More

    ಎಣ್ಣೆಗಾಗಿ ನೆರೆ ರಾಜ್ಯದ ಗಡಿ ದಾಟಿ ಬಂದ ಮದ್ಯ ಪ್ರಿಯರು

    ಆನೇಕಲ್: ನೆರೆ ರಾಜ್ಯ ತಮಿಳುನಾಡಿನ ಗಡಿ ಪ್ರದೇಶದ ಜನರು ಮದ್ಯ ಖರೀದಿಗಾಗಿ ಆನೇಕಲ್​ಗೆ ಆಗಮಿಸಿರುವುದರಿಂದ ಇಡೀ ಪಟ್ಣಣ ಜನಜಂಗುಳಿಯಿಂದ ಕೂಡಿದೆ. ಅಲ್ಲದೆ ಮದ್ಯದ ಅಂಗಡಿಗಳ ಮುಂದೆ ಕಿಲೋಮೀಟರ್​ ದೂರದ ಸಾಲುಗಳು ಕಂಡು ಬಂದಿದೆ.

    ಆನೇಕಲ್​, ಅತ್ತಿಬೆಲೆ ಗಡಿಗೆ ಹೊಂದಿಕೊಂಡಂತೆ ಇರುವ ಗ್ರಾಮಗಳಿಂದ ಜನರು ತಂಡೋಪವಾಗಿ ಆಗಮಿಸಿದ್ದಾರೆ.
    ಜನರು ಗುಂಪು, ಗುಂಪಾಗಿ ಬೆಳಗ್ಗೆಯೇ ಪಟ್ಟಣಕ್ಕೆ ಆಗಮಿಸಿ ಮದ್ಯದ ಅಂಗಡಿಗಳ ಮುಂದೆ ಸಾಲು ನಿಂತರು. ಗಡಿ ಗ್ರಾಮದ ಜನರು ಮದ್ಯಕ್ಕಾಗಿ ದೂರದ ಹೊಸೂರಿಗೆ ತೆರಳಬೇಕಾಗಿರುವ ಹಿನ್ನೆಲೆಯಲ್ಲಿ ಹತ್ತಿರ ಇರುವ ಆನೇಕಲ್​ಗೆ ಆಗಮಿಸಿದ್ದಾರೆ.

    ಇದರಿಂದ ಪಟ್ಟಣದಲ್ಲಿ ಜನಜಂಗುಳಿ ಕಂಡು ಬಂದಿದೆ. ಮದ್ಯದ ಅಂಗಡಿಗಳು ಸಾಮಾಜಿಕ ಅಂತರ ಕಾಪಾಡಲು ಕಟ್ಟುನಿಟ್ಟಿನ ಸೂಚನೆ ಪಾಲಿಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)

    ಇದನ್ನೂ ಓದಿ ಮದ್ಯದಂಗಡಿ ಲಾಕ್ ಓಪನ್ ಮಾಡಿದ ಸರ್ಕಾರ: ಭಾರಿ ಸಂಭ್ರಮದಲ್ಲಿದ್ದಾರೆ ಮದ್ಯಪ್ರಿಯರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts