More

    ಡಿಟಿಎಚ್​ ಪರಿಷ್ಕೃತ ಮಾರ್ಗದರ್ಶಿಗೆ ಸಚಿವ ಸಂಪುಟ ಒಪ್ಪಿಗೆ – ಪರವಾನಗಿ 20 ವರ್ಷಕ್ಕೆ, ಎಫ್​ಡಿಐ 100%

    ನವದೆಹಲಿ: ದೇಶದಲ್ಲಿ ಡೈರೆಕ್ಟ್ ಟು ಹೋಮ್ (ಡಿಟಿಎಚ್​) ಸೇವೆಗಳಿಗೆ ಸಂಬಂಧಿಸಿದ ಪರಿಷ್ಕೃತ ಮಾರ್ಗಸೂಚಿಗೆ ಕೇಂದ್ರ ಸಚಿವ ಸಂಪುಟ ಇಂದು ಒಪ್ಪಿಗೆ ನೀಡಿದೆ. ಇದರಂತೆ, 20 ವರ್ಷಕ್ಕೆ ಅನ್ವಯವಾಗುವಂತೆ ಡಿಟಿಎಚ್​ ಪರವಾನಗಿ ಒದಗಿಸುವುದು, ಡಿಟಿಎಚ್​ ಕ್ಷೇತ್ರದಲ್ಲಿ ಶೇಕಡ 100 ವಿದೇಶಿ ನೇರ ಹೂಡಿಕೆ ಅವಕಾಶ ನೀಡುವುದು ಮುಂತಾದ ಅಂಶಗಳ ಸೇರ್ಪಡೆಯಾಗಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.

    ಭಾರತದಲ್ಲಿ 6 ಕೋಟಿಗೂ ಅಧಿಕ ಮನೆಗಳಿಗೆ ಡಿಟಿಎಚ್ ಸೇವೆ ಲಭ್ಯವಿದೆ. ವಾಣಿಜ್ಯ ಸಚಿವಾಲಯ ಈ ಹಿಂದೆಯೇ ಶೇಕಡ 100 ವಿದೇಶಿ ನೇರ ಹೂಡಿಕೆಗೆ ಅವಕಾಶ ನೀಡುವ ವಿಚಾರವನ್ನು ಪ್ರಸ್ತಾಪಿಸಿತ್ತು. ಆದರೆ, ವಾರ್ತಾ ಸಚಿವಾಲಯದ ಮಾರ್ಗಸೂಚಿಯ ಕಾರಣಕ್ಕೆ ಅದು ಅನುಷ್ಠಾನಗೊಂಡಿರಲಿಲ್ಲ. ಈಗ ಪರಿಷ್ಕೃತ ಮಾರ್ಗಸೂಚಿ ಮತ್ತು ವಾಣಿಜ್ಯ ಸಚಿವಾಲಯದ ನಿಯಮಗಳು ಪೂರಕವಾಗಿದ್ದು, ಡಿಟಿಎಚ್ ಕ್ಷೇತ್ರಕ್ಕೆ ಪ್ರಯೋಜನವಾಗಲಿದೆ ಎಂದು ಸ್ಪಷ್ಟಪಡಿಸಿದರು.

    ಇದನ್ನೂ ಓದಿ: ಯಾವ ಬೂತ್​ನಲ್ಲಿ ಎಷ್ಟು ಮತ ಬಿದ್ದಿರ್ಬೋದು? ಶಿವಮೊಗ್ಗದಲ್ಲಿ ಗ್ರಾಮ ಪಂಚಾಯಿತಿ ಮತ ಲೆಕ್ಕಚಾರ ಜೋರು

    ಸದ್ಯ ಚಾಲ್ತಿಯಲ್ಲಿರುವ ಮಾರ್ಗಸೂಚಿ ಪ್ರಕಾರ ಡಿಟಿಎಚ್​ ಕ್ಷೇತ್ರದಲ್ಲಿ ಶೇಕಡ 49 ವಿದೇಶಿ ನೇರ ಹೂಡಿಕೆಗೆ ಅವಕಾಶವಿರುವಂಥದ್ದು. ಇನ್ನು ಮುಂದೆ ಇದು ಶೇಕಡ 100 ಆಗಿರಲಿದೆ. ಪರಿಷ್ಕೃತ ಮಾರ್ಗಸೂಚಿ ಪ್ರಕಾರ, ಡಿಟಿಎಚ್ ಪರವಾನಗಿ ಆರಂಭದಲ್ಲಿ 20 ವರ್ಷಕ್ಕೆ ನೀಡಿ ನಂತರ ಪ್ರತಿ 10 ವರ್ಷಕ್ಕೊಮ್ಮೆ ನವೀಕರಿಸುವುದಕ್ಕೆ ಅವಕಾಶ ನೀಡಲಾಗಿದೆ ಎಂದು ಸಚಿವರು ತಿಳಿಸಿದರು. (ಏಜೆನ್ಸೀಸ್)

    ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

    ಸೈಬರ್ ಅಟ್ಯಾಕ್​ಗೆ ನಲುಗಿತು ಪ್ರಾದೇಶಿಕ ಪತ್ರಿಕೆ: ಬುಧವಾರದ ಸಂಚಿಕೆಯೇ ಪ್ರಕಟವಾಗಲಿಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts