More

    ಫೇಸ್ಬುಕ್ ಸಹಭಾಗಿತ್ವದಲ್ಲಿ ಶಿಕ್ಷಕರು, ವಿದ್ಯಾರ್ಥಿಗಳಿಗೆ ಸಿಬಿಎಸ್​​ಇ ಡಿಜಿಟಲ್ ಸುರಕ್ಷತಾ ಉಚಿತ ತರಬೇತಿ

    ನವದೆಹಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್ಇ), ಡಿಜಿಟಲ್ ಸುರಕ್ಷತೆ ಮತ್ತು ಆನ್‌ಲೈನ್ ಯೋಗಕ್ಷೇಮದ ಬಗ್ಗೆ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಮತ್ತು ವರ್ಧಿತ / ವರ್ಚುವಲ್ ರಿಯಾಲಿಟಿ ಕುರಿತು ಶಿಕ್ಷಕರ ತರಬೇತಿಯನ್ನು ನೀಡಲು ಫೇಸ್‌ಬುಕ್‌ದೊಂದಿಗೆ ಕೈಜೋಡಿಸಿದೆ.
    ಕರೊನಾವೈರಸ್ ಹೆಚ್ಚುತ್ತಿರುವ ಈ ಸಮಯದಲ್ಲಿ ಇ-ಲರ್ನಿಂಗ್, ಆನ್‌ಲೈನ್ ತರಗತಿಗಳಿಗೆ ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಇಂಟರ್ನೆಟ್ ಬಳಕೆಯಿಂದಾಗಿ ಆನ್‌ಲೈನ್ ಬೆದರಿಕೆ, ತಪ್ಪು ಮಾಹಿತಿ, ನಕಲಿ ಸುದ್ದಿ ಮತ್ತು ಇಂಟರ್ನೆಟ್ ವ್ಯಸನದ ಅಪಾಯವನ್ನು ತಂದೊಡ್ಡುತ್ತಿದೆ. ಈ ನಿಟ್ಟಿನಲ್ಲಿ, ಸಿಬಿಎಸ್‌ಇ ತನ್ನ ಅಧೀನದ ಶಾಲೆಗಳ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಉಚಿತ ಮತ್ತು ಸಮಗ್ರ ತರಬೇತಿ ಕಾರ್ಯಕ್ರಮವನ್ನು ಮೊದಲ ಹಂತದಲ್ಲಿ ಆಗಸ್ಟ್‌ನಿಂದ ನವೆಂಬರ್ ವರೆಗೆ ವರ್ಚುವಲ್ ಮೋಡ್‌ನಲ್ಲಿ ಪ್ರಾರಂಭಿಸಲು ಫೇಸ್‌ಬುಕ್ ಇಂಡಿಯಾದೊಂದಿಗೆ ಜಂಟಿ ಕಾರ್ಯಕೈಗೊಳ್ಳಲಿದೆ.

    ಇದನ್ನೂ ಓದಿ: ರಾಷ್ಟ್ರ ರಕ್ಷಣೆಗೆ ಪ್ರಾಣ ತ್ಯಾಗ ಮಾಡಲು ಸದಾ ಸಿದ್ಧರಾದ ಸಶಸ್ತ್ರ ಪಡೆಗಳ ಮನೋಸ್ಥೈರ್ಯ ಅನನ್ಯ : ಐಟಿಬಿಪಿ ಮುಖ್ಯಸ್ಥ ದೇಸ್ವಾಲ್

    ಭಾಗವಹಿಸುವವರು ಕೋರ್ಸ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಸಿಬಿಎಸ್ಇ ಮತ್ತು ಫೇಸ್​​ಬುಕ್​​​ನಿಂದ ಜಂಟಿ ಇ-ಪ್ರಮಾಣಪತ್ರವನ್ನು ಸ್ವೀಕರಿಸಲು ಅರ್ಹರಾಗುತ್ತಾರೆ. ತರಬೇತಿ ಕಾರ್ಯಕ್ರಮವು ಮೂರು ವಾರಗಳಾಗಿದ್ದು, 10ಸಾವಿರ ಶಿಕ್ಷಕರಿಗೆ ಆಗ್ಮೆಂಟೆಡ್ ರಿಯಾಲಿಟಿ ಬಗ್ಗೆ ತರಬೇತಿ ಮತ್ತು 10,000 ವಿದ್ಯಾರ್ಥಿಗಳಿಗೆ ಡಿಜಿಟಲ್ ಸುರಕ್ಷತೆ ಮತ್ತು ಯೋಗಕ್ಷೇಮದ ಬಗ್ಗೆ ತರಬೇತಿ ನೀಡಲಾಗುವುದು. ಡಿಜಿಟಲ್ ಸುರಕ್ಷತಾ ವಿಭಾಗದಡಿ ವಿದ್ಯಾರ್ಥಿಗಳಿಗೆ ಡಿಜಿಟಲ್ ಸುರಕ್ಷತೆ ಮತ್ತು ಇನ್‌ಸ್ಟಾಗ್ರಾಮ್ ಟೂಲ್‌ಕಿಟ್ ಬಗ್ಗೆ ತರಬೇತಿ ನೀಡಲಾಗುವುದು. ನೋಂದಣಿ ಪ್ರಕ್ರಿಯೆ ಜುಲೈ 6 ರಿಂದ 20 ರವರೆಗೆ ನಡೆಯಲಿದೆ. ವಿದ್ಯಾರ್ಥಿಗಳ ತರಬೇತಿ ಆಗಸ್ಟ್ 6 ರಿಂದ ಹಾಗೂ ಶಿಕ್ಷಕರ ಕಾರ್ಯಕ್ರಮವನ್ನು ಆಗಸ್ಟ್ 10 ರಂದು ಪ್ರಾರಂಭಿಸಲಾಗುವುದು
    ಇದಲ್ಲದೆ, ಎರಡನೇ ಹಂತದಲ್ಲಿ, ಸಿಬಿಎಸ್‌ಇ ಪ್ರತಿ ವಿಭಾಗದ 30,000 ವಿದ್ಯಾರ್ಥಿಗಳಿಗೆ ಡಿಜಿಟಲ್ ಸುರಕ್ಷತೆ ಮತ್ತು ಆಗ್ಮೆಂಟೆಡ್ ರಿಯಾಲಿಟಿ ಕುರಿತು ತರಬೇತಿ ಕಾರ್ಯಕ್ರಮವನ್ನು ಪರಿಚಯಿಸಲಿದೆ.  ತರಬೇತಿ ಕಾರ್ಯಕ್ರಮಗಳಿಗೆ ಶಾಲೆಗಳು ತಮ್ಮ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಹೆಸರನ್ನು
    www.cbseacademic.nic.in/fb ಅಥವಾ / facebookforeducation.html. ನಲ್ಲಿ
    ತಿಳಿಸಬೇಕು.

    ಗುರುಪೂರ್ಣಿಮೆ ಶುಭಾಶಯ ಕೋರಿದ ಪ್ರಧಾನಿ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts