More

    ಮೇಲ್ಮನೆಯಲ್ಲಿ ಬಿಟ್ಟು ಬಿಡದೆ ಕಾಡಿದ ಸಿಡಿ ಪ್ರಕರಣ: ಸದಸ್ಯರ ಮಾತು ಕಡತಕ್ಕೆ ಹೋಗದಂತೆ ತಡೆದ ಸಭಾಪತಿ!

    ಬೆಂಗಳೂರು: ರಾಜ್ಯಾದ್ಯಂತ ಭಾರಿ ಸಂಚಲನ ಸೃಷ್ಟಿಸಿರುವ ಸಿಡಿ ಪ್ರಕರಣ ಮೇಲ್ಮನೆಯಲ್ಲಿ ಮತ್ತೆ ಮತ್ತೆ ಕಾಡುತ್ತಲೇ ಇದೆ.

    ಆಪಾದಿತರು ಸದನದಲ್ಲಿ ಉತ್ತರ ಕೊಡುವುದನ್ನು ಒಪ್ಪುವುದಿಲ್ಲ ಎಂದು ಕಾಂಗ್ರೆಸ್​ನ ನಾರಾಯಣಸ್ವಾಮಿ ತಗಾದೆ ತೆಗೆದು, ಕೋರ್ಟ್ ಮೊರೆ ಹೋಗಿರುವ ಆರು ಜನ ಸಚಿವರು ಮರ್ಯಾದೆಯಿಂದ ಸದನದ ಹೊರಗೆ ಇರಬೇಕು ಎಂದು ಆಗ್ರಹಿಸಿದ್ದು ವಾಗ್ವಾದಕ್ಕೆ ಕಾರಣವಾಯಿತು.

    ಸಚಿವರಾದ ಡಾ.ಸುಧಾಕರ್, ಬಿ.ಸಿ.ಪಾಟೀಲ್, ನಾರಾಯಣ ಗೌಡ ಸೇರಿದಂತೆ ಹಲವು ಸಚಿವರು, ಆಡಳಿತ ಪಕ್ಷದ ಶಾಸಕರು, ವಿರೋಧ ಪಕ್ಷದ ಮೇಲೆ ತಿರುಗಿ ಬಿದ್ದರು.

    ಇದನ್ನೂ ಓದಿರಿ: ಚಿಕ್ಕಪ್ಪನ ಅಂತ್ಯಕ್ರಿಯೆಗೆ ಹೂವು ತರಲು ಹೋದ ಸಹೋದರರು ಮರಳಿದ್ದು ಹೆಣವಾಗಿ!

    ಕಾಂಗ್ರೆಸ್ ನಾರಾಯಣ ಸ್ವಾಮಿ, ಆರೋಗ್ಯ ಇಲಾಖೆಗೆ ಸಂಬಂಧಿಸಿದ ಪ್ರಶ್ನೆ ಕೇಳಬೇಕಾಗಿತ್ತು, ಆದರೆ ಕೋರ್ಟ್ ಗೆ ಹೋಗಿರುವ 6 ಮಂದಿ ಸಚಿವರಿಗೆ ಪ್ರಶ್ನೆ ಕೇಳದಂತೆ ತೀರ್ಮಾನ ಮಾಡಿದ್ದೇವೆ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

    ಬಹಳ ಹೊತ್ತು, ಕಾಂಗ್ರೆಸ್ ಸದಸ್ಯರು ಮತ್ತು ಸಚಿವರ ನಡುವೆ ಮಾತಿನ ಚಕಮಕಿ ನಡೆಯಿತು. ನಿಮ್ಮ ಅಧ್ಯಕ್ಷರೇ ಬೇಲ್ ಮೇಲೆ ಇದ್ದಾರೆ ಎಂದ ಸಚಿವ ಸುಧಾಕರ್, ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಕಡೆಗೆ ಬೊಟ್ಟು ಮಾಡಿದರು.

    ಈ ವೇಳೆ ಮಧ್ಯ ಪ್ರವೇಶಿಸಿದ ಸಭಾಪತಿ ಬಸವರಾಜ ಹೊರಟ್ಟಿ, ಯಾರ ಮಾತು ಕಡತಕ್ಕೆ ಹೋಗದಂತೆ ಸೂಚನೆ ನೀಡಿ ಪರಿಸ್ಥಿತಿ ತಹಬಂದಿಗೆ ತಂದರು.

    ಸಚಿವರಿಗೆ ಬಿಸಿಮುಟ್ಟಿಸಿದ ಸಿಎಂ ಬಿಎಸ್​ವೈ

    ಹಸುವಿನ ಕೆಚ್ಚಲು ಕೊಯ್ದು ವಿಕೃತಿ ಮೆರೆದ ದುಷ್ಕರ್ಮಿಗಳು! ಕರುಗೆ ಹಾಲುಣಿಸಲಾಗದೆ ನರಳುತ್ತಿದೆ ಮೂಕಜೀವಿ

    ಡಿಕೆಶಿ ಮನೆಗೆ ಶಿವರಾಜ್​ಕುಮಾರ್​ ದಿಢೀರ್ ಭೇಟಿ ನೀಡಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts