More

    ಕಾಲುವೆ ಆಧುನೀಕರಣ ಕಾಮಗಾರಿ ಕಳಪೆ- ಮಾಜಿ ಸಚಿವ ಶಿವರಾಜ ತಂಗಡಗಿ ಆರೋಪ

    ಕಾರಟಗಿ: ತಾಲೂಕಿನ ಸೋಮನಾಳ ಗ್ರಾಮದ ಬಳಿಯ ತುಂಗಭದ್ರಾ ಎಡದಂಡೆ ಆಧುನೀಕರಣ ಕಾಮಗಾರಿ ಕಳಪೆಯಾಗಿದ್ದು, ಅನ್ನದಾತರ ವಿಚಾರದಲ್ಲಿ ಅಸಡ್ಡೆ ತರವಲ್ಲ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಆಕ್ರೋಶ ವ್ಯಕ್ತಪಡಿಸಿದರು.

    ಸೋಮನಾಳ ಬಳಿ ತುಂಗಭದ್ರಾ ಎಡದಂಡೆ ಕಾಲುವೆ ಆಧುನೀಕರಣ ಕಾಮಗಾರಿಯನ್ನು ಮಂಗಳವಾರ ವೀಕ್ಷಿಸಿದ ಬಳಿಕ ಮಾತನಾಡಿದರು. ರೈತರಿಗೆ ಸಮಸ್ಯೆಯಾಗಬಾರದು ಎನ್ನುವ ಉದ್ದೇಶದಿಂದ ಕಾಲುವೆ ಆಧುನೀಕರಣ ಮಾಡಲಾಗುತ್ತಿದೆ. ಜಲಾಶಯದಿಂದ ಕಾಲುವೆಗೆ ನೀರು ಹರಿಸುವ ವೇಳೆ ಅನೇಕ ಬಾರಿ ಸೋಮನಾಳ ಗ್ರಾಮದ ಬಳಿ ಕಾಲುವೆ ಹೊಡೆದಿದೆ. ಈ ಬಾರಿಯೂ ಸಹ ಇಂಥ ದುರ್ಘಟನೆಗಳು ನಡೆಯಬಾರದು. ಉತ್ತಮ ಗುಣಮಟ್ಟದ ಕಾಮಗಾರಿ ನಡೆಯಬೇಕು ಎಂದರು. ಮಂತ್ಲಿ ಮಾಮೂಲು: ಬಿಜೆಪಿ ಸರ್ಕಾರದಲ್ಲಿ ಜಿಲ್ಲಾ ಮಂತ್ರಿಗಳು ಬ್ರಾಂಡಿ ಶಾಪ್ ಗೆ ಮಂತ್ಲಿ ಮಾಮೂಲು ಪಡೆಯುತ್ತಿದ್ದಾರೆ ಎಂದು ತಂಗಡಗಿ ಆರೋಪ ಮಾಡಿದರು. ಈ ಸಂಬಂಧ ಬಿಜೆಪಿ ಮುಖಂಡರು ಸಾಕ್ಷಿ ಕೇಳಿದರೂ ಸಹ ನಾನು ನೀಡುತ್ತೇನೆ. ಅನೈತಿಕತೆಯಿಂದ ಮಂತ್ರಿಗಿರಿ ಪಡೆದಿದ್ದಾರೆ. ಜಿಲ್ಲೆಯ ವಿವಿಧೆಡೆ ಇಂದಿಗೂ ರಾಜರೋಷವಾಗಿ ಜೂಜಾಟ, ಮಟ್ಕಾ, ಮರಳು ದಂಧೆ ನಡೆಯುತ್ತಿದೆ ಎಂದು ವ್ಯಂಗ್ಯವಾಡಿದರು. ಮುಖಂಡರಾದ ಅಂಬಣ್ಣ ನಾಯಕ, ದೊಡ್ಡಪ್ಪ ದೇಸಾಯಿ, ನೀರಲೂಟಿ ಸಿದ್ದಪ್ಪ, ಬಸವರಾಜ ಪಗಡದಿನ್ನಿ, ಜಡಿಯಪ್ಪ, ವಿರೇಶ್ ಬೇವಿನಾಳ, ಉಮೇಶ್ ಭಂಗಿ, ಜಿಪಂ ಸದಸ್ಯ ಅಮರೇಶ ಗೋನಾಳ, ತಾಪಂ ಸದಸ್ಯ ದಾನನಗೌಡ ಸೇರಿ ಇತರರಿದ್ದರು.

    ನೀರಾವರಿ ಅಧಿಕಾರಿಗೆ ತರಾಟೆ
    ಕಾಮಗಾರಿ ವೀಕ್ಷಣೆ ಸಂದರ್ಭ ಮಾಜಿ ಶಾಸಕ ಶಿವರಾಜ ತಂಗಡಗಿ ನೀರಾವರಿ ಇಲಾಖೆ ಅಧಿಕಾರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಕಾಮಗಾರಿ ಗುಣಮಟ್ಟದಿಂದ ಕೂಡಿಲ್ಲ. ವಿವಿಧೆಡೆ ಕಾಮಗಾರಿ ನಿಯಮಗಳನ್ನು ಉಲ್ಲಂಘಿಸಿ ಕೆಲಸ ನಡೆದಿದೆ. ಮುಂದಿನ ದಿನಗಳಲ್ಲಿ ಗುಣಮಟ್ಟದ ಕೆಲಸ ನಡೆಯಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts