More

    ಕಾರು ಮಾರಾಟ ಪ್ರಕರಣ: ಮತ್ತಿಬ್ಬರು ಪೊಲೀಸರ ಅಮಾನತು

    ಮಂಗಳೂರು: ವಂಚನೆ ಪ್ರಕರಣದ ಆರೋಪಿಗಳ ಐಷಾರಾಮಿ ಕಾರುಗಳ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಮತ್ತಿಬ್ಬರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಆಶೀತ್ ಡಿಸೋಜ ಮತ್ತು ರಾಜಾ ಅಮಾನತುಗೊಂಡವರು.
    ಪ್ರಕರಣದಲ್ಲಿ ನಾರ್ಕೋಟಿಕ್ ಠಾಣೆ ಇನ್‌ಸ್ಪೆಕ್ಟರ್ ರಾಮಕೃಷ್ಣ ಮತ್ತು ಸಿಸಿಬಿಯ ಹಿಂದಿನ ಎಸ್‌ಐ ಕಬ್ಬಾಳ್‌ರಾಜ್ ಅವರನ್ನು ಶನಿವಾರವೇ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅಮಾನತು ಮಾಡಿ ಆದೇಶ ಹೊರಡಿಸಿದ್ದರು. ಡಿಸಿಪಿ ವಿನಯ್ ಗಾಂವ್ಕರ್ ಸಲ್ಲಿಸಿದ ಆಂತರಿಕ ತನಿಖಾ ವರದಿಯಲ್ಲಿ ಆಶೀತ್ ಡಿಸೋಜ ಮತ್ತು ರಾಜಾ ಅವರ ಹೆಸರು ಉಲ್ಲೇಖ ಮಾಡಿದ್ದು, ಅದರ ಆಧಾರದಲ್ಲಿ ನಗರ ಪೊಲೀಸ್ ಆಯುಕ್ತ ಶಶಿಕುಮಾರ ಅಮಾನತು ಮಾಡಿದ್ದಾರೆ.

    ರಾಜ್ಯ ಸಿಐಡಿ ಈ ನಾಲ್ವರು ಸೇರಿದಂತೆ ಮಧ್ಯವರ್ತಿ ದಿವ್ಯದರ್ಶನ್‌ಗೆ ನೋಟಿಸ್ ನೀಡಿದ್ದು, ಬೆಂಗಳೂರಿಗೆ ಸಿಐಡಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಅಮಾನತುಗೊಂಡವರಿಬ್ಬರೂ ಕಬ್ಬಾಳ್ ಅವರ ಜತೆ ನಿಷ್ಠರಾಗಿದ್ದರು ಎನ್ನಲಾಗಿದೆ. ಈ ಹಿಂದೆ ತೊಕ್ಕೊಟ್ಟಿನಲ್ಲಿ ಬಾರ್‌ನಲ್ಲಿ ಮದ್ಯ ಸೇವನೆ ಪ್ರಕರಣಕ್ಕೆ ಸಂಬಂಧಿಸಿ ಶಿಸ್ತು ಕ್ರಮದ ಬಳಿಕ 18 ಮಂದಿಯ ಸಿಸಿಬಿ ತಂಡದಲ್ಲಿ ಆಶಿತ್ ಡಿಸೋಜ ಸಹಿತ 10 ಮಂದಿ ಮಾತ್ರ ಇದ್ದರು. ರಾಜ್ ಅದಕ್ಕೂ ಮೊದಲೇ ಬಂದರು ಠಾಣೆಗೆ ವರ್ಗಾವಣೆಯಾಗಿದ್ದರು.

    ತನಿಖಾ ತಂಡ ಮಂಗಳೂರಿಗೆ: ಪ್ರಕರಣದ ತನಿಖಾಧಿಕಾರಿ ಸಿಐಡಿ ಎಸ್‌ಪಿ ರೋಹಿಣಿ ಕಟ್ಟೋಚ್ ನೇತೃತ್ವದ ತಂಡ ಸೋಮವಾರ ಮಂಗಳೂರಿಗೆ ಆಗಮಿಸಿ, ಮಾಹಿತಿ ಕಲೆ ಹಾಕಿದೆ. ಪ್ರಕರಣಕ್ಕೆ ಸಂಬಂಧಿಸಿ 14 ಮಂದಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ ಎಂದು ತಿಳಿದು ಬಂದಿದೆ. ತನಿಖೆ ನಡೆಸಿ ಅದರ ವರದಿಯನ್ನು ಸಿಐಡಿ ಡಿಜಿಗೆ ಸಲ್ಲಿಸಲಿದ್ದು, ಅವರು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಅವರಿಗೆ ಸಲ್ಲಿಸಲಿದ್ದಾರೆ.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts