More

    ಕ್ಯಾಂಪ್ ಠಾಣೆ ಸೀಲ್‌ಡೌನ್

    ಬೆಳಗಾವಿ: ಬಂಗಾರದ ಆಭರಣ ಅಂಗಡಿ ಮಾಲೀಕರಿಗೆ ಪಿಸ್ತೂಲ್ ತೋರಿಸಿ ಚಿನ್ನಾಭರಣ ಕಳ್ಳತನ ಮಾಡಿರುವ ಪ್ರಕರಣದ ಆರೋಪಿಗೆ ಕರೊನಾ ಸೋಂಕು ದೃಢಪಟ್ಟಿದೆ. ಆರೋಪಿಯನ್ನು ದಸ್ತಗಿರಿ ಮಾಡಿ, ತನಿಖೆ ನಡೆಸಿದ್ದ ಕ್ಯಾಂಪ್ ಠಾಣೆಯ ಪೊಲೀಸ್ ಸಿಬ್ಬಂದಿಯನ್ನು ಕ್ವಾರೆಂಟೈನ್‌ನಲ್ಲಿಡಲಾಗಿದೆ. ಹೀಗಾಗಿ ಇಡೀ ಠಾಣೆಗೆ ಸ್ಯಾನಿಟೈಜೇಷನ್ ಮಾಡಿ, ಶುಕ್ರವಾರ ಸೀಲ್‌ಡೌನ್ ಮಾಡಲಾಗಿದೆ.

    ಬಂಧಿಸಿದ ನಂತರ ಆರೋಪಿಯನ್ನು ವಿಚಾರಣೆಗೆ ಒಳಪಡಿಸುವ ಮೊದಲು ಆರೋಗ್ಯ ತಪಾಸಣೆ ನಡೆಸಿ, ಆತನ ಗಂಟಲು ದ್ರವ ಮಾದರಿಯನ್ನೂ ಸಂಗ್ರಹಿಸಲಾಗಿತ್ತು. ಆದರೆ, ಮೂರು ದಿನಗಳ ಬಳಿಕ ಶುಕ್ರವಾರ ಬಂದ ಪರೀಕ್ಷಾ ವರದಿಯಲ್ಲಿ ಕರೊನಾ ಸೋಂಕು ದೃಢಪಟ್ಟಿದೆ. ತನಿಖೆ ಸಂದರ್ಭದಲ್ಲಿ ಆರೋಪಿಯ ಸಂಪರ್ಕದಲ್ಲಿದ್ದ ಠಾಣೆಯ ಇನ್‌ಸ್ಪೆಕ್ಟರ್ ಡಿ. ಸಂತೋಷಕುಮಾರ್ ಸೇರಿದಂತೆ 10 ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಆರೋಪಿಯ ಬಂಧನದ ನಂತರ ಪೊಲೀಸರು ಠಾಣೆಯ ಎದುರು ಸುದ್ದಿಗೋಷ್ಠಿಯನ್ನೂ ನಡೆಸಿದ್ದರು. ಅಲ್ಲಿ ವಿವಿಧ ಪತ್ರಿಕೆ ಹಾಗೂ ಸುದ್ದಿವಾಹಿನಿಗಳ ಕ್ಯಾಮರಾಮನ್ ಹಾಗೂ ಕೆಲ ಪತ್ರಕರ್ತರು ಹಾಜರಿದ್ದು, ಅಪರಾಧ ವಿಭಾಗದ ಡಿಸಿಪಿಯಿಂದ ಮಾಹಿತಿ ಪಡೆದಿದ್ದರು. ಸುದ್ದಿಗೋಷ್ಠಿ ನಂತರ ಆರೋಪಿಯನ್ನು ಹಿಂಡಲಗಾ ಜೈಲಿಗೆ ಕಳುಹಿಸಲಾಗಿತ್ತು.

    ಮಾಸ್ಕ್ ಹಾಕಿರಲಿಲ್ಲ: ಆರೋಪಿ ಹಿಂಡಲಗಾ ರೋಡ್ ವಿಜಯನಗರದಲ್ಲಿರುವ ಸಮೃದ್ಧಿ ಜ್ಯುವೆಲರ್ಸ್‌ನಲ್ಲಿ ಜೂ. 27ರಂದು ಪಿಸ್ತೂಲ್ ತೋರಿಸಿ ಹೆದರಿಸುವಾಗಲೂ ಮಾಲೀಕರೊಂದಿಗೆ ಅತಿ ಸಮೀಪದಲ್ಲಿದ್ದುಕೊಂಡೇ ಮಾತನಾಡಿ, ಚಿನ್ನಾಭರಣ ಸಮೇತ ಪರಾರಿಯಾಗಿರುವ ದೃಶ್ಯ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಸಂದರ್ಭದಲ್ಲಿ ಆತ ಮುಖಕ್ಕೆ ಮಾಸ್ಕ್ ಹಾಕಿರಲಿಲ್ಲ. ಹಾಗಾಗಿ ಜ್ಯುವೆಲರಿ ಮಾಲೀಕನೂ ಬೆಚ್ಚಿಬಿದ್ದಿದ್ದಾರೆ. ಅಲ್ಲದೆ, ಆರೋಪಿ ವಾಸಿಸುತ್ತಿದ್ದ ಮಜಗಾಂವದ ಸಂತ ಜ್ಞಾನೇಶ್ವರ ನಗರದ ಸಾರ್ವಜನಿಕರು ಕೂಡ ತೀವ್ರ ಆತಂಕಗೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts