More

    ರಸ್ತೆಯಲ್ಲಿ ನಮಾಜ್ ಮಾಡಿದ 2,000 ಜನರ ವಿರುದ್ಧ ಪ್ರಕರಣ ದಾಖಲು!

    ಲಕ್ನೋ: ಕಳೆದ ವಾರ ಈದ್‌ನಂದು ಈದ್ಗಾದ ಹೊರಗಿನ ರಸ್ತೆಯಲ್ಲಿ ಅನುಮತಿಯಿಲ್ಲದೆ ನಮಾಜ್ ಸಲ್ಲಿಸಿದ್ದಕ್ಕಾಗಿ ಮೂರು ಎಫ್‌ಐಆರ್‌ಗಳಲ್ಲಿ 2,000ಕ್ಕೂ ಹೆಚ್ಚು ಜನರನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಅನುಮತಿ ಇಲ್ಲದೆ ರಸ್ತೆಯಲ್ಲಿ ನಮಾಝ್ ಮಾಡಿದ ಆರೋಪದಲ್ಲಿ ಉತ್ತರ ಪ್ರದೇಶ ಪೊಲೀಸರು ಆಲಿಘರ್‌ ಮತ್ತು ಕಾನ್ಪುರ್‌ನಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ದೂರು ದಾಖಲಿಸಿದ್ದಾರೆ. “ನಮಾಜ್ ಸಲ್ಲಿಸುವ ಜನರನ್ನು ವಿಡಿಯೋ ಆಧಾರದ ಮೇಲೆ ಗುರುತಿಸಲಾಗುವುದು, ನಂತರ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಇದನ್ನೂ ಓದಿ: ಬದನೆಕಾಯಿ ಬೆಳೆಯಲು ಇನ್ಫೋಸಿಸ್ ಉದ್ಯೋಗ ತೊರೆದು ರೈತನಾದ ಟೆಕ್ಕಿ; 40,000 ಸಾವಿರ ರೂ. ಸಂಬಳಕ್ಕಿಂತ ದುಪ್ಪಟ್ಟು ಹಣ ಗಳಿಕೆ!

    ಆಲಿಘರ್‌ ಜಿಲ್ಲೆಯ ಡೆಲ್ಲಿ ಗೇಟ್‌ ಮತ್ತು ಕೊತ್ವಾಲಿ ಪೊಲೀಸ್‌ ಠಾಣೆಗಳಲ್ಲಿ ಹಾಗೂ ಕಾನ್ಪುರದ ಬಬು ಪುರ್ವ ಮತ್ತು ಬಜಾರಿಯಾ ಪೊಲೀಸ್ ಠಾಣೆಗಳಲ್ಲಿ ಎಪ್ರಿಲ್‌ 22 ರಂದು ಸೆಕ್ಷನ್‌ 144 ಉಲ್ಲಂಘನೆ ಮತ್ತು ರಸ್ತೆಗೆ ಅಡ್ಡಿಯುಂಟು ಮಾಡಿದ ತಪ್ಪಿಗಾಗಿ ಪ್ರಕರಣ ದಾಖಲಿಸಲಾಗಿದೆ. ಸೆಕ್ಷನ್‌ 144 ಇರುವ ಹೊರತಾಗಿಯೂ ಹಲವು ಜನರು ರಸ್ತೆಯಲ್ಲಿ ಕುಳಿತಿದ್ದರು. ನಂತರ ಪೊಲೀಸರು ಅವರನ್ನು ತೆರವುಗೊಳಿಸಿದ್ದರು ಎಂದು ಆಲಿಘರ್‌ ಪೊಲೀಸ್‌ ವರಿಷ್ಠಾಧಿಕಾರಿ ಕುಲದೀಪ್‌ ಸಿಂಗ್‌ ಗುಣವತ್‌ ಹೇಳಿದ್ದಾರೆ.

    ಇದನ್ನೂ ಓದಿ: 6 ಪತ್ನಿಯರ ಜತೆ ಮಲಗಲು ಹಾಸಿಗೆಗಾಗಿ 81 ಲಕ್ಷ ರೂ. ಖರ್ಚು ಮಾಡಿದ ಭೂಪ!
    ಈದ್‌ ಸಂದರ್ಭ ಮಸೀದಿಗಳಲ್ಲಿ ಮಾತ್ರ ನಮಾಜ್ ಸಲ್ಲಿಸಬೇಕು ಎಂದು ರಾಜ್ಯ ಸರ್ಕಾರ ಸೂಚಿಸಿತ್ತಲ್ಲದೆ ಬ್ಲಾಕ್‌ ಮತ್ತು ಜಿಲ್ಲಾ ಮಟ್ಟದಲ್ಲಿ ಶಾಂತಿ ಸಮಿತಿ ಸಭೆಗಳನ್ನೂ ನಡೆಸಿತ್ತು. ನಮಾಝ್ ನಡೆದ ಸ್ಥಳಗಳಲ್ಲಿನ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಸಂಗ್ರಹಿಸುತ್ತಿದ್ದಾರೆ. ಕಾನ್ಪುರದಲೂ ಪ್ರಕರಣ ದಾಖಲಾಗಿದೆ.

    ಇದನ್ನೂ ಓದಿ: ಪೋರ್ನ್​ ಸ್ಟಾರ್​ ಆಗಿರುವುದು ದೇವರ ಇಚ್ಛೆ! ಶಿಕ್ಷಕಿ ಹುದ್ದೆ ತೊರೆದು ನೀಲಿತಾರೆಯಾದ ಟಿಲಿಯಾ ಬೋಲ್ಡ್​ ಹೇಳಿಕೆ

    ಈದ್ಗಾದ ಹೊರಭಾಗದ ರಸ್ತೆಯಲ್ಲಿ ಕೆಲವರು ಈದ್ ಪ್ರಾರ್ಥನೆ ಸಲ್ಲಿಸಲು ತಡವಾಗಿ ಬಂದಿದ್ದರಿಂದ ಮತ್ತು ಆವರಣದೊಳಗೆ ಸ್ಥಳಾವಕಾಶವಿಲ್ಲ ಎಂದು ಅವರು ಹೇಳಲಾಗಿತ್ತು. ಹೀಗಾಗಿ ರಸ್ತೆಯಲ್ಲಿಯೇ ನಮಾಜ್​​ ಮಾಡಿದ್ದಾರೆ ಎನ್ನಲಾಗುತ್ತಿದೆ.

    ಖರ್ಗೆ ರಾಜ್ಯ, ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್‌ಗೆ ನಾಯಕರಾಗಬೇಕು..ಖಳನಾಯಕನಾಗಬಾರದು:ಕೆ.ಎಸ್.ಈಶ್ವರಪ್ಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts