More

    ‘ಮಗ ನಮ್ಮ ಸಂಪರ್ಕದಲ್ಲೂ ಇಲ್ಲ’ : ಶಿವಪ್ರಕಾಶ್ ಪಾಲಕರಿಗೆ ಸಿಸಿಬಿ ಡ್ರಿಲ್ !

    ಬೆಂಗಳೂರು: ಸ್ಯಾಂಡಲ್​ವುಡ್ ಡ್ರಗ್ಸ್ ಜಾಲ ಪ್ರಕರಣದ ಮೊದಲನೇ ಆರೋಪಿ ಶಿವಪ್ರಕಾಶ್ ಅಲಿಯಾಸ್ ಚಿಪ್ಪಿಯ ಪಾಲಕರನ್ನು ಸಿಸಿಬಿ ಪೊಲೀಸರು ಬುಧವಾರ ವಿಚಾರಣೆ ನಡೆಸಿದ್ದಾರೆ. ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಶಿವಪ್ರಕಾಶ್ ನಾಪತ್ತೆಯಾಗಿ ಹಲವು ದಿನ ಕಳೆದರೂ ಸಿಸಿಬಿ ಪೊಲೀಸರಿಗೆ ಆತನ ಬಗ್ಗೆ ಸಣ್ಣ ಸುಳಿವೂ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಶಿವಪ್ರಕಾಶ್ ಪಾಲಕರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಅದರಂತೆ ಸಿಸಿಬಿ ಕಚೇರಿಗೆ ಹಾಜರಾದ ಶಿವಪ್ರಕಾಶ್ ಪಾಲಕರು ವಿಚಾರಣೆ ಎದುರಿಸಿದ್ದಾರೆ.

    ಪ್ರಕರಣದಲ್ಲಿ ಆತನ ಹೆಸರು ತುಳುಕುಹಾಕಿಕೊಂಡ ಬಳಿಕ ನಮ್ಮ ಸಂಪರ್ಕಕ್ಕೆ ಸಿಗಲಿಲ್ಲ. ನಾವು ಸುಸಂಸ್ಕೃತ ಕುಟುಂಬದವರಾಗಿದ್ದು, ನಮ್ಮನ್ನು ಇದರಲ್ಲಿ ಸಿಲುಕಿಸಬೇಡಿ ಎಂದು ಪೊಲೀಸರ ಬಳಿ ಮನವಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಶಿವಪ್ರಕಾಶ್ ಪಾಲಕರಿಂದ ಆತನ ಬಗ್ಗೆ ಮಾಹಿತಿ ಪಡೆದು ಬಲೆ ಬೀಸಲು ಮುಂದಾಗಿದ್ದ ಸಿಸಿಬಿ ಹಲವು ತಾಸುಗಳ ಕಾಲ ಆತನ ಪಾಲಕರನ್ನು ವಿಚಾರಣೆ ನಡೆಸಿತು. ಆದರೆ, ಆತ ಎಲ್ಲಿದ್ದಾನೆ ಎಂಬ ಸುಳಿವು ಸಿಕ್ಕಿಲ್ಲ ಎನ್ನಲಾಗಿದೆ.

    ಇದನ್ನೂ ಓದಿ:  ಯಾರೂ ಇಂಥ ತಪ್ಪು ಮಾಡದಿರಿ: ಎನ್​ಸಿಪಿ ಮುಖಂಡ ಕಾರಿನಲ್ಲೇ ಸುಟ್ಟುಕರಕಲಾಗೋದಕ್ಕೆ ಇದುವೇ ಕಾರಣ!

    ನನ್ನ ಮಗ ತಪ್ಪು ಮಾಡಿಲ್ಲ: ವಿಚಾರಣೆ ಮುಗಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಪ್ರಕಾಶ್ ತಂದೆ ಈರಪ್ಪ, ನಮ್ಮ ಮಗ ಗ್ರಾ್ಯನೈಟ್ ಉದ್ಯಮದ ಜತೆ ಸಿನಿಮಾ ನಿರ್ವಪಕನಾಗಿದ್ದಾನೆ. ಈ ಪ್ರಕರಣದಲ್ಲಿ ಹೆಸರು ಕೇಳಿ ಬಂದ ಬಳಿಕ ಶಿವಪ್ರಕಾಶ್ ಸಂಪರ್ಕಕ್ಕೆ ಸಿಕ್ಕಿಲ್ಲ. ನಮ್ಮ ಸಂಪರ್ಕಕ್ಕೆ ಸಿಕ್ಕಿದರೆ ಖಂಡಿತಾ ಸಿಸಿಬಿ ಮುಂದೆ ಹಾಜರುಪಡಿಸುತ್ತೇವೆ. ಸಿಸಿಬಿ ಅಧಿಕಾರಿಗಳು ಅನೇಕ ಪ್ರಶ್ನೆಗಳನ್ನು ಕೇಳಿದ್ದಾರೆ. ನಮ್ಮ ಮಗ 12 ವರ್ಷಗಳಿಂದ ಪ್ರತ್ಯೇಕ ಜೀವನ ನಡೆಸುತ್ತಿದ್ದಾನೆ. ಡ್ರಗ್ಸ್ ಪ್ರಕರಣಕ್ಕೂ ಆತನಿಗೂ ಸಂಬಂಧವಿಲ್ಲ. ನಮ್ಮದು ಸುಸಂಸ್ಕೃತ ಕುಟುಂಬ. ನಮ್ಮ ಮಗ ತಪ್ಪು ಮಾಡಿಲ್ಲ. ನಮ್ಮನ್ನ ಮತ್ತೆ ಕರೆದರೆ ವಿಚಾರಣೆಗೆ ಹಾಜರಾಗುವುದಾಗಿ ಅವರು ತಿಳಿಸಿದ್ದಾರೆ

    ಇದನ್ನೂ ಓದಿ:  ಅನಧಿಕೃತ ಬಡಾವಣೆಗಳು ನೆಲಸಮ : ಸರ್ಕಾರಿ ಭೂಮಿ ಸೇರಿ 14.38 ಎಕರೆ ಜಮೀನು ವಶಕ್ಕೆ

    ರವಿಶಂಕರ್ ವಿಚ್ಚೇದಿತ ಪತ್ನಿಯ ಮನವಿ: ಡ್ರಗ್ಸ್ ಜಾಲದಲ್ಲಿ ಸಿಲುಕಿ ಜೈಲು ಸೇರಿರುವ ಆರೋಪಿ ರಾಗಿಣಿ ಸ್ನೇಹಿತ ರವಿಶಂಕರ್​ನ ವಿಚ್ಚೇದಿತ ಪತ್ನಿ ಅರ್ಚನಾ ನಾಯ್ಕ ಸಿಸಿಬಿ ಪೊಲೀಸರ ಮುಂದೆ ಹಾಜರಾಗಿ, ಆತನೊಂದಿಗೆ ನನಗೆ ಯಾವುದೇ ಸಂಪರ್ಕವಿಲ್ಲ. ಇದರಲ್ಲಿ ನನ್ನನ್ನು ಸಿಲುಕಿಸಬೇಡಿ ಎಂದು ಮನವಿ ಮಾಡಿದ್ದಾರೆ. ಪುಣೆಗೆ ಹೋಗಿ ಎಲ್ಲವನ್ನು ಮರೆತು ನನ್ನ ಪಾಡಿಗೆ ಜೀವಿಸುತ್ತಿದ್ದೆ. ಎರಡು ವರ್ಷಗಳ ಹಿಂದೆ ರವಿಶಂಕರ್​ನಿಂದ ವಿಚ್ಚೇದನ ಪಡೆದಿದ್ದೇನೆ. ನನ್ನನ್ನು ನನ್ನ ಪಾಡಿಗೆ ಬಿಟ್ಟು ಬಿಡಿ. ನಾನು ಕೋರ್ಟ್ ಮುಂದೆ ಸಾಕ್ಷಿ ಹೇಳುವುದಿಲ್ಲ ಎಂದು ತನಿಖಾಧಿಕಾರಿಗಳ ಮುಂದೆ ಮನವಿ ಮಾಡಿದ್ದಾರೆ ಎನ್ನಲಾಗುತ್ತಿದೆ.

    ಇದನ್ನೂ ಓದಿ:  ಕರೊನಾ ನಿಯಂತ್ರಣದಲ್ಲಿ ಯಾವುದೇ ರಾಜಿಯಿಲ್ಲ : ಅಧಿಕಾರಿಗಳಿಗೆ ಸಿಎಂ ಬಿಎಸ್​ವೈ ಖಡಕ್ ಎಚ್ಚರಿಕೆ

    ಮತ್ತೋರ್ವ ವ್ಯಕ್ತಿಯ ವಿಚಾರಣೆ: ಬುಧವಾರ ಡ್ರಗ್ಸ್ ಜಾಲಕ್ಕೆ ಸಂಬಂಧಿಸಿದಂತೆ ಮತ್ತೋರ್ವ ವ್ಯಕ್ತಿಯನ್ನು ಸಿಸಿಬಿ ವಿಚಾರಣೆ ನಡೆಸಿದೆ. ಮತ್ತೊಂದೆಡೆ ಮತ್ತೋರ್ವ ಆರೋಪಿ ಆದಿತ್ಯ ಆಳ್ವನಿಗಾಗಿ ಹಲವೆಡೆ ಶೋಧ ಮುಂದುವರೆದಿದೆ. ತನಿಖೆ ಚುರುಕುಗೊಳಿಸಿರುವ ಸಿಸಿಬಿ ಪೊಲೀಸರು ಸದ್ಯದಲ್ಲೇ ಇನ್ನಷ್ಟು ಜನರನ್ನು ವಶಕ್ಕೆ ಪಡೆಯುವ ಸಾಧ್ಯತೆಗಳಿವೆ.

    ಕರೊನಾ ನಿಯಂತ್ರಣದಲ್ಲಿ ಯಾವುದೇ ರಾಜಿಯಿಲ್ಲ : ಅಧಿಕಾರಿಗಳಿಗೆ ಸಿಎಂ ಬಿಎಸ್​ವೈ ಖಡಕ್ ಎಚ್ಚರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts