More

    ಬಲಭೀಮೇಶ್ವರ ಮಹಾರಾಜಕೀ ಜೈ

    ಕಕ್ಕೇರಾ: ಪೂಲಭಾವಿ ಕ್ಯಾಂಪ್‌ನ ಬಲಭೀಮೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಭಾನುವಾರ ಸಂಜೆ ಸಾವಿರಾರು ಸಂಖ್ಯೆ ಭಕ್ತರ ಜೈ ಘೋಷಗಳ ಮಧ್ಯೆ ೮ನೇ ವರ್ಷದ ಅದ್ದೂರಿ ರಥೋತ್ಸವ ಜರುಗಿತು.

    ಭಾನುವಾರ ಬೆಳಗ್ಗೆ ಪೂಜ್ಯ ಭೀಮಣ್ಣ ಮುತ್ಯಾ ನೇತೃತ್ವದಲ್ಲಿ ಡೊಳ್ಳುವಾದ್ಯಗಳೊಂದಿಗೆ ಸಂಭ್ರಮದ ಪಲ್ಲಕ್ಕಿ ಉತ್ಸವ ಹಾಗೂ ದೇವರ ಹೇಳಿಕೆ ನಡೆಯಿತು. ಈ ವೇಳೆ ನೂರಾರು ಭಕ್ತರು ದೇವರಿಗೆ ದೀರ್ಘದಂಡ ನಮಸ್ಕಾರ ಹಾಕಿ ತಮ್ಮ ಹರಕೆ ಪೂರೈಸಿದರು. ಇನ್ನೂ ಕೆಲವರು ಛತ್ರಿ(ಕೊಡೆ)ಗಳು ಹಾಗೂ ಗಂಟೆ ಸಮರ್ಪಿಸಿ ಕಾಯಿ-ಕರ್ಪೂರ ಮತ್ತು ನೈವೇದ್ಯ ಹಿಡಿದರು.

    ಸಂಜೆ ೬-೨೦ಕ್ಕೆ ವಿವಿಧ ಹೂಗಳಿಂದ ಸಿಂಗರಿಸಲ್ಪಟ್ಟ ರಥೋತ್ಸವದಲ್ಲಿ ಕಳಸ ಇಡುತ್ತಿದ್ದಂತೆ ಭೀಮಣ್ಣ ಮುತ್ಯಾ, ಕರಿಮಡ್ಡೆಪ್ಪ ತಾತಾ, ಅಯ್ಯಣ್ಣ ಪೂಜಾರಿ ಅವರು ಶಾಂತಿ ಧ್ಯೋತಕವಾದ ಬಿಳಿ ಶೆಲ್ಯ ಭಕ್ತರತ್ತ ಬೀಸುವುದರೊಂದಿಗೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ನಂತರ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಭಕ್ತರು ಜೈ ಘೋಷ ಹಾಕುವ ಮೂಲಕ ರಥವನ್ನೆಳೆದರು.

    ಈ ವೇಳೆ ಭಕ್ತರು ಮುಗಿಲೆತ್ತರಕ್ಕೆ ಬಣ್ಣ ಬಣ್ಣದ ಪಟಾಕಿ ಸಿಡಿಸಿ ಪೂಲಭಾವಿ ಶ್ರೀ ಬಲಭೀಮೇಶ್ವರ ಮಹಾರಾಜಕೀ ಜೈ, ಭೀಮಣ್ಣ ಮುತ್ಯಾ ಕೀಜೈ, ಬುಡ್ಡಯ್ಯ ಮುತ್ಯಾ ಮಹಾರಾಜಕೀ ಜೈ ಎಂಬ ಘೋಷವಾಖ್ಯಗಳು ಮೊಳಗಿದವರು. ಭಕ್ತರು ಉತ್ತತ್ತಿ ಹಾಗೂ ಹೂ-ಹಣ್ಣುನ್ನು ರಥಕ್ಕೆ ಅರ್ಪಿಸಿ ದೇವರ ಕೃಪೆಗೆ ಪಾತ್ರರಾದರು. ರಥ ಪಾದಗಟ್ಟೆ ತಲುಪಿ ಸುರಕ್ಷಿತವಾಗಿ ಮರಳಿ ಸ್ವಸ್ಥಳಕ್ಕೆ ಬಂದು ತಲುಪಿತು.

    ಗೊಲಪಲ್ಲಿಯ ವರದಾನೇಶ್ವರ ಸ್ವಾಮೀಜಿ, ರೇವಣಸಿದ್ಧೇಶ್ವರ ಅಗತೀರ್ಥ, ಹನುಮಂತರಾಯ ಜಹಾಗೀರದಾರ್, ರಾಜಾ ವಿಜಯಕುಮಾರ ನಾಯಕ, ಗುಂಡಪ್ಪ ಸೊಲಾಪುರ, ದಸ್ತಗೀರ್ ಸಾಹೇಬ್ ಶ್ಯಾನಿ ಪೂಜಾರಿ, ದೇವಿಂದ್ರಪ್ಪ ಬಳಿಚಕ್ರ, ರಾಜು ಹವಾಲ್ದಾರ್, ರಮೇಶ ಶೆಟ್ಟಿ, ಶರಣು ಸೊಲಾಪುರ, ಬಸಯ್ಯ ಸ್ವಾಮಿ, ಅಮರೇಶ ದೊರೆ, ಗೌಡಪ್ಪ ಪೂಲಭಾವಿ, ನಂದಪ್ಪ ಹೊಳಿಜಂಪಾ ಇತರರಿದ್ದರು.

    ಶನಿವಾರ ರಾತ್ರಿ ದೇವರ ಗಂಗಾಸ್ಥಳ ನಂತರ ವಿಶೇಷ ಪೂಜೆ ಕಾರ್ಯಕ್ರಮ ನಡೆದರೆ, ಗಾಯಕರಿಂದ ಸಂಗೀತ ರಸಮಂಜರಿ, ಬಾಲಕಿಯರ ಕಬಡ್ಡಿ ಪಂದ್ಯಾವಳಿ ಜರುಗಿದವು. ನಂತರ ಕನಕಾಂಗಿ ಕಥೆ ಪೌರಾಣಿಕ ಬಯಲಾಟ ಪ್ರದರ್ಶನಗೊಂಡರೆ, ಮುನ್ನೆಚ್ಚರಿಕೆ ಕ್ರಮವಾಗಿ ಸಿಪಿಐ ಚೆಲುವಾದಿ, ಕೊಡೇಕಲ್ ಪಿಎಸ್‌ಐ ಸುರೇಶ ಭಾವಿಮನಿ ನೇತೃತ್ವದಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts