More

    VIDEO: ಮುಂಬೈಯನ್ನು ನಲುಗಿಸುತ್ತಿದೆ ‘ನಿಸರ್ಗ’; ಎಲ್ಲ ಕಡೆ ಕಟ್ಟೆಚ್ಚರ, ಸೆಕ್ಷನ್​ 144 ಜಾರಿ, ವಿಪತ್ತು ಎದುರಿಸಲು ಸಿದ್ಧತೆ

    ಮುಂಬೈ: ನಿಸರ್ಗ ಚಂಡಮಾರುತಕ್ಕೆ ಮುಂಬೈ ನಲುಗುತ್ತಿದೆ. ಕಳೆದ 6ಗಂಟೆಗಳಲ್ಲಿ ಸೈಕ್ಲೋನ್​ 13 ಕಿ.ಮೀ.ವೇಗದಲ್ಲಿ ಚಲಿಸಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಸದ್ಯ ಚಂಡಮಾರುತ ಅಲಿಬಗ್​ನಿಂದ 140 ಕಿ.ಮೀ ದೂರ ಹಾಗೂ ಮುಂಬೈನಿಂದ 190 ಕಿಲೋಮೀಟರ್​ ದೂರದಲ್ಲಿದ್ದು, ಮಧ್ಯಾಹ್ನ 1-3ಗಂಟೆ ಹೊತ್ತಲ್ಲಿ 110ರಿಂದ-120 ಕಿ.ಮೀ. ವೇಗ ಹೆಚ್ಚಿಸಿಕೊಳ್ಳಲಿದೆ. ಹಾಗೇ ಭೂಕುಸಿತದಂತಹ ಅನಾಹುತ ಸೃಷ್ಟಿಸಬಹುದು ಎಂದು ಮುಂಬೈ ಹವಾಮಾನ ಇಲಾಖೆ ಮುಖ್ಯಸ್ಥ ಕೆ.ಎಸ್​. ಹೊಸಾಲಿಕರ್​ ತಿಳಿಸಿದ್ದಾರೆ. ಇದನ್ನೂ ಓದಿ: ಕರೊನಾಘಾತದ ನಡುವೆಯೇ 100ಕಿ.ಮೀ ವೇಗದಲ್ಲಿ ನುಗ್ಗುತಿದೆ ‘ನಿಸರ್ಗ’: ಮುಂಬೈನಲ್ಲಿ ನಡುಕ

    ಚಂಡಮಾರುತದ ಪ್ರಭಾವದಿಂದ ಮುಂಬೈನ ಸಮುದ್ರದಲ್ಲಿ ಅಲೆಗಳ ಅಬ್ಬರ ಜೋರಾಗಿದೆ. ಇಂದು ಬೆಳಗ್ಗೆ 10.14ರ ಹೊತ್ತಿಗೆ ಸುಮಾರು 4.26 ಮೀಟರ್​ ಎತ್ತರದ ಅಲೆ ಅಪ್ಪಳಿಸಿದೆ. ನಿಸರ್ಗ ಮಹಾರಾಷ್ಟ್ರದ ಉತ್ತರ ಕರಾವಳಿಯನ್ನು ತಲುಪಿದ ಬೆನ್ನಲ್ಲೇ ಮುಂಬೈನಲ್ಲಿ ವಿಪರೀತ ಮಳೆಯಾಗುತ್ತಿದೆ. ಜನಜೀವನ ಅಸ್ತವ್ಯಸ್ತಗೊಂಡಿದೆ. ಕರಾವಳಿ ಪ್ರದೇಶಗಳಲ್ಲಿ ಮೀನುಗಾರಿಕೆಗೆ ತೆರಳದಂತೆ ಸೂಚನೆ ನೀಡಲಾಗಿದೆ. ಎಲ್ಲ ರೀತಿಯ ಹಡಗುಗಳ ಸಂಚಾರ ಸ್ಥಗಿತಗೊಂಡಿದೆ.

    ಮುಂಬೈನಿಂದ ಹೊರಡಬೇಕಿದ್ದ ಮತ್ತು ನಗರಕ್ಕೆ ತಲುಪಬೇಕಿದ್ದ ಎಲ್ಲ ವಿಶೇಷ ರೈಲುಗಳನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ. ಅಲಿಬಗ್​​ನಲ್ಲಿ ಭೂಕುಸಿತವಾಗುವ ಸಾಧ್ಯತೆ ಬಹುತೇಕ ನಿಶ್ಚಿತವಾಗಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.

    ಮುಂಬೈನಿಂದ ಹೊರಡಬೇಕಿದ್ದ ಐದು ವಿಶೇಷ ರೈಲುಗಳ ಸಮಯವನ್ನು ಬದಲಿಸಲಾಗಿದೆ ಹಾಗೂ ಮೂರು ರೈಲುಗಳ ಮಾರ್ಗ ಬದಲಾವಣೆ ಮಾಡುವ ಬಗ್ಗೆ ಯೋಚನೆ ಮಾಡಲಾಗುತ್ತಿದೆ ಎಂದು ಕೇಂದ್ರ ರೈಲ್ವೆ ಇಲಾಖೆ ಇಂದು ತಿಳಿಸಿದೆ. ಚಂಡಮಾರುತ ವಿಮಾನ ಸಂಚಾರದ ಮೇಲೆಯೂ ಪ್ರಭಾವ ಬೀರಿದೆ. ಸದ್ಯ ಮುಂಬೈ ಏರ್​ಪೋರ್ಟ್​ನಿಂದ 50 ವಿಮಾನಗಳು ಹಾರಾಟ ನಡೆಸುತ್ತಿದ್ದವು. ಇಂದು ಕೇವಲ 19 ವಿಮಾನಗಳು ಹಾರಾಡಲಿವೆ. ವಾತಾವರಣ ಕೆಟ್ಟದಾಗಿದೆ. ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡು ವಿಮಾನ ಸಂಚಾರ ಮಾಡಲಿದೆ ಎಂದು ಮುಂಬೈ ಏರ್​ಪೋರ್ಟ್​ ಆಡಳಿತ ತಿಳಿಸಿದೆ. ಇದನ್ನೂ ಓದಿ: FULL DETAILS | ಸೈಕ್ಲೋನ್​ಗೆ ಹೆಸರಿಡೋದು ಯಾರು, ಹೇಗೆ?

    ಮಹಾರಾಷ್ಟ್ರ, ರತ್ನಗಿರಿ, ಗೋವಾ, ಪಣಜಿಯಲ್ಲಿ ಚಂಡಮಾರುತದ ಪ್ರಭಾವದಿಂದ ಭರ್ಜರಿ ಗಾಳಿ, ಮಳೆಯಾಗುತ್ತಿದ್ದು ಜನರು ಮನೆಯಿಂದ ಹೊರಗೆ ಬರಬೇಡಿ ಎಂದು ಸರ್ಕಾರಗಳು ಸೂಚನೆ ನೀಡಿವೆ. ಗ್ರೇಟರ್​ ಮುಂಬೈನಲ್ಲಿ ಸೆಕ್ಷನ್​ 144 ಜಾರಿಯಲ್ಲಿದೆ. ಕರಾವಳಿ ಪ್ರದೇಶ ಸೇರಿ, ಸೈಕ್ಲೋನ್​ನಿಂದ ಹಾನಿಗೆ ಒಳಗಾಗಬಹುದಾದ ಎಲ್ಲ ಪ್ರದೇಶಗಳಲ್ಲಿ ಎನ್​ಡಿಆರ್​ಎಫ್​ ಸಿಬ್ಬಂದಿ ನಿಯೋಜನೆಗೊಂಡಿದ್ದಾರೆ. ಜನರ ಸ್ಥಳಾಂತರ ಕಾರ್ಯ, ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದೆ. (ಏಜೆನ್ಸೀಸ್​)

    ಹೆದ್ದಾರಿಯಲ್ಲಿ 'ನಿಸರ್ಗ'ದ ಆರ್ಭಟ

    ಹೆದ್ದಾರಿಯಲ್ಲಿ 'ನಿಸರ್ಗ'ದ ಆರ್ಭಟನಿಸರ್ಗ ಚಂಡಮಾರುತದ ಪ್ರಭಾವದಿಂದ ಮುಂಬೈ, ಮಹಾರಾಷ್ಟ್ರ, ಗೋವಾದಲ್ಲಿ ವಿಪರೀತ ಗಾಳಿ-ಮಳೆಯಾಗುತ್ತಿದೆ. ಮುಂಬೈ-ಗೋವಾ ಹೆದ್ದಾರಿಯಲ್ಲಿ ಜೂನ್​ 2ರಂದು ಕಂಡುಬಂದ ದೃಶ್ಯ ಇದು..

    Vijayavani ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಮಂಗಳವಾರ, ಜೂನ್ 2, 2020

     

    ವಿವಿಧೆಡೆ ಭೂಕುಸಿತ; 20 ಮಂದಿ ದಾರುಣ ಸಾವು, ಜೀವಂತ ಸಮಾಧಿಯಾದ ಪುಟ್ಟ ಮಕ್ಕಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts