More

    ಪಿಯು ಪರೀಕ್ಷೆ ಬರೆದವರಿಗೆಲ್ಲ ಸಿಎ ಫೌಂಡೇಷನ್​ ಕೋರ್ಸ್​ ನೋಂದಣಿಗೆ ಅವಕಾಶ

    ನವದೆಹಲಿ: ಲೆಕ್ಕ ಪರಿಶೋಧಕರಾಗಲು ಆಕಾಂಕ್ಷೆಯುಳ್ಳವರಿಗೆ ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ (ಐಸಿಎಐ) ಈ ಬಾರಿ ವಿಶೇಷ ಅವಕಾಶವೊಂದನ್ನು ಕಲ್ಪಿಸಿದೆ. ದ್ವಿತೀಯ ಪಿಯು ಪರೀಕ್ಷೆ ಅಥವಾ ತತ್ಸಮಾನ ವಿದ್ಯಾರ್ಹತೆಯ ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ಸಿಎ ಫೌಂಡೇಷನ್​ ಕೋರ್ಸ್​ಗೆ ನೋಂದಾಯಿಸಿಕೊಳ್ಳಲು ಸೌಲಭ್ಯ ಕಲ್ಪಿಸಿದೆ.

    ಈ ಮೊದಲು ಸಿಎ ಫೌಂಡೇಷನ್​ ಕೋರ್ಸ್​ಗೆ ನೋಂದಾಯಿಸಿಕೊಳ್ಳಲು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಪಾಸಾಗಬೇಕಿತ್ತು. ಆದರೆ, ಒಂದು ಬಾರಿಯ ಕ್ರಮವಾಗಿ ಪರೀಕ್ಷೆ ಬರೆದ ಎಲ್ಲ ಅಭ್ಯರ್ಥಿಗಳಿಗೆ ನೋಂದಣಿಗೆ ಅವಕಾಶ ನೀಡಿದೆ.

    ಪಿಯು ಪರೀಕ್ಷೆಗೆ ಹಾಜರಾದ, ಅಥವಾ ಪರೀಕ್ಷೆಗೆ ಹಾಜರಾಗಲು ನೀಡಿರುವ ಪ್ರವೇಶ ಪತ್ರದ ಆಧಾರದಲ್ಲಿ ನೋಂದಣಿ ಮಾಡಿಕೊಳ್ಳಬಹುದು ಎಂದು ಸಂಸ್ಥೆ ತಿಳಿಸಿದೆ.

    ಸಿಎ ಫೌಂಡೇಷನ್​ ಕೋರ್ಸ್​ಗೆ ಜೂನ್​ 27, 29 ಹಾಗೂ ಜುಲೈ 1, 3ರಂದು ದೇಶದ ವಿವಿಧ ಕೇಂದ್ರಗಳಲ್ಲಿ ಪರೀಕ್ಷೆ ನಡೆಸುವುದಾಗಿ ಸಂಸ್ಥೆ ಈಗಾಗಲೇ ವೇಳಾಪಟ್ಟಿ ಪ್ರಕಟಿಸಿದೆ.

    ಕರೊನಾ ಸೋಂಕು ತಡೆಗಟ್ಟಲು ದೇಶಾದ್ಯಂತ ಲಾಕ್​ಡೌನ್​ ಘೋಷಣೆಗೂ ಮುನ್ನವೇ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಹೀಗಾಗಿ ಕರ್ನಾಟಕದಲ್ಲಿ ದ್ವಿತೀಯ ಪಿಯುಗೆ ಇನ್ನೊಂದು ವಿಷಯದ ಪರೀಕ್ಷೆ ನಡೆಯಬೇಕಿದೆ. ಇದಲ್ಲದೇ, ಸಿಬಿಎಸ್​ಇ, ಐಸಿಎಸ್​ಇ ಸೇರಿ ವಿವಿಧ ಪಠ್ಯಕ್ರಮಗಳಲ್ಲಿ 12ನೇ ತರಗತಿ ಕೆಲ ವಿಷಯಗಳ ಪರೀಕ್ಷೆ ನಡೆಯಬೇಕಿದೆ. ಹೀಗಾಗಿ ಸಿಎ ಫೌಂಡಷನ್​ ಕೋರ್ಸ್​ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ ಸಂಸ್ಥೆ ತಿಳಿಸಿದೆ.

    ಜೀವರಕ್ಷಕ ಔಷಧಿಗಳು ಮೊದಲು ಭಾರತೀಯರಿಗೆ ಮಾತ್ರ ದೊರೆಯಬೇಕು; ಆನಂತರ ಇತರೆ ರಾಷ್ಟ್ರಗಳಿಗೆ ನೆರವಾಗಲಿ: ರಾಹುಲ್​ ಗಾಂಧಿ

    ಕೋವಿಡ್​ 19 ನೆಪದಲ್ಲಿ ಮುಸ್ಲಿಮರ ವಿರುದ್ಧ ಪಿತೂರಿ ನಡೆಸಲಾಗುತ್ತಿದೆ ಎಂದ ಅಸ್ಸಾಂ ಶಾಸಕ ಅಮಿನುಲ್​ ಇಸ್ಲಾಂ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts