More

    ಗಾಂಜಾ ಮಾರಾಟ, ಎಂಟು ಜನರ ಬಂಧನ

    ಖಾನಾಪುರ: ಅಕ್ರಮವಾಗಿ ಗಾಂಜಾ ಮಾರುತ್ತಿದ್ದ ಜಾಲ ಬೇಧಿಸಿರುವ ಖಾನಾಪುರ ಪೊಲೀಸರು, ಪಟ್ಟಣದ ಸ್ಟೇಶನ್ ರಸ್ತೆ ಬಳಿ ದಾಳಿ ನಡೆಸಿ ಮಾರಾಟ ಮಾಡುತ್ತಿದ್ದ ಮೂವರು ಮತ್ತು ಖರೀದಿಸುತ್ತಿದ್ದ ನಾಲ್ವರು ಸೇರಿ 7 ಜನರನ್ನು ಭಾನುವಾರ ಬಂಧಿಸಿದ್ದಾರೆ.

    ಪಟ್ಟಣದ ಶಾಹುನಗರ ನಿವಾಸಿಗಳಾದ ದೀಪಕ ಕುಡಾಳೆ, ವಿನೋದ ಸೊಂಟಕ್ಕಿ ಮತ್ತು ಓರ್ವ ಮಹಿಳೆ ತಾಯಿ ಸೊಂಟಕ್ಕಿ ಹಾಗೂ ಗಾಂಜಾ ಖರೀದಿ ಮಾಡುತ್ತಿದ್ದ ಬೆಳಗಾವಿ ನಗರದ ಮೊಹ್ಮದ್ ಝಕಿ ಸನದಿ, ಸೈಯ್ಯದ್ ನಿಹಾಲ ಬುಕಾರಿ ಮತ್ತು ಪಟ್ಟಣದ ನಿಶಾತ್ ಜುಂಜವಾಡಕರ, ಅಜಿಂ ಸೈಯದ್ ಬಂಧಿತರು. ಒಂದು ಸ್ವಿಫ್ಟ್ ಕಾರು ಮತ್ತು 953 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ. ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಖಾನಾಪುರ ಠಾಣೆ ಪಿಎಸ್‌ಐ ಬಸಗೌಡ ಪಾಟೀಲ, ಸಿಬ್ಬಂದಿ ಜಗದೀಶ ಕಾದ್ರೊಳ್ಳಿ, ಎಂ.ಎಂ. ಮುಲ್ಲಾ, ಎಸ್.ಎಸ್. ತುರಮಂದಿ, ಮಂಜುನಾಥ ಮುಸಳಿ, ಪಿ.ವಿ. ಲೋಕುರೆ, ಎ.ವಿ. ಜೋತೆಣ್ಣವರ, ಎಸ್.ಸಿ. ಪೂಜಾರಿ ದಾಳಿಯಲ್ಲಿ ಪಾಲ್ಗೊಂಡಿದ್ದರು. ಖಾನಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಬೆಳಗಾವಿ ವರದಿ: ಜಮೀನಿನಲ್ಲಿ ಅನಧಿಕೃತವಾಗಿ ಗಾಂಜಾ ಗಿಡ ಬೆಳೆದು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಭಾನುವಾರ ಬಂಧಿಸಿರುವ ಪೊಲೀಸರು, 4 ಕೆಜಿ 483ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ. ಹುಕ್ಕೇರಿ ತಾಲೂಕಿನ ಇಂಗಳಿ ಗ್ರಾಮದ ಜಮಾಲಸಾಬ ಬಾಳಾಸಾಬ ಅಂಕಲಿ ಬಂಧಿತ ವ್ಯಕ್ತಿ. ಖಚಿತ ಮಾಹಿತಿ ಮೇರೆಗೆ ಪಿಎಸ್‌ಐ ರಮೇಶ ಪಾಟೀಲ ನೇತೃತ್ವದ ತಂಡ ದಾಳಿ ನಡೆಸಿದ್ದು, ಸುಮಾರು 8,960 ರೂ. ಬೆಲೆ ಬಾಳು ಹಸಿ ಗಾಂಜಾ ವಶಪಡಿಸಿಕೊಂಡಿದ್ದಾರೆ. ಬಂಧಿತನನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗಿದ್ದು, ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts