More

    ಸೆರೆ ಹಿಡಿದು 3 ದಿನವಾದ್ರೂ ಈ ಮಂಗಗಳಿಗೆ ಊಟ ಕೊಟ್ಟಿರಲಿಲ್ಲ!

    ಚಾಮರಾಜನಗರ : ಊರಿಗೆ ಬಂದು ತೊಂದರೆ ನೀಡುತ್ತಿದ್ದ 50 ಕ್ಕೂ ಹೆಚ್ಚು ಕೋತಿಗಳನ್ನು ಸೆರೆ ಹಿಡಿಸಿ ಆಹಾರವನ್ನೂ ಕೊಡದೆ ಮೂರು ದಿನ ಪುಟ್ಟ ಬೋನುಗಳಲ್ಲಿ ತುಂಬಿಟ್ಟಿದ್ದ ಪ್ರಸಂಗ ಚಾಮರಾಜನಗರ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ. ಈ ಬಗ್ಗೆ ಗ್ರಾಮದ ಪ್ರಜ್ಞಾವಂತ ಯುವಕರು ಪೊಲೀಸ್ ಮತ್ತು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ನಂತರ ಅವುಗಳನ್ನು ಅರಣ್ಯಕ್ಕೆ ಒಯ್ದು ಬಿಡುಗಡೆ ಮಾಡಲಾಗಿದೆ.

    ಚಾಮರಾಜನಗರ ತಾಲೂಕಿನ ಕಾಗಲವಾಡಿ ಗ್ರಾಮದಲ್ಲಿ ಮಂಗಗಳ ಉಪಟಳ ಹೆಚ್ಚಾಗಿದ್ದ ಕಾರಣ ಗ್ರಾಮ ಪಂಚಾಯಿತಿ ವತಿಯಿಂದ ಹಣ ವೆಚ್ಚ ಮಾಡಿ ಸೆರೆ ಹಿಡಿಸಲಾಗಿತ್ತು. ಆದರೆ, ನಂತರ ಅವುಗಳನ್ನು ಎರಡು ಬೋನುಗಳಲ್ಲಿ ಒತ್ತೊತ್ತಾಗಿ ಕೂಡಿ ಹಾಕಿದ್ದು, ಮೂರು ದಿನಗಳಿಂದ ತಿನ್ನಲು ಏನನ್ನೂ ಕೊಡದೆ ಹೀನಾಯ ಸ್ಥಿತಿಯಲ್ಲಿರಿಸಲಾಗಿತ್ತು ಎಂಬ ಆರೋಪ ಕೇಳಿಬಂದಿದೆ.

    ಇದನ್ನೂ ಓದಿ: ಸಿಎಂ ಮನೆ ಮುಂದೆ ಮಹಿಳೆಯ ಏಕಾಂಗಿ ಪ್ರತಿಭಟನೆ! ಕಾರಣ ಏನು ಗೊತ್ತೆ?

    ಈ ಬಗ್ಗೆ ಗ್ರಾಮದ ಕೆಲವು ಪ್ರಜ್ಞಾವಂತ ಯುವಕರು ಪೊಲೀಸ್ ಹಾಗೂ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗು ಅರಣ್ಯ ಇಲಾಖೆ ಸಿಬ್ಬಂದಿ, ಬೋನಿನಲ್ಲಿ ಕೂಡಿಹಾಕಿದ್ದ ಕೋತಿಗಳನ್ನು ನಿನ್ನೆ ರಾತ್ರೋರಾತ್ರಿ ಬಿ.ಆರ್.ಟಿ. ಅರಣ್ಯಕ್ಕೆ ಒಯ್ದು ಅಲ್ಲಿ ಅವುಗಳನ್ನು ಬಿಡುಗಡೆ ಮಾಡಿದ್ದಾರೆ.

    ಸಿಎಂ ನಿವಾಸಕ್ಕೆ ಸಚಿವ ಆನಂದ್ ಸಿಂಗ್, ಶಾಸಕ ಸತೀಶ್ ರೆಡ್ಡಿ ದೌಡು! ಬೊಮ್ಮಾಯಿ ಹೇಳಿದ್ದೇನು?

    VIDEO | ಚಿನ್ನ ಗೆದ್ದ ನೀರಜ್​​ ಚೋಪ್ರಾರ ಜಾವಲಿನ್ ಎಸೆತ ನೋಡಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts