More

    ಸಂಭ್ರಮದ ಮೈಲಾರಲಿಂಗೇಶ್ವರ ಜಾತ್ರೆ

    ಬೈಲಹೊಂಗಲ: ದೊಡವಾಡ ಹಾಗೂ ನನಗುಂಡಿಕೊಪ್ಪ ಗ್ರಾಮಗಳ ಮಧ್ಯೆ ಇರುವ ಆನಂದಗಿರಿ ಶ್ರೀ ಮೈಲಾರಲಿಂಗೇಶ್ವರ ಜಾತ್ರೆ ವಿಜಂಭಣೆಯಿಂದ ಜರುಗಿತು.

    ಜಾತ್ರೆ ನಿಮಿತ್ತ ಕಳೆದೊಂದು ವಾರದಿಂದ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಮೈಲಾರಲಿಂಗೇಶ್ವರನಿಗೆ ರುದ್ರಾಭಿಷೇಕ, ಬುತ್ತಿ ಪೂಜೆ, ಅಗ್ನಿ ಪೂಜೆ, ತ್ರಿಶೂಲ ಪೂಜೆ, ಬನ್ನಿ ಮಹಾಕಾಳಿ ಪೂಜೆ ಹಮ್ಮಿಕೊಳ್ಳಾಗಿತ್ತು. ಶುಕ್ರವಾರ ಬೆಳಗ್ಗೆ ಕುದುರೆಕಾರರು, ಸುಮಂಗಲೆಯರು ಹಾಗೂ ಸಕಲ ವಾದ್ಯ ವೈಭವಗಳೊಂದಿಗೆ ಆನಂದಗಿರಿಯಿಂದ ದೊಡವಾಡ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ನಡೆಯಿತು. ಸಂಜೆ ದೇವಸ್ಥಾನದ ಪವಾಡ ಕಟ್ಟೆ ಬಳಿ ಮೈ ರೋಮಾಂಚನಗೊಳಿಸುವ ಮಲ್ಲಯ್ಯಜ್ಜನ ಪವಾಡಗಳು ಜರುಗಿದವು.

    ಹುಗ್ಗಿ ಪವಾಡ, ಸರಪಳಿ ಹರಿಯುವ ಪವಾಡ, ಹಾರಿ ಮಿಣಿ ಪವಾಡ, ಆರತಿ ಪವಾಡ, ಕುಡಗೋಲು ಪವಾಡಗಳನ್ನು ನೋಡಿದ ಭಕ್ತರು ಶ್ರಿ ಮೈಲಾರಜ್ಜನಿಗೆ ಜೈ ಎಂದು_ ಜೈಕಾರ ಹಾಕಿದರು. ದೇವಸ್ಥಾನದ ಪೀಠಾಧಿಪತಿ ಮಾತೋಶ್ರೀ ನಾಗಮ್ಮನವರ ಸಾನ್ನಿಧ್ಯದಲ್ಲಿ ಭಕ್ತರಿಗೆ ಮಹಾ ಪ್ರಸಾದ ವಿತರಣೆ ನಡೆಯಿತು. ದೇವಸ್ಥಾನ ಕಮಿಟಿ, ಯುವಕರು ಜಾತ್ರೆ ಯಶಸ್ಸಿಗೆ ಶ್ರಮಿಸಿದರು. ದೊಡವಾಡ ಆನಂದಗಿರಿಯ ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ಸರಪಳಿ ಹರಿಯುವ ಪವಾಡ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts