More

    ಕಂಟೇನ್ಮೆಂಟ್ ವಲಯದ ವಿದ್ಯಾರ್ಥಿಗಳಿಗೆ ಪರೀಕ್ಷೆ: ಸಿಬಿಎಸ್ಸಿಗೆ ಬಗೆಹರಿಯದ ಗೊಂದಲ

    ನವದೆಹಲಿ: 10 ಮತ್ತು 12ನೇ ತರಗತಿಗಳಿಗೆ ರಾಷ್ಟ್ರವ್ಯಾಪಿ ಪರೀಕ್ಷೆಗಳನ್ನು ನಡೆಸಲು ಸಿದ್ಧವಾಗುತ್ತಿರುವ ಕೇಂದೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್​ಇ), ಕಂಟೇನ್ಮೆಂಟ್ ಪ್ರದೇಶಗಳಲ್ಲಿನ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದಿದ್ದರೆ ಏನು ಮಾಡಬೇಕೆಂಬ ಗೊಂದಲದಲ್ಲಿದೆ.
    13 ಸಾವಿರ ಶಾಲೆಗಳಲ್ಲಿ ಜುಲೈನಲ್ಲಿ ಪರೀಕ್ಷೆಗಳು ನಡೆಯಲಿವೆ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಘೋಷಿಸಿದೆ.

    ಇದನ್ನೂ ಓದಿ:  ಫೇಲಾದ ವಿದ್ಯಾರ್ಥಿಗಳಿಗೆ ಆನ್​ಲೈನ್/ ಆಫಲೈನ್ ಪರೀಕ್ಷೆ ನಡೆಸಲು ಸಿಬಿಎಸ್​​ಇ ಸೂಚನೆ

    ವಿದೇಶಗಳಲ್ಲಿರುವ ಸಿಬಿಎಸ್​​ಇ ಶಾಲೆಗಳ ಮಕ್ಕಳಿಗೆ ಪರೀಕ್ಷೆಗಳಿರುವುದಿಲ್ಲ. ಅಂಥ ವಿದ್ಯಾರ್ಥಿಗಳಿಗೆ ಸಮಾನವೆಂದು ಈ ವಿದ್ಯಾರ್ಥಿಗಳನ್ನು ಪರಿಗಣಿಸುವುದೂ ಒಂದು ಆಯ್ಕೆಯಾಗಿದೆ. ಆದರೂ ಇದು ಸರಳ ಸಮಸ್ಯೆಗಳಲ್ಲ, ಈ ಕುರಿತು ಸಂಪೂರ್ಣವಾಗಿ ಚರ್ಚಿಸಬೇಕಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
    ಒಂದು ವೇಳೆ ಸಿಬಿಎಸ್‌ಇ ಕಂಟೇನ್ಮೆಂಟ್ ವಲಯದ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಗಳಿಗೆ ಕರೆಯಲು ನಿರ್ಧರಿಸಿದರೆ ಇದಕ್ಕೆ ಕೇಂದ್ರ ಗೃಹ ಸಚಿವಾಲಯದ ಅನುಮತಿಯೂ ಬೇಕಾಗಬಹುದು.

    ಇದನ್ನೂ ಓದಿ: ಜುಲೈ 1ರಿಂದ ಸಿಬಿಎಸ್​​ಇ 12 ನೇ ತರಗತಿ ಪರೀಕ್ಷೆ 

    ದೆಹಲಿಯಂತಹ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯ ಶಾಲೆಗಳು ಮತ್ತು ಕೇಂದ್ರೀಯ ವಿದ್ಯಾಲಯಗಳು ಮತ್ತು ಜವಾಹರ್ ನವೋದಯ ವಿದ್ಯಾಲಯಗಳಂತಹ ಅನೇಕ ಶಾಲೆಗಳನ್ನು ಕ್ವಾರಂಟೈನ್ ಕೇಂದ್ರಗಳನ್ನಾಗಿ ಬಳಸಲಾಗುತ್ತಿದೆ ಎಂಬ ಅಂಶವನ್ನು ಕೆಲವು ಅಧಿಕಾರಿಗಳು ಒತ್ತಿ ಹೇಳಿದ್ದಾರೆ. ಪರೀಕ್ಷೆಗಳನ್ನು ನಡೆಸಲು, ಈ ಸಂಸ್ಥೆಗಳನ್ನು ಅವುಗಳ ನಿರ್ವಹಣಾ ಸಂಸ್ಥೆಗಳಿಗೆ ಹಿಂತಿರುಗಿಸಬೇಕಾಗುತ್ತದೆ. ಮಂಡಳಿ ಮತ್ತು ಸಚಿವಾಲಯವು ಈ ವಿಷಯಗಳನ್ನು ಗಮನಿಸಿದೆ. ಆದಾಗ್ಯೂ, ಅಂತಹ ಅಂಶಗಳ ಬಗ್ಗೆ ಅವಸರದಲ್ಲಿ ನಿರ್ಧಾರ ಕೈಕೊಳ್ಳಲು ಸಾಧ್ಯವಿಲ್ಲ. ಎಲ್ಲಾ ಅಂಶಗಳನ್ನು ಪರಿಗಣಿಸಲಾಗುತ್ತಿದೆ ಎಂದು ಅಧಿಕಾರಿ ಉಲ್ಲೇಖಿಸಿದ್ದಾರೆ.

    ಸಿಬಿಎಸ್​ಇ 10, 12 ತರಗತಿ ವಿದ್ಯಾರ್ಥಿಗಳು ಎಲ್ಲ ವಿಷಯಗಳಿಗೂ ಪರೀಕ್ಷೆ ಬರೆಯಬೇಕಿಲ್ಲ: 1ರಿಂದ 8ನೇ ತರಗತಿಯವರೆಲ್ಲ ಪಾಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts