More

    ಸಿಬಿಐನಿಂದ ವಿಡಿಯೋಕಾನ್ ಮುಖ್ಯಸ್ಥ ವೇಣುಗೋಪಾಲ್ ಧೂತ್ ಬಂಧನ

    ನವದೆಹಲಿ: ಐಸಿಐಸಿಐ ಬ್ಯಾಂಕ್ ಮನಿ ಲಾಂಡರಿಂಗ್ ಪ್ರಕರಣದಲ್ಲಿ ವಿಡಿಯೋಕಾನ್ ಸಮೂಹದ ಸಂಸ್ಥಾಪಕ ವೇಣುಗೋಪಾಲ್ ಧೂತ್ ಅವರನ್ನು ಸಿಬಿಐ ಸೋಮವಾರ ಬಂಧಿಸಿದೆ.

    ಐಸಿಐಸಿಐ ಬ್ಯಾಂಕ್‌ನ ಮಾಜಿ ಸಿಇಒ ಮತ್ತು ಎಂಡಿ ಚಂದಾ ಕೊಚ್ಚರ್ ಮತ್ತು ಅವರ ಪತಿ ದೀಪಕ್ ಕೊಚ್ಚರ್ ಅವರನ್ನು ಸಿಬಿಐ ಈಗಾಗಲೇ ಕಸ್ಟಡಿಗೆ ತೆಗೆದುಕೊಂಡಿದೆ. ಇದೀಗ 71 ವರ್ಷದ ಧೂತ್ ಅವರನ್ನು ಮುಂಬೈನಲ್ಲಿ ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.

    ಚಂದಾ ಕೊಚ್ಚರ್​ ಐಸಿಐಸಿಐ ಬ್ಯಾಂಕ್​​ನ ಸಿಇಒ ಆಗಿದ್ದಾಗ 2009-2011ರ ಅವಧಿಯಲ್ಲಿ ವಿಡಿಯೋಕಾನ್​ಗೆ ಸುಮಾರು 3,250 ಕೋಟಿ ರೂ. ಅಕ್ರಮ ಸಾಲ ನೀಡಿದ್ದರು. ಈ ಸಾಲದ ಮೊತ್ತವನ್ನು ಚಂದಾ ಅವರು ಐಸಿಐಸಿಐ ವಾರ್ಷಿಕ ಲೆಕ್ಕಾಚಾರದಿಂದ ಗೌಪ್ಯವಾಗಿರಿಸಿಟ್ಟಿದ್ದರು. ಅದಾದ ಬಳಿಕ ವಿಡಿಯೋಕಾನ್​ ದೀಪಕ್​ ಕೊಚ್ಚಾರ್​ ಅವರ ಸಂಸ್ಥೆಯಲ್ಲಿ ಸುಮಾರು 64 ಕೋಟಿ ರೂ.ಹೂಡಿಕೆ ಮಾಡಿತ್ತು. ಹಾಗೇ ಮ್ಯಾಟಿಕ್ಸ್​ ಫರ್ಟಿಲೈಸರ್​ ಕೂಡ 325 ಕೋಟಿ ರೂ. ಹೂಡಿಕೆ ಮಾಡಿತ್ತು.

    ಖಾಸಗಿಯವರ ಗುತ್ತಿಗೆ ಅವಧಿ ಮುಕ್ತಾಯ, ಕುಣಿಗಲ್​ ಸ್ಟಡ್​ ಫಾರ್ಮ್ ಹೊಣೆ ಕೇಂದ್ರ ಸರ್ಕಾರವೇ ವಹಿಸಿಕೊಳ್ಳಲಿ: ಎಸ್​ಪಿಎಂ ಮನವಿ

    ದೆಹಲಿಗೆ ತೆರಳಿದ ಸಿಎಂ: ಎಲೆಕ್ಷನ್​ ತಯಾರಿ, ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts