More

    ಮಧ್ಯರಾತ್ರಿ ಜೋರಾಗಿ ಮ್ಯೂಸಿಕ್​ ಹಾಕಬೇಡಿ ಎಂದ ಆರ್ಮಿ ಆಫಿಸರ್​ನ ಕಾರನ್ನೇ ಸುಟ್ಟರು..!

    ಲಖನೌ: ಉತ್ತರಪ್ರದೇಶದ ರಾಜಧಾನಿ ಲಖನೌನ ಹೋಟೆಲ್‌ ಒಂದರಲ್ಲಿ ತಡರಾತ್ರಿಯಲ್ಲಿ ಜೋರಾಗಿ ಸಂಗೀತ ನುಡಿಸುವುದನ್ನು ವಿರೋಧಿಸಿದ ಸೇನೆಯಲ್ಲಿ ಮೇಜರ್​ ಆಗಿರುವ ಒಬ್ಬರ ಕಾರಿಗೆ ಬೆಂಕಿ ಹಚ್ಚಿದ್ದಾರೆ. ಇದೀಗ ಆ ಹೋಟೆಲ್‌ ಸೀಲ್ ಮಾಡಲಾಗಿದೆ.

    ಹೋಟೆಲ್ ಮಿಲಾನೊ ಆ್ಯಂಡ್​ ಕೆಫೆಯನ್ನು ಅಕ್ರಮವಾಗಿ ನಡೆಸಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ನಿರ್ವಾಹಕರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ಲಕ್ನೋ ಅಭಿವೃದ್ಧಿ ಪ್ರಾಧಿಕಾರ ತಿಳಿಸಿದೆ. ನಿರ್ವಾಹಕರು ಹೋಟೆಲ್‌ನ ನಕ್ಷೆಯನ್ನು ನೀಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ. ಒಟ್ಟು ಐದು ಜನರನ್ನು ಬಂಧಿಸಲಾಗಿದ್ದು ಪೊಲೀಸರು ಪ್ರಮುಖ ಆರೋಪಿಯಾಗಿರುವ ಹೋಟೆಲ್‌ನ ಮ್ಯಾನೇಜರ್‌ಗಾಗಿ ಹುಡುಕುತ್ತಿದ್ದಾರೆ.

    ಗೋಮ್ತಿನಗರದ ವಿಶಾಲ್ ಕಂಡ್ ಪ್ರದೇಶದಲ್ಲಿ ಮೇಜರ್ ಅಭಿಜಿತ್ ಸಿಂಗ್ ಅವರ ಮನೆಯ ಸಮೀಪ ಈ ಹೋಟೆಲ್ ಇದೆ. ಭಾನುವಾರ ರಾತ್ರಿ, ಅವರು ದೊಡ್ಡದಾಗಿ ನುಡಿಸಿದ್ದ ಮ್ಯೂಸಿಕ್​ ನಿಲ್ಲಿಸುವಂತೆ ಹೋಟೆಲ್ ಸಿಬ್ಬಂದಿಯನ್ನು ಕೇಳಿಕೊಂಡಿದ್ದಾರೆ. ಆದರೆ ಹೊಟೇಲ್ ಸಿಬ್ಬಂದಿ ನಿರಾರಕರಿಸಿದ್ದು ವಿಷಯ ವಾಗ್ವಾದಕ್ಕೆ ತಿರುಗಿದೆ. ನಂತರ ಪೊಲೀಸರು ಮಧ್ಯಪ್ರವೇಶಿಸಿ ಸಂಗೀತವನ್ನು ನಿಲ್ಲಿಸಿದರು.

    ಇದಾದ ಮೇಲೆ ಮೇಜರ್​, ಮನೆಗೆ ಹೋಗಿ ನಿದ್ದೆ ಹೋಗಿದ್ದಾರೆ. ಆದರೆ ಸೋಮವಾರ ಬೆಳಗಿನ ಜಾವ 3.30ರ ಸುಮಾರಿಗೆ ತಮ್ಮ ಕಾರು ಹೊತ್ತಿ ಉರಿಯುತ್ತಿರುವುದನ್ನು ನೋಡಿದ್ದಾರೆ. ಬೆಂಕಿ ನಂದಿಸುವಷ್ಟರಲ್ಲಿ ಕಾರು ಸಂಪೂರ್ಣ ಸುಟ್ಟು ಕರಕಲಾಗಿತ್ತು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts