More

    ಕಾವೇರಿ ನೀರು ಖಂಡಿಸಿ ಪ್ರತಿಭಟನೆ; ಇಂದು ತಮಿಳಿನ ಲಿಯೋ ಚಿತ್ರ ತೆರೆಗೆ; ಕರ್ನಾಟಕದಲ್ಲಿ ರಿಲೀಸ್​ ಆಗೋಕೆ ಬಿಡೋದಿಲ್ಲ ಎಂದು ವಾಟಾಳ್​​ ಎಚ್ಚರಿಕೆ..!

    ತಮಿಳುನಾಡು-ಕರ್ನಾಟಕ ಗಡಿಭಾಗದ ಅತ್ತಿಪಲ್ಲಿಯಲ್ಲಿಯೂ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅದರಂತೆ ಕೃಷ್ಣಗಿರಿ ಜಿಲ್ಲೆ ಹೊಸೂರಿನ ವಟ್ಟಾಚಿಯಾರ್ ಕಚೇರಿಗೆ ಮುತ್ತಿಗೆ ಹಾಕಿ ಕಾವೇರಿ ನೀರು ಕೇಳುತ್ತಿರುವ ತಮಿಳುನಾಡು ಸರ್ಕಾರದ ವಿರುದ್ಧ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಲು ಯತ್ನಿಸಿದವು. ನಂತರ ಕರ್ನಾಟಕ-ತಮಿಳು ಗಡಿಯ ಅತ್ತಿಪಲ್ಲಿಯಲ್ಲಿ ಪೊಲೀಸರು ತಡೆದು ಬಂಧಿಸಿದರು.


    ಇದೀಗ ರ್ನಾಟಕದಲ್ಲಿ ನಟ ವಿಜಯ್ ಅಭಿನಯದ ‘ಲಿಯೋ’ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದು ಸಾರ್ವಜನಿಕವಾಗಿ ಎಚ್ಚರಿಕೆ ನೀಡಿದ್ದಾರೆ.
    ಅದರಲ್ಲೂ ಕನ್ನಡ ಪರ ಹೋರಾಟಗಾರ ಹಾಗೂ ಕನ್ನಡ ಸಂಘಟನೆಗಳ ಸಂಯುಕ್ತ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಹಲವು ಪ್ರತಿಭಟನೆಗಳು ನಡೆಯುತ್ತಿದ್ದು, ಇಂದು ಚಿತ್ರ ತೆರೆ ಕಾಣಲಿದೆ.

    ಹಾಗಿದ್ರೆ ಕನ್ನಡ ಪರ ಹೋರಾಟಗಾರರ ಪ್ರತಿಭಟನೆ ಮತ್ತಷ್ಟು ತೀವ್ರಗೊಳ್ಳುತ್ತ ಎಂದು ಕಾದು ನೋಡ ಬೇಕಿದೆ. ತಮಿಳಿನ ಚಿತ್ರ ಕರ್ನಾಟಕದಲ್ಲಿ ತೆರೆ ಕಾಣಲಿದ್ಯಾ ಅನ್ನೋ ಪ್ರಶ್ನೆ ಮೂಡಿದೆ.


    ಕನ್ನಡ ಪರ ಹೋರಾಟಗಾರ ಹಾಗೂ ಕನ್ನಡ ಸಂಘಟನೆಗಳ ಸಂಯುಕ್ತ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಹಲವು ಪ್ರತಿಭಟನೆಗಳು ನಡೆಯುತ್ತಿವೆ. ಕಳೆದ ತಿಂಗಳು ಕರ್ನಾಟಕದಾದ್ಯಂತ ಬಂದ್ ನಡೆಸಿದ್ದರು. ಆ ಬಳಿಕ ತಮಿಳುನಾಡಿಗೆ ನೀರು ಬಿಡುವ ಮಂಡ್ಯ ಜಿಲ್ಲೆಯ ಕೆಆರ್‌ಆರ್‌ ಅಣೆಕಟ್ಟೆಗೆ (ಕೃಷ್ಣ ರಾಜಸಾಗರ) ಮುತ್ತಿಗೆ ಹಾಕಿದರು.


    ಮಿಳುನಾಡಿಗೆ ಕಾವೇರಿ ನೀರು ಬಿಡುವಂತೆ ರೈತ ಸಂಘಟನೆಗಳು ಹಾಗೂ ಕನ್ನಡಪರ ಸಂಘಟನೆಗಳು ನಿರಂತರ ಪ್ರತಿಭಟನೆ ನಡೆಸುತ್ತಿವೆ. ಮಂಡ್ಯ, ಬೆಂಗಳೂರು ಮತ್ತು ಕರ್ನಾಟಕ ಒಂದರ ಹಿಂದೆ ಒಂದರಂತೆ ಬಂದ್ ಪ್ರತಿಭಟನೆಗಳನ್ನು ನಡೆಸಿತ್ತು. ಇದೀಗ ತಮಿಳಿನ ಚಿತ್ರ ಕರ್ನಾಟಕದಲ್ಲಿ ರಿಲೀಸ್​​ ಆಗೋಕೆ ಬಿಡೋದಿಲ್ಲ ಎಂದು ವಾಟಾಳ್​​ ಎಚ್ಚರಿಕೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts