More

    ಕ್ಯಾನ್ಸರ್​, ಕಿಡ್ನಿ ರೋಗಿಗಳಿಗೆ ಮಾಸಿಕ 2250 ರೂ. ಪಿಂಚಣಿ

    ಹರಿಯಾಣ: ಗಂಭೀರ ಸ್ವರೂಪದ ಕಿಡ್ನಿ ಸಮಸ್ಯೆ ಹಾಗೂ ಕ್ಯಾನ್ಸರ್ ರೋಗದಿಂದ ಬಳಲುತ್ತಿರುವವರ ನೆರವಿಗೆ ಹರಿಯಾಣ ಸರ್ಕಾರ ಮುಂದಾಗಿದ್ದು, ಇಂಥವರಿಗೆ ಪ್ರತಿ ತಿಂಗಳೂ ಪಿಂಚಣಿ ರೂಪದಲ್ಲಿ 2,250 ರೂಪಾಯಿಗಳನ್ನು ನೀಡುವುದಾಗಿ ಘೋಷಿಸಿದೆ.

    ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಪಿಂಚಣಿ ನೀಡಲು ಒಪ್ಪಿಗೆ ಸೂಚಿಸಿರುವುದಾಗಿ ಸಚಿವ ಓಂಪ್ರಕಾಶ್ ಯಾದವ್ ಹೇಳಿದ್ದಾರೆ. ಸಾಮಾಜಿಕ ಭದ್ರತೆ ಪಿಂಚಣಿ ಯೋಜನೆ ಅಡಿಯಲ್ಲಿ ಹಿರಿಯರ ಪಿಂಚಣಿ ಜತೆಗೆ ಕ್ಯಾನ್ಸರ್ ರೋಗಿಗಳು ಮತ್ತು ತೀವ್ರ ಸ್ಮರೂಪದ ಕಿಡ್ನಿ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ನೆರವು ನೀಡುವುದಾಗಿ ಸಚಿವರು ಹೇಳಿದ್ದಾರೆ.

    ರಾಜ್ಯದಲ್ಲಿ ಸುಮಾರು 28 ಲಕ್ಷ ಮಂದಿ ಸಾಮಾಜಿಕ ಭದ್ರತೆ ಪಿಂಚಣಿ ಯೋಜನೆ ಆಡಿಯಲ್ಲಿ ತಿಂಗಳಿಗೆ 2250 ರೂಪಾಯಿ ಪಡೆಯುತ್ತಿದ್ದು, ಅದನ್ನು ಕ್ಯಾನ್ಸರ್​ ಮತ್ತು ಕಿಡ್ನಿ ರೋಗಿಗಳಿಗೂ ಮುಂದುವರೆಸುವುದಾಗಿ ಮಾಹಿತಿ ನೀಡಿದರು.

    ಇದನ್ನೂ ಓದಿ: ತಳವಾರ, ಪರಿವಾರ, ಸಿದ್ಧಿ ಜನಾಂಗ ಎಸ್​ಟಿಗೆ: ಅಧಿಸೂಚನೆ ಪ್ರಕಟ

    ಕೇಂದ್ರ ಸರ್ಕಾರದ ‘ಒನ್ ನೇಷನ್, ಒನ್ ರೇಷನ್ ಕಾರ್ಡ್’ ಯೋಜನೆ ಜಾರಿಗೆ ಕುರಿತಂತೆ ಮನೋಹರ್ ಲಾಲ್ ಖಟ್ಟರ್ ಅವರು ಅಧಿಕಾರಿಗಳ ಜತೆಗೆ ಮಾತುಕತೆ ನಡೆಸಿದ್ದಾರೆ. “ಹರಿಯಾಣದಲ್ಲಿ ಇರುವ ಇತರ ರಾಜ್ಯಗಳ ಕಾರ್ಮಿಕರಿಗೆ ಪ್ರತ್ಯೇಕ ರೇಷನ್ ಕಾರ್ಡ್ ಬೇಡ. ಅವರ ಬಳಿ ಇರುವ ರೇಷನ್ ಕಾರ್ಡ್​ ಮೂಲಕವೇ ಆನ್ ಲೈನ್ ನಲ್ಲಿ ರೇಷನ್ ಪಡೆಯುತ್ತಾರೆ” ಎಂದು ಸಚಿವರು ತಿಳಿಸಿದ್ದಾರೆ.

    ಆಧಾರ್ ಜತೆಗೆ ಜೋಡಣೆ ಆಗಿರುವ ಎಲ್ಲ ರಾಜ್ಯಗಳ ರೇಷನ್ ಕಾರ್ಡ್ ದಾರರಿಗೂ ಈ ಯೋಜನೆಯನ್ನು ಆರಂಭಿಸುವುದಾಗಿ ತಿಳಿಸಲಾಗಿದೆ. (ಏಜೆನ್ಸೀಸ್​)

    VIDEO: ಸೋನು ಅಂಕಲ್​… ಅಮ್ಮನನ್ನು ಅಜ್ಜಿ ಮನೆಗೆ ಕಳಿಸ್ತೀರಾ? ಪುಟಾಣಿ ಪ್ರಶ್ನೆಗೆ ನಟ ಕಂಗಾಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts