More

    ಉಪವಾಸ ಉಪಾಹಾರ: ಕ್ಯಾರೆಟ್-ಕಿತ್ತಳೆ ಜ್ಯೂಸ್

    ಉಪವಾಸ ಉಪಾಹಾರ: ಕ್ಯಾರೆಟ್-ಕಿತ್ತಳೆ ಜ್ಯೂಸ್ಶಿವರಾತ್ರಿಯ ಹಬ್ಬ ಹೊಸ್ತಿಲಲ್ಲಿ ನಿಂತಿದೆ. ಅಂದು ಮಾಡುವ ಉಪವಾಸಕ್ಕೆ ಪೂರಕವಾದ, ಆರೋಗ್ಯಕರ ಹಾಗೂ ಸುಲಭದಲ್ಲಿ ತಯಾರಿಸಬಲ್ಲ ಕ್ಯಾರೆಟ್-ಕಿತ್ತಳೆ ಜ್ಯೂಸ್ ಮಾಡುವ ವಿಧಾನ ಇಲ್ಲಿದೆ.

    ಕ್ಯಾರೆಟ್-ಕಿತ್ತಳೆ ಜ್ಯೂಸ್

    ಬೇಕಾಗುವ ಸಾಮಗ್ರಿ: ಕ್ಯಾರೆಟ್ ತುಂಡುಗಳು-3 ಕಪ್ ಕಿತ್ತಳೆ ಹಣ್ಣಿನ ರಸ-1 ಕಪ್ ಕೆಂಪು ಕಲ್ಲುಸಕ್ಕರೆ ಪುಡಿ-ಅರ್ಧ ಕಪ್ ಏಲಕ್ಕಿ ಪುಡಿ-1 ಚಮಚ ಜಾಕಾಯಿ ಪುಡಿ-1 4 ಚಮಚ ಕೇಸರಿ ಬಣ್ಣ-ಚಿಟಿಕೆ

    ಮಾಡುವ ವಿಧಾನ: ಕೇಸರಿ ಬಣ್ಣವನ್ನು ಕಾಲು ಕಪ್ ನೀರಿನಲ್ಲಿ ಕಲಸಿಡಿ. ಕ್ಯಾರೆಟ್ ತುಂಡುಗಳನ್ನು ಒಂದು ಕಪ್ ನೀರು ಹಾಕಿ ನುಣ್ಣಗೆ ಅರೆದು, ಕಿತ್ತಳೆ ರಸ ಬೆರೆಸಿ. ಈ ಮಿಶ್ರಣಕ್ಕೆ, ಜ್ಯೂಸ್ ಹದಕ್ಕೆ ನೀರು, ಕೆಂಪು ಕಲ್ಲುಸಕ್ಕರೆ ಪುಡಿ, ಕೇಸರಿ ಬಣ್ಣ, ಏಲಕ್ಕಿ ಪುಡಿ, ಜಾಕಾಯಿ ಪುಡಿಗಳನ್ನು ಹಾಕಿ ಕಲಕಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts