More

    ಪ್ರಾಯೋಗಿಕ ಪರೀಕ್ಷೆ ರದ್ದು, ನೇರ ದಾಖಲಾತಿಗೆ ಅಸ್ತು

    ಬೆಂಗಳೂರು: ಐಸಿಎಆರ್ (ಭಾರತೀಯ ಕೃಷಿ ಸಂಶೋಧನಾ ಮಂಡಳಿ) ನಿಯಮದಂತೆ ರಾಜ್ಯದಲ್ಲಿ ಕೃಷಿ ಪದವಿಯ ದಾಖಲಾತಿಗೆ ನಡೆಸಲಾಗುವ ಪ್ರಾಯೋಗಿಕ ಪರೀಕ್ಷೆಗಳನ್ನು ಕೋವಿಡ್​ ಹಿನ್ನೆಲೆಯಲ್ಲಿ ರದ್ದುಪಡಿಸಲಾಗಿದೆ.

    ಕೃಷಿಕರ ಕೋಟಾದ ಅಡಿಯಲ್ಲಿ ಶೇ.40 ಸೀಟುಗಳು ಕೃಷಿಕರ ಮಕ್ಕಳಿಗೇ ಮೀಸಲಿದೆ. ಪ್ರಾಯೋಗಿಕ ಪರೀಕ್ಷೆ ರದ್ದತಿಯು ಕೃಷಿಕರ ಮಕ್ಕಳಿಗೆ ಯಾವುದೇ ರೀತಿಯ ಅನ್ಯಾಯ ಉಂಟು ಮಾಡುವುದಿಲ್ಲ ಎಂದು ಸ್ವತಃ ಕೃಷಿ ಸಚಿವರೇ ಸ್ಪಷ್ಟಪಡಿಸಿದ್ದಾರೆ. ನೈಜ ಕೃಷಿಕರ ಮಕ್ಕಳು ಮಾತ್ರ ಕೃಷಿಕರ ಕೋಟಾದಲ್ಲಿ ಸೀಟುಗಳನ್ನು ಪಡೆದುಕೊಳ್ಳುವಂತೆ ಮಾಡಲು ಸರ್ವ ನಿಬಂಧನೆಯನ್ನು ಸಿದ್ಧಪಡಿಸಲಾಗಿದೆ ಎಂದು ಸಚಿವ ಬಿ.ಸಿ. ಪಾಟೀಲ್​ ತಿಳಿಸಿದ್ದಾರೆ.

    ಇದನ್ನೂ ಓದಿರಿ video/ ವಿಸರ್ಜನೆಗೆಂದು ಗಣೇಶನನ್ನು ಮನೆಯಿಂದ ಒಯ್ಯುತ್ತಿದ್ದಂತೆ ನಡೆಯಿತು ಪವಾಡ!

    ಕರೊನಾ ಸೋಂಕು ವ್ಯಾಪಿಸುತ್ತಿರುವ ಪರಿಸ್ಥಿತಿಯಲ್ಲಿ ಸರ್ಕಾರವು ರೈತರ ಆರೋಗ್ಯ ಹಾಗೂ ಹಿತರಕ್ಷಣೆಗೆ ಹೆಚ್ಚಿನ ಮಹತ್ವ ನೀಡಿದೆ. 15,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಾಯೋಗಿಕ ಪರೀಕ್ಷೆಗಳಿಗೆ ಸ್ವತಃ ಹಾಜರಾಗಬೇಕಾಗುತ್ತದೆ. ಈ ಸಂದರ್ಭದಲ್ಲಿ ಸರ್ಕಾರದ ನಿರ್ದೇಶನದಂತೆ ಸಾಮಾಜಿಕ ಅಂತರ ಕಾಯ್ದುಕೊಂಡು ಪರೀಕ್ಷೆ ನಡೆಸುವುದು ಕಷ್ಟ ಸಾಧ್ಯ ಎಂದು ಟ್ವೀಟ್​ ಮಾಡಿರುವ ಕೃಷಿ ಸಚಿವ ಬಿ.ಸಿ. ಪಾಟೀಲ್​, ಹಾಗಾಗಿ ಕೃಷಿ ಪದವಿಯ ದಾಖಲಾತಿಗೆ ನಡೆಸಲಾಗುವ ಪ್ರಾಯೋಗಿಕ ಪರೀಕ್ಷೆಗಳನ್ನು ರದ್ದು ಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

    ಸಮಾಜದ ಪ್ರತಿ ಸಮುದಾಯವೂ ಈ ಪರೀಕ್ಷೆಯ ರದ್ದತಿಯನ್ನು ತೆರೆದ ಮನದಿಂದ ಸ್ವಾಗತಿಸಿದೆ. ಕೃಷಿ ಸಮಾಜದ ಉದ್ಧಾರಕ್ಕಾಗಿ ತೆಗೆದುಕೊಳ್ಳಲಾದ ನಿರ್ಧಾರಗಳನ್ನು ಸ್ವಾಗತಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಸಚಿವರು ಹೇಳಿದ್ದಾರೆ.

    ಮಿಸ್ಟರ್ ಡಿಕೆಶಿ, ನೀವು ಜಾಮೀನಿನ ಮೇಲೆ ಹೊರಗಿದ್ದೀರಿ ಎಂಬುದನ್ನ ಅರಿತುಕೊಳ್ಳಿ; ಪ್ರಹ್ಲಾದ್ ಜೋಶಿ

    video/ ಗರಿಬಿಚ್ಚಿ ಪ್ರಧಾನಿ ಮೋದಿ ಜತೆ ಹೆಜ್ಜೆ ಹಾಕಿದ ನವಿಲು… ಇದು ‘ನಮೋ’ ಅಮೂಲ್ಯ ಕ್ಷಣಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts