More

    ಅತಿ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯವಾಡಿದ ದಾಖಲೆ ಬರೆದ ಮಿಥಾಲಿ ರಾಜ್..!

    ಲಖನೌ: ಭಾರತ ಮಹಿಳಾ ಕ್ರಿಕೆಟ್ ಲೆಜೆಂಡ್ ಮಿಥಾಲಿ ರಾಜ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮದೇ ಛಾಪು ಮೂಡಿಸುತ್ತಿರುವ ಆಟಗಾರ್ತಿ. ಮಂಗಳವಾರ ದಕ್ಷಿಣಾ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದ ಮೂಲಕ ಮತ್ತೊಂದು ಮೈಲುಗಲು ಸ್ಥಾಪಿಸಿದ್ದಾರೆ. ಅತಿಹೆಚ್ಚು ಅಂತಾರಾಷ್ಟ್ರೀಯ ಪಂದ್ಯವಾಡಿದ ಆಟಗಾರ್ತಿ ಎನಿಸಿಕೊಂಡಿದ್ದಾರೆ. ಮಿಥಾಲಿ ರಾಜ್ 211 ಏಕದಿನ, 10 ಟೆಸ್ಟ್ ಹಾಗೂ 89 ಟಿ20 ಒಳಗೊಂಡಂತೆ 310 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. ಇಂಗ್ಲೆಂಡ್‌ನ ಚಾರ್ಲೊಟ್ ಇಡ್ವರ್ಡ್ಸ್ ಹೆಸರಿನಲ್ಲಿದ್ದ ದಾಖಲೆಯನ್ನು ಹಿಂದಿಕ್ಕಿದ್ದಾರೆ.

    ಇದನ್ನೂ ಓದಿ: ಚರ್ಮದ ಮೇಲೆ ಎಷ್ಟೊಂದು ಬ್ಯಾಕ್ಟಿರಿಯಾಗಳಿವೆ ಗೊತ್ತಾ..?

    1999ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಮಿಥಾಲಿ ರಾಜ್, 22 ವರ್ಷಗಳಿಂದಲೂ ರಾಷ್ಟ್ರೀಯ ತಂಡದ ಭಾಗವಾಗಿದ್ದಾರೆ. 1999ರಲ್ಲಿ ಐರ್ಲೆಂಡ್ ವಿರುದ್ಧ ಆಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಮಿಥಾಲಿ ರಾಜ್ 35 ರನ್ ಪೇರಿಸಿದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10 ಸಾವಿರ ರನ್ ಪೂರೈಸಿದಂತಾಗುತ್ತದೆ. ಆದರೆ, ಎರಡನೇ ಏಕದಿನ ಪಂದ್ಯದಲ್ಲಿ ಮಿಥಾಲಿ ರಾಜ್‌ಗೆ ಬ್ಯಾಟಿಂಗ್ ಮಾಡಲು ಅವಕಾಶ ಸಿಗಲಿಲ್ಲ.

    ಇದನ್ನೂ ಓದಿ: ಕ್ರೀಡಾ ವಿಶ್ಲೇಷಕಿಯನ್ನು ವರಿಸಲಿದ್ದಾರೆ ಟೀಮ್ ಇಂಡಿಯಾ ವೇಗಿ ಜಸ್ ಪ್ರೀತ್ ಬುಮ್ರಾ ?

    ಮಿಥಾಲಿ ರಾಜ್ ಭಾರತದ ಏಕದಿನ ತಂಡ ಮುನ್ನಡೆಸುತ್ತಿದ್ದಾರೆ. ಲಖನೌದ ಅಟಲ್ ಬಿಹಾರಿ ವಾಜಪೇಯಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 5 ಪಂದ್ಯಗಳ ಏಕದಿನ ಸರಣಿಯಲ್ಲಿ ಆಡುತ್ತಿದೆ. ಎರಡು ಪಂದ್ಯಗಳ ತಂಡದ ಸರಣಿ 1-1 ರಿಂದ ಸಮಬಲದಲ್ಲಿದೆ. 3ನೇ ಏಕದಿನ ಪಂದ್ಯ ಶುಕ್ರವಾರ ನಡೆಯಲಿದೆ.

    ಜೂಲನ್, ಸ್ಮೃತಿ ಸಾಹಸ; ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ಭರ್ಜರಿ ಗೆಲುವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts