More

    ಕಾರು ತೊಳೆಯುತ್ತಿದ್ದವ ಮಾಟ ಮಂತ್ರ ಶುರು ಮಾಡಿದ ! ಈಗ ಪೊಲೀಸರ ಅತಿಥಿ!

    ಪುಣೆ: ದೇವರು-ದೆವ್ವ ಎಂದಾಕ್ಷಣ ವಿವೇಚನೆ ಬಿಟ್ಟು ನಂಬಿ ಮೋಸಕ್ಕೊಳಗಾಗುವ ಜನರಿಗೇನೂ ಕೊರತೆಯಿಲ್ಲ. ಇಂಥ ಅಂಧ ವಿಶ್ವಾಸವನ್ನು ದುಡ್ಡು ಸಂಪಾದಿಸಲು ಬಳಸುವ ಪ್ರಯತ್ನದಲ್ಲಿದ್ದ ವ್ಯಕ್ತಿಯೊಬ್ಬ ಪೊಲೀಸ್ ಪಾಲಾಗಿದ್ದಾನೆ. ಮಾಟ ಮಂತ್ರ ಮಾಡುವುದನ್ನು ಕಸುಬು ಮಾಡಿಕೊಂಡ ಗೌತಮ್ ಪಂಢರಿನಾಥ ಮೋರೆ ಎಂಬುವನನ್ನು ಮಹಾರಾಷ್ಟ್ರದ ಪಿಂಪ್ರಿ ಚಿಂಚವಾಡ ಪೊಲೀಸರು ಬಂಧಿಸಿದ್ದಾರೆ.

    ಪುಣೆಯ ಕೂಡಲ್​ವಾಡಿ ಬಡಾವಣೆಯಲ್ಲಿ ಭಾನುವಾರ ರಾತ್ರಿ ಆರೋಪಿ ಮೋರೆ ಕಪ್ಪು ಚೀಲವೊಂದನ್ನು ಹಿಡಿದು ಅನುಮಾನಾಸ್ಪದವಾಗಿ ಓಡಾಡುತ್ತಿದ್ದ. ಗಫ್ತು ನಡೆಸುತ್ತಿದ್ದ ಪೊಲೀಸ್ ಪೇದೆಯು ನಿಲ್ಲಿಸಿ ತಪಾಸಣೆ ಮಾಡಿದಾಗ ಚೀಲದಲ್ಲಿ ಮಾಟ ಮಂತ್ರ ಮಾಡುವ ಸಾಮಗ್ರಿಗಳನ್ನು ಇಟ್ಟುಕೊಂಡಿರುವುದು ಕಂಡುಬಂತು. ಆತನನ್ನು ಬಂಧಿಸಿ ವಿಚಾರಣೆ ಮಾಡಿದಾಗ, “ಪೂಜೆ” ಮಾಡಿ ಕೂಡಲ್​ವಾಡಿಯ ನಿವಾಸಿಯೊಬ್ಬರ ಸಮಸ್ಯೆ ಬಗೆಹರಿಸುವುದಕ್ಕಾಗಿ ತೆರಳುತ್ತಿದ್ದುದಾಗಿ ತಿಳಿಸಿದ್ದಾನೆ.

    ಇದನ್ನೂ ಓದಿ: ತಾಯಿ ಇಲ್ಲದ ಮಗುವಿಗೆ ಕಿರಾತಕರಾದ ಬಂಧುಗಳು … ಹೀಗೂ ಇರ್ತಾರಾ ?!

    ಮೋರೆಯ ವಿರುದ್ಧ ಮಹಾರಾಷ್ಟ್ರ ಪ್ರಿವೆಂಷನ್ ಅಂಡ್ ಎರಾಡಿಕೇಷನ್ ಆಫ್ ಹ್ಯೂಮನ್ ಸ್ಯಾಕ್ರಿಫೈಸ್ ಅಂಡ್ ಅದರ್ ಇನ್​ಹ್ಯೂಮನ್, ಇವಿಲ್ ಅಂಡ್ ಅಘೋರಿ ಪ್ರಾಕ್ಟೀಸಸ್ ಅಂಡ್ ಬ್ಲಾಕ್ ಮ್ಯಾಜಿಕ್ ಆ್ಯಕ್ಟ್, 2013 ರ ಅಡಿಯಲ್ಲಿ ಕೇಸು ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ. 40 ವರ್ಷ ವಯಸ್ಸಿನ ಮೋರೆ, ಮಹಾರಾಷ್ಟ್ರದ ಚಿಖಳಿ ಗ್ರಾಮದ ನಿವಾಸಿಯಾಗಿದ್ದ. ಕಾರು ತೊಳೆದು ಜೀವನ ಸಾಗಿಸುತ್ತಿದ್ದವನು ಇತ್ತೀಚೆಗೆ ಮಾಟ ಮಂತ್ರದ ಹೆಸರಲ್ಲಿ ಜನರನ್ನು ವಂಚಿಸಿ ಹಣ ಪಡೆಯಲು ಆರಂಭಿಸಿದ್ದ ಎನ್ನಲಾಗಿದೆ.(ಏಜೆನ್ಸೀಸ್)

    ಅಲ್ಹಾನನ್ನು ಮೆಚ್ಚಿಸಲು ಆರು ವರ್ಷದ ಸ್ವಂತ ಮಗುವನ್ನು ಭೀಕರವಾಗಿ ಕೊಂದ ಗರ್ಭಿಣಿ ಶಿಕ್ಷಕಿ!

    ಕೆಂಪುಕೋಟೆ ಹಿಂಸಾಚಾರ ಆರೋಪಿ ಸುಖದೇವ್ ಸಿಂಗ್ ಪೊಲೀಸ್ ವಶಕ್ಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts