More

    ಟ್ವಿಟರ್​ ತುಂಬಾ ’12ನೇ ತರಗತಿ ಸಿಬಿಎಸ್​ಇ ಪರೀಕ್ಷೆ ರದ್ದುಗೊಳಿಸಿ’ ಎಂಬ ಕೂಗು!

    ನವದೆಹಲಿ : ಕರೊನಾ ಉಲ್ಬಣದ ಹಿನ್ನೆಲೆಯಲ್ಲಿ, ಸಿಬಿಎಸ್‌ಇ ಮಂಡಳಿಯು 10ನೇ ತರಗತಿ ಪರೀಕ್ಷೆಗಳನ್ನು ರದ್ದುಗೊಳಿಸಿ, ಆಬ್ಜೆಕ್ಟೀವ್ ಕ್ರೈಟೀರಿಯಾ ಆಧರಿಸಿ ವಿದ್ಯಾರ್ಥಿಗಳಿಗೆ 11 ನೇ ತರಗತಿಗೆ ಬಡ್ತಿ ನೀಡುವುದಾಗಿ ಘೋಷಿಸಿದೆ. ಆದರೆ 12 ನೇ ತರಗತಿಯ ಪರೀಕ್ಷೆಗಳನ್ನು ಮುಂದೂಡಿರುವ ಮಂಡಳಿ, ಜೂನ್​ 1 ರಂದು ಪರಿಸ್ಥಿತಿಯನ್ನು ಗಮನಿಸಿ ಹೊಸ ದಿನಾಂಕದ ಬಗ್ಗೆ ನಿರ್ಧಾರ ಮಾಡುವುದಾಗಿ ಹೇಳಿದೆ.

    ಬಹುತೇಕ 12 ನೇ ತರಗತಿ ವಿದ್ಯಾರ್ಥಿಗಳು ತಮ್ಮ ಪರೀಕ್ಷೆಗಳ ಬಗೆಗಿನ ಈ ಅನಿಶ್ಚಿತತೆಯ ಬಗ್ಗೆ ಚಿಂತಿತರಾಗಿದ್ದಾರೆ. ತಮ್ಮ ಅಸಮಾಧಾನವನ್ನು ಟ್ವಿಟರ್​ನಲ್ಲಿ ತೋರಿಸುತ್ತಿರುವ ಸಾವಿರಾರು ವಿದ್ಯಾರ್ಥಿಗಳು, #cancel12thboardexams2021 (12ನೇ ತರಗತಿ ಬೋರ್ಡ್​​ ಪರೀಕ್ಷೆಗಳನ್ನು ರದ್ದುಗೊಳಿಸಿ) ಎಂಬ ಟ್ರೆಂಡ್​ ಶುರು ಮಾಡಿದ್ದಾರೆ. ಈ ಹ್ಯಾಷ್​ಟ್ಯಾಗ್​​ ಹೊಂದಿದ ಒಂದು ಮಿಲಿಯನ್​ ಟ್ವೀಟ್​ಗಳು ಈಗಾಗಲೇ ಜಾಲತಾಣದಲ್ಲಿ ಹರಿದಾಡಿದ್ದು, 12 ನೇ ತರಗತಿ ಪರೀಕ್ಷೆಗಳನ್ನು ರದ್ದುಗೊಳಿಸಿ ಎಂಬ ಕೂಗೆದ್ದಿದೆ. (ಏಜೆನ್ಸೀಸ್)

    ಹುಷಾರ್​, ಚುನಾವಣೆ ಗೆಲುವನ್ನು ಆಚರಿಸಲು ಗುಂಪು ಸೇರಿದರೆ ಕೇಸ್ !

    VIDEO | ಡಿಎಂಕೆ ಪಕ್ಷಕ್ಕೆ ಮುನ್ನಡೆ : ಬೀದಿಗಿಳಿದು ಸಂಭ್ರಮ ಆಚರಿಸಿದ ಬೆಂಬಲಿಗರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts