More

    ‘ಯಾವುದಕ್ಕೂ ಜತೆಗೊಂದು ಸುತ್ತಿಗೆಯಿರಲಿ…’ ಜನರಿಗೆ ಮುಂಬೈ ಪಾಲಿಕೆ ಸಲಹೆ…..!

    ಮುಂಬೈ: ದೇಶದ ಕರಾವಳಿಯಲ್ಲಿ ನಿಸರ್ಗ ಚಂಡಮಾರುತದ ಅಬ್ಬರ ಮುಂದುವರಿದಿದೆ. ಬುಧವಾರ ಮಧ್ಯಾಹ್ನದ ವೇಳೆಗೆ ಮುಂಬೈ ಮಹಾನಗರಕ್ಕೆ ಅಪ್ಪಳಿಸಿ ಭಾರಿ ಅನಾಹುತ ಉಂಟುಮಾಡಿದೆ.

    ಇದಕ್ಕೂ ಮುನ್ನ ಮುಂಬೈ ಮಹಾನಗರ ಪಾಲಿಕೆ ಹಲವು ಮುನ್ನೆಚ್ಚರಿಕೆಗಳನ್ನು ನೀಡಿತ್ತು. ಯಾವುದನ್ನು ಮಾಡಬೇಕು, ಯಾವುದನ್ನು ಂಆಡಬಾರದು ಎಂಬುದರ ಪಟ್ಟಿ ನೀಡಿ ಜನರಲ್ಲಿ ಅರಿವು ಮೂಡಿಸಿತ್ತು.

    ಅವುಗಳಲ್ಲಿ ಮುಖ್ಯವಾಗಿ ಮನೆಯಲ್ಲೇ ಇರಿ, ಬಾಗಿಲುಗಳನ್ನು ಭದ್ರವಾಘಿ ಹಾಕಿಕೊಳ್ಳಿ, ಮನೆಗಳ ಕಿಟಕಿ ಬಳಿ ನಿಲ್ಲಬೇಡಿ. ಎಲ್ಲಕ್ಕೂ ಪ್ರಮುಖವಾದ ಅಂಶವೆಂದರೆ, ಕುಡಿಯುವ ನೀರನ್ನು ಸಂಗ್ರಹಿಸಿಕೊಟ್ಟು ಕೊಳ್ಳಿ ಎಂದು ಹೇಳಿತ್ತು.

    ಇದನ್ನೂ ಓದಿ; ಧಮ್​ ಎಳೆಯೋದಕ್ಕೆ ಈಕೆಗೆ ದಿನಕ್ಕೆ 1.5 ಲಕ್ಷ ರೂ. ಸಂಬಳ….! ಸೋಷಿಯಲ್​ ಮೀಡಿಯಾದಿಂದ ಆದ್ಳು ಬ್ರಾಂಡ್​ ಅಂಬಾಸಿಡರ್​ 

    ಒಂದು ವೇಳೆ ಪ್ರವಾಹದ ಸಮಯದಲ್ಲಿ ಹೊರಗೆ ಕಾರಿನಲ್ಲಿ ಹೋಗಬೇಕಾದ ಸಂದರ್ಭ ಬಂದರೆ, ಅಥವಾ ಈಗಾಗಲೇ ವಾಹನದಲ್ಲಿ ಸಂಚರಿಸುತ್ತಿದ್ದರೆ ಯಾವುದಕ್ಕೂ ಸುತ್ತಿಗೆ ಅಥವಾ ಅಂಥದ್ದೊಂದು ವಸ್ತುವೊಂದನ್ನು ಜತೆಗಿಟ್ಟಿಕೊಂಡಿರಿ ಎಂದೂ ಹೇಳಿತ್ತು. ಗಾಳಿ, ಮಳೆಯಿಂದಾಗಿ ಕಾರು ಅಥವಾ ವಾಹನದ ಬಾಗಿಲುಗಳು, ಜಾಮ್​ ಆದರೆ, ತೆರೆಯಲು ಸಾಧ್ಯವಾಗದಿದ್ದಲ್ಲಿ ಕಾರಿನ ಗಾಜು ಒಡೆದು ಹೊರಬರಲು ಬೇಕಾಗುತ್ತದೆ ಎಂದು ಸಲಹೆ ನೀಡಿತ್ತು.

    ಇದನ್ನೂ ಓದಿ; ಲಿಪ್​ಸ್ಟಿಕ್​ ಇಂಡೆಕ್ಸ್​; ಅರ್ಥಶಾಸ್ತ್ರದ ಸಿದ್ಧಾಂತವನ್ನೇ ಬುಡಮೇಲಾಗಿಸಿದ ಕರೊನಾ

    ಮುನ್ನೆಚ್ಚರಿಕೆ ಕ್ರಮವಾಗಿ ಮುಂಬೈನಲ್ಲಿ ನಿಷೇಧಾಜ್ಞ ಜಾರಿಗೊಳಿಸಲಾಗಿದೆ. 40 ಸಾವಿರಕ್ಕೂ ಅಧಿಕ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಎನ್​ಡಿಆರ್​ಎಫ್​ನ ಸಿಬ್ಬಂದಿ ಯಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ವಿಲೀನ ಕಾಲವೂ ಮುಗೀತು… ಶುರುವಾಗಿದೆ ಖಾಸಗೀಕರಣ ಪ್ರಕ್ರಿಯೆ; ಮಾರಾಟಕ್ಕಿವೆ ಮೂರು ಸರ್ಕಾರಿ ಬ್ಯಾಂಕ್​ಗಳು…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts