More

    ಅಲಯನ್ಸ್ ವಿವಿ ವಿಶ್ರಾಂತ ಕುಲಪತಿ ಮಧುಕರ್ ಅಂಗೂರ್ ವಿರುದ್ಧ ಪ್ರಕರಣ ರದ್ದು

    ಬೆಂಗಳೂರು : ಅಲಯನ್ಸ್ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಮಧುಕರ್ ಜಿ ಅಂಗೂರ್ ವಿರುದ್ಧ ಹಣ ದುರ್ಬಳಕೆ ತಡೆ ಕಾಯ್ದೆಯಡಿ ಜಾರಿ ನಿರ್ದೇಶನಾಲಯ (ಇ.ಡಿ)ಹೂಡಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿದೆ.


    ತಮ್ಮ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿದ್ದ ಮಧುಕರ್ ಅಂಗೂರ್ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ಪೀಠ ಜಾರಿ ನಿರ್ದೇಶನಾಲಯ ವಿರುದ್ಧದ ಪವನ್ ದಿಬ್ಬೂರ್ ಪ್ರಕರಣವನ್ನು ಆಧರಿಸಿ ಈ ಆದೇಶ ನೀಡಿದೆ.


    ಜಾರಿ ನಿರ್ದೇಶನಾಲಯವು ಅಗತ್ಯವಿದ್ದರೆ ಸುಪ್ರೀಂಕೋರ್ಟ್‌ನಲ್ಲಿ ಮರು ಪರಿಶೀಲನಾ ಅರ್ಜಿಯನ್ನು ಸಲ್ಲಿಸಬಹುದು ಎಂದು ನ್ಯಾಯಾಲಯ ಹೇಳಿದೆ.
    ತಮ್ಮ ಕಕ್ಷಿದಾರರ ವಿರುದ್ಧದ ಆರೋಪಗಳು ಪಿಎಂಎಲ್ಎ ಕಾಯ್ದೆಯ ಶೆಡ್ಯೂಲ್ಡ್ ಪಟ್ಟಿಯಲ್ಲಿ ಇಲ್ಲ ಹಾಗೂ ಪಿಎಂಎಲ್ಎ ಅನ್ವಯ ಪ್ರಕರಣವನ್ನು ಮುಂದುವರಿಸುವಂತಿಲ್ಲ ಎಂದು ವಾದ ಅರ್ಜಿದಾರರ ಪರ ವಕೀಲರು ಮಂಡಿಸಿದ್ದರು.


    ಅರ್ಜಿದಾರರ ವಾದವನ್ನು ಗಂಭೀರವಾಗಿ ತಳ್ಳಿಹಾಕದೆ, ಪವನ್ ದಿಬ್ಬೂರ್ ಪ್ರಕರಣದಲ್ಲಿ ನೀಡಿರುವ ತೀರ್ಪು ಮರು ಪರಾಮರ್ಶೆ ಕೋರಿ ಸುಪ್ರೀಂಕೋರ್ಟ್‌ನಲ್ಲಿ ಮರು ಪರಿಶೀಲನಾ ಅರ್ಜಿ ದಾಖಲಿಸಲಾಗಿದೆ ಎಂದು ಪ್ರತಿಯಾಗಿ ಪ್ರತಿವಾದಿ ವಕೀಲರು ಹೇಳಿದ್ದರು.


    ಪ್ರಕರಣದ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಐಪಿಸಿ ಸೆಕ್ಷನ್ 120ಬಿ ಆರೋಪ ಹೊರತುಪಡಿಸಿ ಇತರೆ ಅರೋಪಗಳು ಪಿಎಂಎಲ್ಎ ಕಾಯ್ದೆಯ ಶೆಡ್ಯೂಲ್ಡ್ ಅಪರಾಧಗಳ ಪಟ್ಟಿಯಲ್ಲಿ ಬರುವುದಿಲ್ಲ. ಆದ್ದರಿಂದ ಸುಪ್ರೀಂಕೋರ್ಟ್ ತೀರ್ಪು ನೀಡಿರುವಂತೆ ಪ್ರಕರಣ ಊರ್ಜಿತವಾಗುವುದಿಲ್ಲ. ಹೀಗಾಗಿ ಅದನ್ನು ಆಧರಿಸಿ ಪ್ರಕರಣವನ್ನು ರದ್ದುಪಡಿಸಲಾಗುತ್ತಿದೆ ಎಂದು ಪೀಠ ಆದೇಶಿಸಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts