More

    ಸಿ.ಸಿ.ಪಾಟೀಲ ಅವರಿಂದ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ


    ಗದಗ:  2003ರಿಂದ ಆರಂಭವಾದ ಹಾಗೂ ಬಹುದಿನಗಳ ಕಾಲ ಜಟಿಲ ಸಮಸ್ಯೆಯಾಗಿ ಉಳಿದುಕೊಂಡಿದ್ದ ನಿವೇಶನ ಹಕ್ಕುಪತ್ರ ವಿತರಣೆಗೆ ಸಂಬಂಧಿಸಿದಂತೆ ಶಾಶ್ವತವಾದ ಪರಿಹಾರ ಕಲ್ಪಿಸುವಲ್ಲಿ ಯಶಸ್ವಿಯಾಗಿದ್ದು, ಕೃತಜ್ಞತೆ ಹಾಗೂ ಸಂತೃಪ್ತಿ ಭಾವ ಮೂಡಿದೆ ಎಂದು ಲೊಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಹೇಳಿದರು.

    ತಾಲೂಕಿನ ಲಕ್ಕುಂಡಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಗುರುವಾರದಂದು  ಆಶ್ರಯ ವಸತಿ ಯೋಜನೆಯಡಿ ನಿವೇಶನ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಿ ಅವರು ಮಾತನಾಡಿದರು.ನಿಗಮದಿಂದ 131 ಫಲಾನುಭವಿಗಳಿಗೆ ಹಕ್ಕು ಪತ್ರ ಬಂದಿವೆ. ಆ ಪೈಕಿ ಮೊದಲ ಹಂತದಲ್ಲಿ 93 ಹಕ್ಕು ಪತ್ರಗಳನ್ನು ವಿತರಿಸುತ್ತಿದ್ದೇವೆ. ಉಳಿದ 38 ಹಕ್ಕುಪತ್ರಗಳ ದಾಖಲೆ ಪರಿಶೀಲನೆ ನಡೆದಿದೆ. ನಿಗಮದಿಂದ ಇನ್ನೂ 33 ಹಕ್ಕುಪತ್ರಗಳನ್ನು ವಿತರಿಸುವುದು ಬಾಕಿಯಿದ್ದು, ಕೂಡಲೇ ಅವುಗಳ ವಿತರಣೆಗೆ ಕ್ರಮ ಜರುಗಿಸಲಾಗುವುದು. ಜೊತೆಗೆ ಹೊಸದಾಗಿ ಮತ್ತೆ 100 ನಿವೇಶನಗಳನ್ನು ಮಂಜೂರು ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದರು.
    2018ರಲ್ಲಿ ಶಾಸಕನಾಗಿ ಆ0iÉ್ಕುಯಾದ ನಂತರ ಲಕ್ಕುಂಡಿ ಗ್ರಾಮಕ್ಕೆ 47.72 ಕೋಟಿ ರೂ. ಅನುದಾನದಲ್ಲಿ ಕಿತ್ತೂರು ರಾಣಿ ಚನ್ನಮ್ಮಾ ವಸತಿ ಶಾಲೆಯ ನೂತನ ಕಟ್ಟಡ ನಿರ್ಮಾಣ, ದಾನಚಿಂತಾಮಣಿ ಅತ್ತಿಮಬ್ಬೆ ಸ್ಮಾರಕ ಸಮುದಾಯ ಭವನ ನಿರ್ಮಾಣ, ಲಕ್ಕುಂಡಿ-ಕಣಗಿನಹಾಳ ರಸ್ತೆ ಸುಧಾರಣೆ, ಲಕ್ಕುಂಡಿ ಗ್ರಾಮದಲ್ಲಿ ಕುಡಿಯುವ ನೀರು ಜಲಜೀವನ್ ಮಿಶನ್ ಕಾಮಗಾರಿ, ಸಿಸಿ ರಸ್ತೆ ನಿರ್ಮಾಣ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದರು.

    ಈಗಾಗಲೇ ನರಗುಂದ ಮತಕ್ಷೇತ್ರದ ಪ್ರತಿ ಗ್ರಾಮಗಳಲ್ಲಿ ನಾನು ಮಾಡಿದಂತಹ ಅಭಿವೃದ್ಧಿ ಕೆಲಸಗಳ ಫ್ಲೆಕ್ಸ್ ಹಾಕಿಸಿದ್ದೇನೆ. ನಮ್ಮ ಹತ್ತಿರ ಗ್ಯಾರಂಟಿ ಕಾರ್ಡ್ ಇಲ್ಲ. ನನ್ನ ಅಭಿವೃದ್ಧಿ ಕೆಲಸಗಳು ಹಾಗೂ ನಾನು ಮಾಡಿದ ಸಾಧನೆಯ ಕಾರ್ಡ್ಗಳನ್ನಿಟ್ಟುಕೊಂಡು ಮತಯಾಚಿಸುತ್ತೇನೆ. ನಾಳೆ ಲಕ್ಕುಂಡಿ ಗ್ರಾಮಕ್ಕೆ ಮತಕೇಳಲು ಬಂದಾಗ ನಾನು ಲಕ್ಕುಂಡಿ ಗ್ರಾಮಕ್ಕೆ ಯಾವ ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದೇನೆ ಅವುಗಳನ್ನು ಮುಂದಿಟ್ಟುಕೊಂಡು ನಿಮ್ಮ ಬಳಿ ಮತ ಕೇಳುತ್ತೇನೆ ಎಂದು ಹೇಳಿದರು.
    ಕಳೆದ ಕೆಲ ವರ್ಷಗಳ ಹಿಂದೆ ಕಾಡಿದಂತಹ ಪ್ರವಾಹ, ಕರೋನಾ ಮತ್ತೆ ಮರುಕಳಿಸದಿರಲಿ. ಬೇಸಿಗೆ ಸಂದರ್ಭದಲ್ಲಿ ವೈರಾಣುಗಳ ಹಾವಳಿ ಹೆಚ್ಚಿರುವುದರಿಂದ, ನಾಗರಿಕರು ಮುಂಜಾಗೃತೆಯಿಂದ ಆರೋಗ್ಯದ ಕಡೆಗೆ ಗಮನ ಹರಿಸಬೇಕು ಎಂದು ಮನವಿ ಮಾಡಿದರು.  

    ಹಿರಿಯರಾದ ದತ್ತಣ್ಣ ಜೋಶಿ ಮಾತನಾಡಿ, 20 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ನಿವೇಶನ ಹಂಚಿಕೆಯ ಸಮಸ್ಯೆಯನ್ನು ಸಚಿವ ಸಿ.ಸಿ. ಪಾಟೀಲ ಅವರು ಪರಿಹರಿಸಿ ವಿತರಣೆ ಮಾಡಿರುವುದು ಹೆಮ್ಮೆಯ ಸಂಗತಿಯಾಗಿದೆ. 47 ಕೋಟಿ ರೂ. ಅನುದಾನವನ್ನು ಲಕ್ಕುಂಡಿಯ ಅಭಿವೃದ್ಧಿಗೆ ವಿನಿಯೋಗಿಸಿದ್ದಾರೆ. ರಸ್ತೆ, ಸಮುದಾಯ ಭವನ, ದೇವಸ್ಥಾನ ಜೀರ್ಣೋದ್ಧಾರ ಹಾಗೂ ಸರ್ವ ಜನಾಂಗದ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದು ಕೊಂಡಾಡಿದರು.

    ಇದೇ ವೇಳೆ ಗ್ರಾಮಸ್ಥರು ಸಚಿವ ಸಿ.ಸಿ. ಪಾಟೀಲ ಅವರನ್ನು ಸನ್ಮಾನಿಸಿದರು. ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷೆ ಉಷಾ ದಾಸರ, ಗ್ರಾಪಂ ಅಧ್ಯಕ್ಷೆ ಲಲಿತಾ ಗದಗಿನ, ಉಪಾಧ್ಯಕ್ಷ ರೇವಣಸಿದ್ದಪ್ಪ ಮುಳಗುಂದ, ಪಿಡಿಒ ಶಿವಲೀಲಾ ಅಂಗಡಿ ಹಾಗೂ ಗ್ರಾಪಂ ಸದಸ್ಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts