More

    ಪೌರತ್ವ ಕಾಯ್ದೆ ಮನವರಿಕೆ ಮಾಡುವಲ್ಲಿ ಸಮನ್ವಯತೆ ಕೊರತೆ ; ಶ್ರೀ ರವಿಶಂಕರ ಗುರೂಜಿ ಹೇಳಿಕೆ

    ರಾಯಚೂರು ;
    ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಮತ್ತು ಅದರ‌ ಬಗ್ಗೆ ಕೂಲಂಕುಷವಾಗಿ ಎಲ್ಲರಿಗೂ ಮನವರಿಕೆ ಮಾಡಿಕೊಡುವಲ್ಲಿ ಸಮನ್ವಯತೆ ಕೊರತೆ ಆಗಿದ್ದು ಗೊಂದಲ ಮೂಡಿಸಿದೆ ಎಂದು ಆರ್ಟ್ ಆಫ್ ಲಿವಿಂಗ್ ಶ್ರೀ ರವಿಶಂಕರ್ ಗುರೂಜಿ ಹೇಳಿದರು.
    ರಾಯಚೂರಿನ ಸರ್ಕ್ಯೂಟ್ ಹೌಸ್ ಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಕಾಯ್ದೆ ಜಾರಿಯಿಂದ ಮುಸ್ಲಿಂರಿಗಾಗಲಿ ಅಥವಾ ಇ ನ್ಯಾರಿಗಾದರೂ ತೊಂದರೆಯಾದರೆ ಅವ ರೊಂದಿಗೆ ನಾನಿರುತ್ತೇನೆ ಎಂದು‌ ಭರವಸೆ ನೀಡಿದರು.
    ಪೌರತ್ವ ತಿದ್ದುಪಡಿ ಕಾಯ್ದೆಯ ಉದ್ದೇಶವನ್ನು ವಿರೋಧಿಸುವವರಿಗೆ ಹಾಗೂ ಆತಂಕದಲ್ಲಿ ರುವವರಿಗೆ ತಿಳಿಸಬೇಕು.
    ಬಾಧಿತರಾದವರಿಗೆ ಪೌರತ್ವ ನೀಡಬೇಕು ಎನ್ನುವುದು ನನ್ನ ಒತ್ತಾಯವಿದೆ. ಶ್ರೀಲಂಕಾ ದಿಂದ ಬಂದ 1.50 ಲಕ್ಷ ನಿರಾಶ್ರಿತರಿಗೆ ಹಕ್ಕು ನೀಡಬೇಕಿದೆ. ಬೇರೆ ದೇಶಗಳು ನೀಡುತ್ತಿವೆ.
    ಶರಣಾರ್ಥಿಗಳಾಗಿ ಬಂದಾಗ ಅವರಿಗೆ ಪೌರತ್ವ ನೀಡುವುದು ಎಲ್ಲಾ ದೇಶದಲ್ಲಿದೆ. ಪೌರತ್ವ ಕಾಯ್ದೆಯಿಂದ ಯಾವುದೇ ಧರ್ಮ ಹಾಗೂ ಜಾತಿಗೆ ತೊಂದರೆಯಾಗಬಾರದು.ಯಾವುದೇ ವಿಚಾರ ಪೂರ್ವಗ್ರಹ ಪೀಡಿತವಾಗಿಯೂ ಆಕ್ಷೇಪಣೆ ಸಲ್ಲದು.

    ಮುಂದಿನ ದಿನಗಳಲ್ಲಿ ಆರ್ಟ್ ಆಪ್ ಲಿವಿಂಗ್ ನ ೪೦ನೇ ವರ್ಷಾಚರಣೆಗೆ ಸಿದ್ದತೆ ನಡೆದಿದೆ. ದೇಶಿ ತಳಿಯ ಬೀಜಗಳನ್ನು ಸಂರಕ್ಷಿಸಬೇಕಾ ಗಿದೆ. ದೇಶಿಯ ತಳಿಗಳ ರಕ್ಷಣೆ ಮಾಡುವುದ ರಿಂದ ರೈತರು ಸ್ವಾವಲಂಬಿಗಳಾಗುತ್ತಾರೆ.
    ಮದ್ಯಪಾನ ನಿಷೇಧದ ಮಹಿಳೆಯರ ಹೋ ರಾಟದಲ್ಲಿ ನಾನು ಇದ್ದೇನೆ. ಆಯೋಧ್ಯೆ ಟ್ರಸ್ಟ್ ನಿರ್ಮಾಣದ ಬಗ್ಗೆ ಮಾಹಿತಿ ಇಲ್ಲ.
    ಗ್ರಾಮೀಣ ಭಾಗದಲ್ಲಿ ಯುವ ಕರ ಪಡೆ ಕಟ್ಟಿ ಆದರ್ಶ ಗ್ರಾಮವಾಗಿಸುವ ಪ್ರಯತ್ನಕ್ಕೆ ಮುಂ ದಾಗಿದ್ದೇವೆ.ಅವರಿಗೆ ಕೌಶಲ ತರಬೇತಿ, ಯೋ ಗ, ಸಣ್ಣ, ಪುಟ್ಟ ವ್ಯಾಜ್ಯ ನಿವಾರಣೆ, ಅಗತ್ಯ ವ್ಯವಹಾರಕ್ಕೆ ಅನುಕೂಲ ಕಲ್ಪಿಸಿಕೊಡುವ ಪ್ರಯತ್ನ ನಡೆಸಲಾಗುತ್ತದೆ ಎಂದು ತಿಳಿಸಿದರು .

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts