More

    ಸೇನಾ ಅಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ : ಸಿಬಿಐ ತನಿಖೆ

    ನವದೆಹಲಿ : ಒಂದು ಪ್ರಮುಖ ಬೆಳವಣಿಗೆಯಲ್ಲಿ, ಸೇನಾ ಅಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ದುಷ್ಕೃತ್ಯಗಳು ಮತ್ತು ಭ್ರಷ್ಟಾಚಾರ ನಡೆದಿದೆ ಎನ್ನಲಾದ ಆರೋಪಗಳನ್ನು ತನಿಖೆ ಮಾಡುವಂತೆ ಭಾರತೀಯ ಸೇನೆ ಸಿಬಿಐಗೆ ಸೂಚಿಸಿದೆ. ಪಂಜಾಬ್‌ನ ಕಪುರ್ತಲ ಜಿಲ್ಲೆಯ ಸೇವಾ ಆಯ್ಕೆ ಕೇಂದ್ರವೊಂದರಲ್ಲಿ ನಡೆಯುತ್ತಿರುವ ಸೇನಾ ಅಧಿಕಾರಿಗಳ ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದ ಆರೋಪದ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಈ ಕ್ರಮ ಕೈಗೊಂಡಿದೆ.

    ಕಿರಿಯ ಅಧಿಕಾರಿಯೊಬ್ಬ ಆಯ್ಕೆ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆಸುತ್ತಿರುವ ಬಗ್ಗೆ ಇಂಡಿಯನ್​ ಆರ್ಮಿ ಹೆಡ್​ಕ್ವಾರ್ಟರ್ಸ್​ಗೆ ಬಂದ ದೂರಿನ ಮೇಲೆ ತನಿಖೆ ನಡೆಸಲಾಯಿತು. ಸೇನೆಯ ಅಧಿಕಾರಿಗಳೊಂದಿಗೆ ಹಲವು ನಾಗರೀಕರು ದುಷ್ಕೃತ್ಯಗಳಲ್ಲಿ ಶಾಮೀಲಾಗಿರುವ ಅನುಮಾನದ ಮೇರೆಗೆ ತನಿಖೆಯನ್ನು ಸಿಬಿಐಗೆ ವಹಿಸಿಕೊಡಲಾಗುತ್ತಿದೆ ಎನ್ನಲಾಗಿದೆ.

    ಇದನ್ನೂ ಓದಿ: ಹೆಚ್ಚಿದ ಕರೊನಾ : ಮದುವೆ ಸಮಾರಂಭಗಳಿಗೆ ಪೊಲೀಸರಾಗಲಿದ್ದಾರೆ ವಿಶೇಷ ಅತಿಥಿಗಳು !

    “ಸೇನಾ ಗುಪ್ತಚರ ಸಂಸ್ಥೆಯ ಪೂರ್ವಭಾವಿ ಕಾರ್ಯಾಚರಣೆಯ ಆಧಾರದ ಮೇಲೆ, ಆರ್ಮಿ ಸರ್ವೀಸಸ್ ಸೆಲೆಕ್ಷನ್ ಸೆಂಟರ್​​ ಒಂದರಲ್ಲಿ ಆಯ್ಕೆಯ ಕಾರ್ಯವಿಧಾನಗಳಲ್ಲಿ ದುಷ್ಕೃತ್ಯಗಳು ನಡೆದಿರುವ ಸಂಭವನೆ ಕಂಡುಬಂದಿದೆ. ತನಿಖೆಯ ವ್ಯಾಪ್ತಿಯು ನಾಗರಿಕರು ಸೇರಿದಂತೆ ಅನೇಕ ಏಜೆನ್ಸಿಗಳನ್ನು ಒಳಗೊಂಡಿರುವುದರಿಂದ, ಈ ಪ್ರಕರಣವನ್ನು ಕೇಂದ್ರ ತನಿಖಾ ದಳ(ಸಿಬಿಐ)ಕ್ಕೆ ಹಸ್ತಾಂತರಿಸಲು ಭಾರತೀಯ ಸೇನೆ ನಿರ್ಧರಿಸಿದೆ” ಎಂದು ಸೇನಾ ಅಧಿಕಾರಿಗಳು ಸುದ್ದಿಗಾರರಿಗೆ ತಿಳಿಸಿದ್ದಾರೆ.

    ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನಾರವಾನೆ ಅವರು, ಹಣಕಾಸಿನ ವಿಷಯದ ತಪ್ಪುಗಳು ಮತ್ತು ನೈತಿಕ ಅಪರಾಧಗಳ ಬಗ್ಗೆ ಜೀರೋ ಟಾಲರೆನ್ಸ್​ ವಹಿಸಲಾಗುವುದು ಎಂದು ಕಮಾಂಡರ್‌ಗಳಿಗೆ ಸ್ಪಷ್ಟವಾಗಿ ತಿಳಿಸಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಹೇಗ್ಹೇಗೋ ಮುಟ್ಟುತ್ತಾ ‘ಪರೀಕ್ಷೆ’ ನಡೆಸುತ್ತಿದ್ದ ನರ್ಸಿಂಗ್ ಇನ್ಸ್​​ಟಿಟ್ಯೂಟ್ ಮುಖ್ಯಸ್ಥನ ಬಂಧನ

    ‘ಕಾರು ಬಾಗಿಲು ಬಡಿದು ದೀದಿ ಕಾಲಿಗೆ ಗಾಯ’ : ಅಧಿಕೃತ ವರದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts