More

    ಭಾರತೀಯ ನಾರಿಯರಂತೆ ಕಂಗೊಳಿಸಿದ ರಷ್ಯನ್ನರು

    ಕಾರ್ಗಲ್: ವಿಶ್ವವಿಖ್ಯಾತ ಜೋಗ ಜಲಪಾತ ವೀಕ್ಷಣೆಗೆ ಆಗಮಿಸಿದ್ದ ರಷ್ಯಾದ ಆಂಡ್ರ್ಯೂ, ಆತನ ಜತೆಗಾತಿ ಇಲಿಯಾನಾ ಹಾಗೂ ಇವಾನ್, ಆತನ ಜತೆಗಾತಿ ಕಾಸೋಲ್ ಕಾರ್ಗಲ್​ನ ನ್ಯೂ ಸ್ಪೈಸಿ ಬ್ಯೂಟಿ ಪಾರ್ಲರ್ ಹಾಗೂ ಲೇಡಿಸ್ ಫ್ಯಾಷನ್ ಕಲೆಕನ್ಸ್​ಗೆ ಮಂಗಳವಾರ ರಾತ್ರಿ ಅನಿರೀಕ್ಷಿತ ಭೇಟಿ ನೀಡಿದರು. ಇಲ್ಲಿನ ಮಳಿಗೆಯಲ್ಲಿ ಮಹಿಳೆಯರ ಅಲಂಕಾರಿಕ ವಸ್ತುಗಳಿಗೆ ಮಾರು ಹೋದ ಜೋಡಿ ಭಾರತದ ಸಾಂಪ್ರದಾಯಿಕ ಉಡುಗೆ ಸೀರೆ ಉಟ್ಟು ಹಣೆಗೆ ಕುಂಕುಮ, ಕಿವಿ ಓಲೆ ಮತ್ತು ಕೈ ಬಳೆ ತೊಟ್ಟು ಅಪ್ಪಟ ಭಾರತೀಯ ನಾರಿಯರಂತೆ ಕಂಗೊಳಿಸಿದರು.

    ಜೋಗ ಜಲಪಾತದ ವೀಕ್ಷಣೆಗೆಂದು ಆಗಮಿಸಿದ್ದ ಈ ಜೋಡಿಗಗಳು ಮಳಿಗೆಯಲ್ಲಿನ ಫ್ಯಾನ್ಸಿ ಸೀರೆ ಕಂಡು ಆಕರ್ಷಿಸಿತರಾದರು. ನಂತರ ಸೀರೆ ಖರೀದಿಸಿ ಅಲಂಕಾರಗೊಂಡರು. ಪಾರ್ಲರ್​ನ ಬ್ಯೂಟಿಷಿಯನ್ ಶ್ರೀದೇವಿ ರಾಧಾಕೃಷ್ಣ ಇಬ್ಬರಿಗೂ ಸೀರೆ ಉಡಿಸಿದರು. ಸೀರೆ ಉಟ್ಟು ಸಂಭ್ರಮಿಸಿದ ರಷ್ಯಾ ಯವತಿಯರ ಜತೆ ಅನೇಕರು ನಿಂತು ಫೋಟೋ ಕ್ಲಿಕ್ಕಿಸಿಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts