More

    ಕಲರ್​ಫುಲ್​ ಬಿಕಿನಿಯಲ್ಲಿ ಕ್ಯಾಮೆರಾಗೆ ಪೋಸ್​ ನೀಡಿರುವ ಬೋಲ್ಡ್​ ಬ್ಯೂಟಿ ಯಾರೆಂದು ಗುರುತಿಸುವಿರಾ?

    ನವದೆಹಲಿ: ಮಾಲ್ಡೀವ್ಸ್​ ಪ್ರವಾಸಿಗರ ನೆಚ್ಚಿನ ತಾಣ ಎಂಬುದರಲ್ಲಿ ಸಂಶಯವೇ ಇಲ್ಲ. ಅದರಲ್ಲೂ ಸಿನಿಮಾ ನಟಿಯರಿಗಂತೂ ಮಾಲ್ಡೀವ್ಸ್​ ಕಡಲ ಕಿನಾರೆಯೆಂದರೆ ಎಲ್ಲಲ್ಲಿದ ಪ್ರೀತಿ. ಹೀಗಾಗಿಯೇ ಬಿಕಿನಿ ತೊಟ್ಟು ಬೀಚ್​ನಲ್ಲಿ ಮಿಂದೇಳುವ ಮೂಲಕ ಸಖತ್​ ಎಂಜಾಯ್​ ಮಾಡುತ್ತಾರೆ. ಇದಕ್ಕೆ ಸಂಬಂಧಪಟ್ಟ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಿಗೆ ಹರಿಬಿಟ್ಟು ಅಭಿಮಾನಗಳ ಮನತಣಿಸುವುದಲ್ಲದೇ ಸಖತ್​ ಲೈಕ್ಸ್​ಗಳನ್ನು ಗಿಟ್ಟಿಸಿಕೊಳ್ಳುತ್ತಾರೆ.

    ಬಾಲಿವುಡ್​ ನಟಿ ಎಲಿ ಅವ್ರಾಮ್​ ಇದೀಗ ಮಾಲ್ಡೀವ್ಸ್​ ಭೇಟಿ ಕೊಟ್ಟಿದ್ದು, ಕಲರ್​ಫುಲ್​ ಬಿಕಿನಿಯಲ್ಲಿ ಕಡಲ ಕಿನಾರೆಯಲ್ಲಿ ಹಾಲಿಡೇ ಎಂಜಾಯ್​ ಮಾಡುತ್ತಿರುವ ಫೋಟೋಗಳನ್ನು ಗುರುವಾರ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹರಿಬಿಟ್ಟಿದ್ದಾರೆ.

    ಇದನ್ನೂ ಓದಿ: ಉಗ್ರರ ಗುಂಡಿನ ದಾಳಿಗೆ ಜಮ್ಮು ಕಾಶ್ಮೀರದ ಮೂವರು ಯುವ ಬಿಜೆಪಿ ನಾಯಕರ ಸಾವು

    ಒಂದು ಫೋಟೋದಲ್ಲಿ ಎಲಿ ಅವ್ರಾಮ್​ ಸ್ವಿಮ್ಮಿಂಗ್​ ಫೂಲ್​ನಲ್ಲಿ ಬ್ರೇಕ್​ಫಾಸ್ಟ್​ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಮತ್ತೊಂದರಲ್ಲಿ ವರ್ಣರಂಜಿತ ಬಿಕಿನಿಯಲ್ಲಿ ಶ್ರಗ್​ ಮತ್ತು ಸನ್​ ಹ್ಯಾಟ್​ ಧರಿಸಿ ಫೋಟೋಗೆ ಪೋಸ್​ ನೀಡಿದ್ದಾರೆ. ತಮ್ಮ ಫೋಟೋಗಳಿಗೆ ಮಾಲ್ಡೀವ್ಸ್​ನಲ್ಲಿ ನವಯೌವನ ಪಡೆಯುವುದು ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ. ಇದೀಗ ಅವರ ಫೋಟೋ ಜಾಲತಾಣದಲ್ಲಿ ವೈರಲ್​ ಆಗಿದ್ದು, ಲಕ್ಷಾಂತರ ಲೈಕ್ಸ್​ಗಳನ್ನು ಗಿಟ್ಟಿಸಿಕೊಂಡಿವೆ.

    ಎಲಿ ಅವ್ರಾಮ್​ ತಮ್ಮ ಡ್ಯಾನ್ಸ್​ ವಿಡಿಯೋಗಳಿಂದಲೇ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್​​ ಸೃಷ್ಟಿ ಮಾಡುತ್ತಾರೆ. ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ಎಲಿ, ಸೌರಭ್​ ವರ್ಮಾ ಅವರ ಮಿಕಿ ವೈರಸ್​ ಹಾಸ್ಯಭರತಿ ಚಿತ್ರದ ಮೂಲಕ ಬಾಲಿವುಡ್​ಗೆ ಕಾಲಿಟ್ಟರು. ಬಳಿಕ ಹಾಸ್ಯನಟ ಕಪಿಲ್​ ಶರ್ಮಾರ ಮೊದಲ ಚಿತ್ರ ಕಿಸ್​ ಕಿಸ್ಕೋ ಪ್ಯಾರ್​ ಕರೂನ್​ ಚಿತ್ರದಲ್ಲಿ ನಟಿಸಿದರು. ನಟಿ ತಾಪ್ಸಿ ಪನ್ನು ಅವರ ನಾಮ್ ಶಬಾನಾ ಚಿತ್ರದಲ್ಲಿ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

    ಇದನ್ನೂ ಓದಿ: ಸುಟ್ಟ ಕಾರಿನಲ್ಲಿ ಶವ ಪತ್ತೆ ಪ್ರಕರಣ: ಪತ್ನಿಯ ಪ್ರೀತಿ ನಾಟಕ ನಂಬಿ ಹೋದವನಿಗೆ ಕಾದಿತ್ತು ದುರಂತ ಸಾವು!

    ಎಲಿ ಅವರು ಬಿಗ್​ಬಾಸ್​ 7ನೇ ಆವೃತ್ತಿಯಲ್ಲಿ ಭಾಗವಹಿಸಿದ್ದಾರೆ. ಸೀಸನ್​ 8 ಮತ್ತು 9ರಲ್ಲಿ ಅತಿಥಿಯಾಗಿ ಆಗಮಿಸಿದ್ದರು. ಕಪಿಲ್​ ಶರ್ಮಾರ ಕಾಮಿಡಿ ನೈಟ್​ ವಿತ್​ ಕಪಿಲ್​ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಜಲಕ್​ ದಿಕಲಾಜಾ 7ನೇ ಆವೃತ್ತಿಯಲ್ಲೂ ಸ್ಪರ್ಧಿಯಾಗಿ ಎಲಿ ಭಾಗವಹಿಸಿದ್ದಾರೆ. (ಏಜೆನ್ಸೀಸ್​)

    ಅತ್ತೆ ಜತೆ ಅಳಿಯನ ಅಕ್ರಮ ಸಂಬಂಧ: ನವವಧು ಆತ್ಮಹತ್ಯೆ ಬೆನ್ನಲ್ಲೇ ವರನ ದುರಂತ ಸಾವು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts