More

    ಸಿಎಎ ಜಾರಿ ಖಂಡಿಸಿ ಚನ್ನಪಟ್ಟಣದಲ್ಲಿ ಮುಸ್ಲಿಂ ಸಮುದಾಯದ ವತಿಯಿಂದ ಬೃಹತ್ ಪ್ರತಿಭಟನೆ

    ಚನ್ನಪಟ್ಟಣ: ನಗರದ ಡ್ಯೂಂಲೈಟ್ ವೃತ್ತದ ಬಳಿಯ ಪೆಟ್ಟಾ ಶಾಲಾ ಆವರಣದಲ್ಲಿ ಪೌರತ್ವ ಮಸೂದೆ ವಿರೋಧಿಸಿ ಶನಿವಾರ ಸಂಜೆ ಬೃಹತ್ ಪ್ರತಿಭಟನಾ ಸಭೆ ನಡೆಸಲಾಯಿತು. ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಭಾಗವಹಿಸಿದ್ದರು.

    ಸಭೆಯಲ್ಲಿ ಮಾತನಾಡಿದ ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್, ಕೇಂದ್ರ ಸರ್ಕಾರವು ದೇಶದ ಅಲ್ಪಸಂಖ್ಯಾತರ ದಮನಕ್ಕೆ ರಹಸ್ಯ ಕಾರ್ಯಸೂಚಿ ಅಳವಡಿಸಿಕೊಂಡು ಕಾರ್ಯ ನಿರ್ವಹಿಸುತ್ತಿದೆ. ಪೌರತ್ವ ಮಸೂದೆ ಮೂಲಕ ದೇಶವಾಸಿಗಳನ್ನು ಸುಖಾಸುಮ್ಮನೆ ಆತಂಕಕ್ಕೀಡು ಮಾಡಿದೆ. ಈ ಹೋರಾಟ ಕೇವಲ ಚನ್ನಪಟ್ಟಣ ಮಾತ್ರವಲ್ಲ, ದೇಶವ್ಯಾಪ್ತಿ ಹರಡಿದೆ. ಆದರೆ ಕೇಂದ್ರ ಸರ್ಕಾರವು
    ಹೋರಾಟ ಹತ್ತಿಕ್ಕುವ ಕಾರ್ಯ ಮಾಡುತ್ತಿದೆ. ಇದು ಮುಂದುವರಿದರೆ ಮುಂದಿನ ದಿನಗಳಲ್ಲಿ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.

    ಯೋಗೇಶ್ವರ್ ನಿಲುವೇನು?: ಕೆಪಿಸಿಸಿ ಮಾಧ್ಯಮ ವಕ್ತಾರ ನಿಜಾಮ್ ೌಜ್‌ದಾರ್ ಮಾತನಾಡಿ, ಕ್ಷೇತ್ರದ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ಈ ಕ್ಷೇತ್ರದಿಂದ 20 ವರ್ಷ ಶಾಸಕರಾಗಿದ್ದಾರೆ. ಅವರು ಕಾಂಗ್ರೆಸ್‌ನಲ್ಲಿದ್ದಾಗ ಅಲ್ಪಸಂಖ್ಯಾತರ ಬೆಂಬಲ ಪಡೆಯುತ್ತಿದ್ದರು. ಈಗ ನಮ್ಮ ಸಮುದಾಯ ಆತಂಕಕ್ಕೆ ಒಳಗಾಗಿದ್ದರೂ ಯಾವುದೇ ಮಾತನಾಡುತ್ತಿಲ್ಲ. ಅವರು ಬಿಜೆಪಿಯಲ್ಲಿದ್ದರೂ ನಿಮ್ಮ ಜತೆ ನಾನಿದ್ದೇನೆ ಎಂಬ ಭರವಸೆ ಕೂಡ ನೀಡಿಲ್ಲ. ಯೋಗೇಶ್ವರ್ ಅವರು ದೇಶದ ಸಂವಿಧಾನದ ಪರವೇ ಅಥವಾ ವಿರುದ್ಧವಾ ಎಂದು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.

    ಬಿಜೆಪಿಯು ಪ್ರಜಾಪ್ರಭುತ್ವ ಸರ್ಕಾರವನ್ನು ಕಳ್ಳರ ಸರ್ಕಾರವನ್ನಾಗಿ ಬದಲಿಸಿದೆ. ಅಧಿಕಾರಕ್ಕೆ ಬಂದ ದಿನದಿಂದ ವೈಯಕ್ತಿಕ ದ್ವೇಷ ಸಾಧಿಸುತ್ತಾ ದೇಶದ ಅಭಿವೃದ್ಧಿ ನಿರ್ಲಕ್ಷಿಸಿದೆ. ಕೇಂದ್ರ ಸರ್ಕಾರದ ಹಲವು ಜನವಿರೋಧಿ ನೀತಿಗಳನ್ನು ಪ್ರತಿಭಟಿಸದೇ ಸುಮ್ಮನಿದ್ದೆವು. ಆದರೆ ಮಾನಸಿಕ ನೆಮ್ಮದಿ ಕಸಿಯಲು ಮುಂದಾಗಿರುವ ಕೇಂದ್ರ ಸರ್ಕಾರದ ಈ ಮಸೂದೆಯನ್ನು ನಾವು ಒಪ್ಪಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಎಸ್‌ಡಿಪಿಐ ರಾಷ್ಟೀಯ ಕಾರ್ಯದರ್ಶಿ ಆಲ್ಫೋನ್ಸ್ ಮಾತನಾಡಿ, ಎಲ್ಲ ಧರ್ಮದವರಿಗೂ ಅವರವರ ಧರ್ಮ ಮೇಲು. ಕಲ್ಲಡ್ಕ ಪ್ರಭಾಕರ್ ಭಟ್ ಗಲಾಟೆ ಮಾಡಿಯೇ ಬದುಕೋದು. ಅವರಿಗೆ ಕ್ರೈಸ್ತರ ದುಡ್ಡು ಬೇಕೇ ಹೊರತು, ಕ್ರೈಸ್ತರು ಬೇಡ. ಹೀಗಾಗಿ ಯೇಸು ಪ್ರತಿಮೆಗೆ ವಿರೋಧ ವ್ಯಕ್ತಪಡಿಸುತ್ತಾರೆ ಎಂದರು.

    ನಿವೃತ್ತ ಐಎಎಸ್ ಅಧಿಕಾರಿ ಜಮೀರ್ ಪಾಷಾ ಸೇರಿ ಮುಸ್ಲಿಂ ಧರ್ಮಗುರುಗಳು ಮಾತನಾಡಿದರು. ಪ್ರತಿಭಟನಾ ಸಭೆಯಲ್ಲಿ ಮುಸ್ಲಿಂ ಮಹಿಳೆಯೊಬ್ಬರು ಗಣಪತಿ ಸ್ತುತಿ ಹಾಡುವ ಮೂಲಕ ಪ್ರಾರ್ಥನೆ ಸಲ್ಲಿಸಿದ್ದು ವಿಶೇಷವಾಗಿತ್ತು. ದೇಶಭಕ್ತಿ ಗೀತೆಗಳಿಗೆ ಎಲ್ಲ ಪ್ರತಿಭಟನಾಕಾರರು ಎದ್ದು ನಿಂತು ಗೌರವ ಸಲ್ಲಿಸಿದರು. ಮುಸ್ಲಿಂ ಧರ್ಮಗುರು ಮೌಲನಾ ಮುಜ್ಮಿಂ, ಮುಖಂಡರಾದ ಜಬ್ಬೀವುಲ್ಲಾಖಾನ್ ಘೋರಿ, ಹಮೀದ್ ಮುನಾವರ್, ವಾಸಿಲ್ ಆಲಿಖಾನ್, ಅಮಾನುಲ್ಲಾ, ಜಕೀಅಹಮದ್, ಕಾಂಗ್ರೆಸ್ ಮುಖಂಡ ಶರತ್‌ಚಂದ್ರ, ದಲಿತ ಮುಖಂಡ ಸಿದ್ದರಾಮಣ್ಣ ಮತ್ತಿತರರು ಇದ್ದರು.

    ಕೇಂದ್ರ ಸರ್ಕಾರದಿಂದ ಅಭಿವೃದ್ಧಿ ನಿರ್ಲಕ್ಷ್ಯ: ಬಿಜೆಪಿಯು ಪ್ರಜಾಪ್ರಭುತ್ವ ಸರ್ಕಾರವನ್ನು ಕಳ್ಳರ ಸರ್ಕಾರವನ್ನಾಗಿ ಬದಲಿಸಿದೆ. ಅಧಿಕಾರಕ್ಕೆ ಬಂದ ದಿನದಿಂದ ವೈಯಕ್ತಿಕ ದ್ವೇಷ ಸಾಧಿಸುತ್ತಾ ದೇಶದ ಅಭಿವೃದ್ಧಿ ನಿರ್ಲಕ್ಷಿಸಿದೆ. ಇಲ್ಲಿಯವರೆಗೆ ಕೇಂದ್ರ ಸರ್ಕಾರದ ಹಲವು ಜನವಿರೋಧಿ ನೀತಿಗಳನ್ನು ಪ್ರತಿಭಟಿಸದೇ ಸುಮ್ಮನಿದ್ದೆವು. ಆದರೆ ಮಾನಸಿಕ ನೆಮ್ಮದಿ ಕಸಿಯಲು ಮುಂದಾಗಿರುವ ಕೇಂದ್ರ ಸರ್ಕಾರದ ಈ ಮಸೂದೆಯನ್ನು ನಾವು ಒಪ್ಪಲ್ಲ ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ನಿಜಾಮ್ ಪೌಜ್‌ದಾರ್ ಆಕ್ರೋಶ ವ್ಯಕ್ತಪಡಿಸಿದರು.

    ಪ್ರಮೋದ್ ಮುತಾಲಿಕ್ ಹಾಗೂ ಕಲ್ಲಡ್ಕ ಪ್ರಭಾಕರ್ ಭಟ್ ಅಲ್ಪಸಂಖ್ಯಾತರ ವಿರೋಧಿಗಳು. ದೇಶದ ಜನತೆಯ ನೆಮ್ಮದಿ ಹಾಳು ಮಾಡಿ ತಾವು ಚೆನ್ನಾಗಿ ಬದುಕುವುದು ಇವರ ಕೆಲಸ. ಇವರಿಗೆ ದೇವರು ಒಳಿತು ಮಾಡಲಿ.
    ಆಲ್ಫೋನ್ಸ್ ಎಸ್‌ಡಿಪಿಐ ರಾಷ್ಟೀಯ ಕಾರ್ಯದರ್ಶಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts