ಳುತ್ತಿದ್ದಾರೆ. 1962ರ ಪ್ರಕಾರ ಪರಿಹಾರ ನೀಡುತ್ತೇವೆ ಎಂದು ರೈತರಿಗೆ 1 ಗುಂಟೆಗೆ ಕೇವಲ 4 ರಿಂದ 5 ಸಾವಿರ ಹಣ ನೀಡುತ್ತಿದ್ದಾರೆ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಈ ಹಿಂದೆ ಜವನಗೊಂಡನಹಳ್ಳಿ-ಹೇರೂರು ರಸ್ತೆ ಕಾಮಗಾರಿ ನಮ್ಮ ಜಮೀನಿನಲ್ಲೇ ಹಾದುಹೋಗಿದ್ದು, ಇದಕ್ಕೆ ಸಂಬಂಧಿಸಿದಂತೆ ಯಾವುದೇ ಹಣ ಬಂದಿಲ್ಲ. ಈಗ ಜಮೀನಿನಲ್ಲೇ ಗ್ಯಾಸ್ ಲೈನ್ ಹಾದುಹೋಗುತ್ತಿದ್ದು, ಇರುವ ಜಮೀನೆಲ್ಲ ಸರ್ಕಾರದ ಕಾಮಗಾರಿಗೆ ಬಳಸಿದರೆ ನಾವು ಮಕ್ಕಳಿಗೆ ಏನು ಕೊಡಬೇಕು ಎಂದು ಯರವರಹಳ್ಳಿ ಚಿಕ್ಕಮ್ಮ ಅಳಲು ತೋಡಿಕೊಂಡರು. ಸ್ಥಳಕ್ಕೆ ಉಪತಹಸೀಲ್ದಾರ್ ಸುನಿಲ್‌ಕುವಾರ್ ಆಗಮಿಸಿ ಪ್ರತಿಭಟನಾನಿರತ ರೈತರಿಗೆ ನೀತಿ ಸಂಹಿತೆ ಜಾರಿಯಿರುವುದರಿಂದ ಸ್ವಲ್ಪ ದಿನ ಕಾಲಾವಕಾಶ ಕೊಡಿ ಎಂದು ಸಮಜಾಯಿಸಿ ಹೇಳಿ, ಸಂಬಂಧಪಟ್ಟ ದಾಖಲೆಗಳನ್ನು ಡಿಸಿ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು. ಯರವರಹಳ್ಳಿಯ ಹನುಮಂತಪ್ಪ, ರಂಗಪ್ಪ, ಚಿಕ್ಕಮ್ಮ, ಹೊಸೂರಿನ ರಾಜಣ್ಣ, ಜುಂಜಣ್ಣ, ದಿಬ್ಬಣ್ಣ, ಚಂದ್ರಪ್ಪ, ಮತ್ತಿತರರರು ಪ್ರತಿಭಟನೆಯಲ್ಲಿದ್ದರು.

    ಕೇಂದ್ರ ಸರ್ಕಾರದ ಸ್ಕೀಂ ಪ್ರಕಾರ ಗುಂಟೆಗೆ 60 ರಿಂದ 70 ಸಾವಿರ ರೂಪಾಯಿ ನೀಡಬೇಕಾಗಿದ್ದರೂ, ಗುತ್ತಿಗೆದಾರರು ದೌರ್ಜನ್ಯ ವಾಡಿ ಕೇವಲ ಗುಂಟೆಗೆ 4 ರಿಂದ 5 ಸಾವಿರ ರೂಪಾಯಿ ಹಣ ನೀಡಿ ಅನ್ಯಾಯ ವಾಡುತ್ತಿದ್ದಾರೆ. ಈ ಸಂಬಂಧ ಅಧಿಕಾರಿಗಳು, ಜನಪ್ರತಿನಿಧಿಗಳು ನಮಗೆ ನ್ಯಾಯ ಕೊಡಿಸಲು ಮುಂದಾಗಬೇಕು.
    ಪ್ರಕಾಶ್ ನಾಯಾಯಣಪುರ ರೈತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts