More

    ಹಾಥರಸ್​ ಕೇಸ್​: ಅಲಹಾಬಾದ್ ಹೈಕೋರ್ಟ್​ ನಿಗಾದಲ್ಲಿ ನಡೆಯಲಿದೆ ಸಿಬಿಐ ತನಿಖೆ ಎಂದ ಸುಪ್ರೀಂ ಕೋರ್ಟ್

    ನವದೆಹಲಿ: ದೇಶದ ಗಮನ ಸೆಳೆದ ಉತ್ತರ ಪ್ರದೇಶದ ಹಾಥರಸ್​ ಅತ್ಯಾಚಾರ, ಕೊಲೆ ಪ್ರಕರಣದ ಬಗ್ಗೆ ಸಿಬಿಐ ನಡೆಸುವ ತನಿಖೆಯ ಮೇಲೆ ಅಲಹಾಬಾದ್ ಹೈಕೋರ್ಟ್ ನಿಗಾವಹಿಸಲಿದೆ ಎಂದು ಸುಪ್ರೀಂ ಕೋರ್ಟ್​ ಮಂಗಳವಾರ ಹೇಳಿದೆ. ಕೇಸ್​ಗೆ ಸಂಬಂಧಿಸಿ ಸಂತ್ರಸ್ತೆಯ ಕುಟುಂಬದವರಿಗೆ ಮತ್ತು ಸಾಕ್ಷಿಗಳಿಗೆ ಭದ್ರತೆ ಒದಗಿಸುವುದರಿಂದ ಹಿಡಿದು ತನಿಖೆಯ ಪ್ರತಿಹಂತವನ್ನೂ ಕೋರ್ಟ್​ ಗಮನಿಸಲಿದೆ. ಕೇಸ್​ ಅನ್ನು ಎಲ್ಲ ದೃಷ್ಟಿಕೋನದಲ್ಲೂ ಗಮನಿಸಿ ತನಿಖೆ ನಡೆಸುವುದಕ್ಕೆ ತನಿಖಾ ಸಂಸ್ಥೆಗೆ ಸೂಚಿಸಲಾಗಿದ್ದು, ಅದರ ಮೇಲೆ ನಿಗಾವಹಿಸಲಾಗುತ್ತಿದೆ ಎಂದು ಮುಖ್ಯ ನ್ಯಾಯಮೂರ್ತಿ ಎಸ್​.ಎ.ಬೊಬ್ಡೆ ನೇತೃತ್ವದ ನ್ಯಾಯಪೀಠ ಹೇಳಿದೆ.

    ಕೆಲವು ಆ್ಯಕ್ಟಿವಿಸ್ಟ್​ಗಳು ಮತ್ತು ವಕೀಲರು ಸಲ್ಲಿಸಿದ್ದ ಅರ್ಜಿಗಳನ್ನು ಒಗ್ಗೂಡಿಸಿ ವಿಚಾರಣೆ ನಡೆಸಿದ ನ್ಯಾಯಪೀಠ, ಪ್ರಕರಣದ ತನಿಖೆ ಪೂರ್ಣಗೊಂಡ ಬಳಿಕವಷ್ಟೇ ಅದರ ವಿಚಾರಣೆ ಉತ್ತರ ಪ್ರದೇಶದಲ್ಲೇ ನಡೆಸಬೇಕೋ ಅಥವಾ ಹೊರಗೆ ನಡೆಸಬೇಕೋ ಎಂಬುದನ್ನು ತೀರ್ಮಾನಿಸಲಾಗುವುದು. ಪಿಐಎಲ್​ನಲ್ಲಿ ಉಲ್ಲೇಖವಾಗಿರುವ ಸಂತ್ರಸ್ತೆಯ ಹೆಸರನ್ನು ಡಿಲೀಟ್ ಮಾಡುವುದಕ್ಕೆ ಉತ್ತರ ಪ್ರದೇಶ ಸರ್ಕಾರದ ಮನವಿಯನ್ನು ಕೋರ್ಟ್ ಪರಿಗಣಿಸಿರುವುದಾಗಿ ಹೇಳಿದೆ.
    ಉತ್ತರ ಪ್ರದೇಶದಲ್ಲಿ ನ್ಯಾಯೋಚಿತ ವಿಚಾರಣೆ ಸಾಧ್ಯವಿಲ್ಲ ಮತ್ತು ಸಿಬಿಐ ತನಿಖೆಯ ಸ್ಥಿತಿಗತಿ ವರದಿಯನ್ನೂ ಅಲಹಾಬಾದ್ ಹೈಕೋರ್ಟ್​ಗೆ ಸಲ್ಲಿಸುವ ಕಾರಣ ಪ್ರಕರಣದ ವಿಚಾರಣೆಯಲ್ಲಿ ವಿಶ್ವಾಸ ಮೂಡದೆಂದು ಪಿಐಎಲ್​ಗಳು ಸುಪ್ರೀಂ ಕೋರ್ಟ್​ನಲ್ಲಿ ಸಲ್ಲಿಸಲ್ಪಟ್ಟಿದ್ದವು.

    ಇದನ್ನೂ ಓದಿ: ಲಕ್ಷ್ಮಿ ಬಾಂಬ್ ಚಲನಚಿತ್ರ ಬಿಡುಗಡೆಗೆ ತಡೆ: ಅಖಿಲಭಾರತ ಹಿಂದು ಮಹಾಸಭಾ ಆಗ್ರಹ

    ಹಾಥರಸ್​ನಲ್ಲಿ ಸೆಪ್ಟೆಂಬರ್ 14ರಂದು 19 ವರ್ಷದ ದಲಿತ ಯುವತಿಯ ಮೇಲೆ ಮೇಲ್ವರ್ಗದ ನಾಲ್ವರು ಅತ್ಯಾಚಾರವೆಸಗಿದ ಪ್ರಕರಣ ಬೆಳಕಿಗೆ ಬಂದಿತ್ತು. ನಂತರ ಆಕೆ ಚಿಕಿತ್ಸೆ ಫಲಕಾರಿಯಾಗದೆ ಸೆಪ್ಟೆಂಬರ್ 29ರಂದು ದೆಹಲಿಯ ಸಫ್ದರ್​ಜಂಗ್​ ಹಾಸ್ಪಿಟಲ್​ನಲ್ಲಿ ಮೃತಪಟ್ಟಿದ್ದಳು. ಸೆಪ್ಟೆಂಬರ್ 30ರ ರಾತ್ರಿ ಆಕೆಯ ಮನೆಯ ಸಮೀಪವೇ ಅಂತ್ಯಸಂಸ್ಕಾರ ನಡೆದಿತ್ತು. ತರಾತುರಿಯಲ್ಲಿ ಅಂತ್ಯಸಂಸ್ಕಾರ ನಡೆಸುವಂತೆ ಪೊಲೀಸರು ಬಲವಂತ ಮಾಡಿದ್ದರು ಎಂಬ ಆರೋಪವೂ ವ್ಯಕ್ತವಾಗಿದೆ. (ಏಜೆನ್ಸೀಸ್)

    ಸುಸೂತ್ರವಾಗಿ ನಡೆದ ದಸರಾ; ಹರಕೆ ತೀರಿಸಿದ ರೋಹಿಣಿ ಸಿಂಧೂರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts