More

    LIC ಹೌಸಿಂಗ್ ಫೈನಾನ್ಸ್​ನಲ್ಲಿ ಪದವಿ ಪಾಸಾದವರಿಗೆ ಉದ್ಯೋಗಾವಕಾಶ; ಡಿಸೆಂಬರ್ 31 ರ ಮೊದಲು ಅರ್ಜಿ ಸಲ್ಲಿಸಿ

    ಬೆಂಗಳೂರು: ಕೇಂದ್ರ ಸರ್ಕಾರದ ಆಡಳಿತದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಜೀವ ವಿಮಾ ನಿಗಮ(ಎಲ್​​​​ಐಸಿ), 1956ರಲ್ಲಿ ಸ್ಥಾಪನೆಯಾಗಿದ್ದು, ಮುಂಬೈ ಮಹಾನಗರಿಯಲ್ಲಿ ಪ್ರಧಾನ ಕಚೇರಿ ಹೊಂದಿದೆ. ದೇಶಾದ್ಯಂತ ಜೀವ ವಿಮೆ ಸೇವೆ ಒದಗಿಸುತ್ತಿದೆ. ವಿಮೆಯು ಅತಿ ಹೆಚ್ಚು ಹೂಡಿಕೆದಾರ ಕ್ಷೇತ್ರವಾಗಿದ್ದು, ಪ್ರಸ್ತುತ ಹೌಸಿಂಗ್ ಫೈನಾನ್ಸ್ ಕಾರ್ಪೊರೇಷನ್ ವತಿಯಿಂದ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದ್ದು, ಈಗಾಗಲೇ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಬಹುದು.

    ಒಟ್ಟು ಹುದ್ದೆಗಳು-250
    ಕರ್ನಾಟಕಕ್ಕೆ-33
    ಹುದ್ದೆಯ ಹೆಸರು-ಅಂಪ್ರೆಟಿಸ್

    ವಿದ್ಯಾರ್ಹತೆ
    ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯ ಅಥವಾ ಶೈಕ್ಷಣಿಕ ಸಂಸ್ಥೆಯಿಂದ 2020ರ ಏಪ್ರಿಲ್ 1 ರಿಂದ 2023ರ ಡಿಸೆಂಬರ್ 1ರ ಅವಧಿಯಲ್ಲಿ ಯಾವುದೇ ವಿಷಯದಲ್ಲಿ ಪದವಿ ಶಿಕ್ಷಣ ಪೂರ್ಣಗೊಳಿಸಿರಬೇಕು.

    ವಯೋಮಿತಿ
    2023 ಡಿಸೆಂಬರ್ 1ಕ್ಕೆ ಅನ್ವಯವಾಗುವಂತೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ ಕನಿಷ್ಠ 20, ಗರಿಷ್ಠ 25ವರ್ಷ ತುಂಬಿರಬೇಕು.

    ವೇತನ
    ಆಯ್ಕೆಯಾದ ಅಭ್ಯರ್ಥಿಗಳು ಭಾರತೀಯ ಜೀವ ವಿಮಾ ನಿಗಮದ ಯಾವ ಶಾಖೆಗೆ ನಿಯೋಜನೆಗೊಳ್ಳುತ್ತಾರೆ ಎನ್ನುವುದರ ಮೇಲೆ ಸ್ಟೆಪೆಂಡ್‌ ನಿರ್ಧರಿತವಾಗಲಿದ್ದು, ಕನಿಷ್ಠ 9,000ರೂಪಾಯಿಂದ ಗರಿಷ್ಠ 15,000ರೂವರೆಗೆ ಸ್ಟೆಪೆಂಡ್‌ ನಿಗದಿ ಮಾಡಲಾಗಿದೆ.

    ಅರ್ಜಿ ಸಲ್ಲಿಸುವ ವಿಧಾನ
    ಅಧಿಕೃತ ಎಲ್​​​​ಐಸಿ ಪೋರ್ಟಲ್​​ಗೆ ಭೇಟಿ ನೀಡಿ ಅಲ್ಲಿ ಕೇಳಲಾದ ಸ್ವಯಂ ದೃಢೀಕರಿಸಿದ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡುವ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬೇಕು. ಇತರ ಯಾವುದೇ ಮೂಲಗಳಿಂದ ಸಲ್ಲಿಕೆಯಾದ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ.

    ಅರ್ಜಿ ಶುಲ್ಕ
    ಸಾಮಾನ್ಯ ಹಾಗೂ ಒಬಿಸಿ ಅಭ್ಯರ್ಥಿಗಳು 944ರೂ. ಶುಲ್ಕ ಭರಿಸಬೇಕಿದ್ದು, ಎಸ್-ಎಸ್‌ಟಿ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ 708ರೂ. ನಿಗದಿಪಡಿಸಲಾಗಿದೆ. ಇನ್ನೂ ಅಂಗವಿಕಲ ಅಭ್ಯರ್ಥಿಗಳು 472ರೂ. ಶುಲ್ಕ ಪಾವತಿಸಬೇಕಿದೆ. 2024ರ ಜನವರಿ 3ರವರೆಗೆ ಶುಲ್ಕ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.

    ಜ.4ಕ್ಕೆ ಪ್ರವೇಶ ಪರೀಕ್ಷೆ
    2024ರ ಜ.4ಕ್ಕೆ ಪ್ರವೇಶ ಪರೀಕ್ಷೆ ನಿಗದಿ ಮಾಡಲಾಗಿದ್ದು, ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳ ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ. ನಂತರ ಜ.9 ಮತ್ತು 11ರಂದು ಎಲ್‌ಐಸಿ ಕಚೇರಿಗಳಲ್ಲಿ ದಾಖಲೆ ಪರಿಶೀಲನೆ ಹಾಗೂ ವೈಯಕ್ತಿಕ ಸಂದರ್ಶನದ ನಡೆಸಲಾಗುತ್ತದೆ. ಈ ಎಲ್ಲ ಫಲಿತಾಂಶಗಳನ್ನು ಆಧರಿಸಿ ಅಂತಿಮ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳು ಜ.25ರೊಳಗೆ ಸಂಬಂಧಿಸಿದ ಶಾಖೆಯಲ್ಲಿ ವರದಿ ಮಾಡಿಕೊಳ್ಳಬೇಕು.

    ಅರ್ಜಿ ಸಲ್ಲಿಸಲು ಕೊನೇ ದಿನ : 31-12-2023 

    AIESLನಲ್ಲಿ ಪದವಿ ಪಾಸಾದವರಿಗೆ ಉದ್ಯೋಗಾವಕಾಶ: 283 ಹುದ್ದೆಗೆ ಅರ್ಜಿ ಆಹ್ವಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts