More

    ಕಾಲ್ ಮಿ ಚಿತ್ರೀಕರಣಕ್ಕೆ ಚಾಲನೆ

    ಗದಗ: ‘ನಾ ಅದೀನಿ’ ಚಿತ್ರ ತಂಡದಿಂದ ‘ಕಾಲ್ ಮಿ’ ಎಂಬ ಕನ್ನಡ ಕಿರುಚಲನಚಿತ್ರದ ಚಿತ್ರೀಕರಣಕ್ಕೆ ನಗರದ ಮುಳಗುಂದ ರಸ್ತೆಯ ದುರ್ಗಮ್ಮ ದೇವಸ್ಥಾನ ಸಮೀಪ ಜಿಲ್ಲಾ ಪೊಲೀಸ್ ಉಪ ವರಿಷ್ಠಾಧಿಕಾರಿ ಎಸ್.ಕೆ. ಪ್ರಲ್ಹಾದ ಬುಧವಾರ ಚಾಲನೆ ನೀಡಿದರು.

    ಈ ವೇಳೆ ಮಾತನಾಡಿದ ಅವರು, ಸ್ಥಳೀಯ ಪ್ರತಿಭೆಗಳಿಗೆ ಚಿತ್ರತಂಡ ವೇದಿಕೆ ನೀಡಿದೆ. ಇನ್ನೂ ಹೆಚ್ಚು ಪ್ರತಿಭೆಗಳು ನಿಮ್ಮ ತಂಡದ ಮೂಲಕ ಬೆಳಕಿಗೆ ಬರಲಿ ಎಂದರು.

    ಸಾಮಾಜಿಕ ಜಾಗೃತಿ ಮೂಡಿಸುವ ಕಥಾವಸ್ತು ಹೊಂದಿರುವ ಈ ಚಿತ್ರದ ಚಿತ್ರೀಕರಣ ಗದಗ ಸುತ್ತಮುತ್ತಲ ಪ್ರದೇಶದಲ್ಲಿ ನಡೆಯಲಿದೆ. ಸ್ಥಳೀಯ ಕಲಾವಿದರೇ ಅಭಿನಯಿಸುತ್ತಿದ್ದಾರೆ ಎಂದು ಚಿತ್ರದ ನಿರ್ದೇಶಕ ಬಿ. ಮೌನೇಶ ತಿಳಿಸಿದರು.

    ನವ ಕರ್ನಾಟಕ ಜನಪರ ಅಭಿವೃದ್ಧಿ ವೇದಿಕೆ ಸಂಚಾಲಕ ಪ್ರಭಾಕರ ಹೆಬಸೂರ, ಇಂಜಿನಿಯರ್ ಶ್ರೀನಿವಾಸ ಬೆಟಗೇರಿ, ವರ್ತಕ ಸಂತೋಷ ಗುಡ್ಡದ, ಚಿತ್ರದ ಸಹ ನಿರ್ದೇಶಕರಾದ ಡಾ. ಪ್ರಭು ಗಂಜಿಹಾಳ, ಬಿ. ಮಹೇಶ ಆಚಾರ್ಯ, ನಿರ್ಮಾಣ ಮೇಲ್ವಿಚಾರಕ ಸುನೀಲಸಿಂಗ್ ಲದ್ದಿಗೇರಿ, ಛಾಯಾಗ್ರಹಣ ಹಾಗೂ ಸಂಕಲನಕಾರ ಉಮೇಶ ಸಜ್ಜನ, ರಾಜು ಪವಾರ, ತುಳಸಿನಾಥ ಪವಾರ, ಕಲಾವಿದರಾದ ಆರ್.ಎನ್. ಕುಲಕರ್ಣಿ, ಗಾಯತ್ರಿ ಹಿರೇಮಠ, ಸುನಂದಾ ಹಿರೇಮಠ, ಮಂಜು ಡಂಬಳ, ರಾಚಯ್ಯ ಹೊಸಮಠ, ಶಂಕರ ಮಡ್ಲೂರ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts