More

    ವೈಷ್ಣವಿಗೆ 21ನೇ, ಅಕ್ಷಯಗೆ 27ನೇ ರ್ಯಾಂಕ್ ಶಿಕ್ಷ ಪ್ರಭಾ ಅಕಾಡೆಮಿ ಆಫ್ ಕಾಮರ್ಸ್ ಎಜುಕೇಶನ್ ಸಂಸ್ಥೆ ಮಾರ್ಗದರ್ಶನ

    ಭಟ್ಕಳ: ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟ್ ಆಫ್ ಇಂಡಿಯಾ ನಡೆಸಿದ ಸಿಎ ಫೌಂಡೇಶನ್, ಸಿಎ ಇಂಟರಮಿಡಿಯೇಟ್ ಮತ್ತು ಸಿಎಸ್ ಪರೀಕ್ಷೆಯಲ್ಲಿ ಕುಂದಾಪುರದ ಶಿಕ್ಷ ಪ್ರಭಾ ಅಕಾಡೆಮಿ ಆಫ್ ಕಾಮರ್ಸ್ ಎಜ್ಯುಕೇಶನ್ (ಸ್ಪೇಸ್)ನ ಸಿಎ, ಸಿಎಸ್, ಸಿಎಂಎಂ ಮತ್ತು ಬ್ಯಾಂಕಿಂಗ್ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು ಉತ್ತಮಸಾಧನೆ ಮಾಡಿದ್ದಾರೆ.

    ಸಿಎ ಫೌಂಡೇಶನ್‍ನಲ್ಲಿ ಸಂಸ್ಥೆಯ ವೈಷ್ಣವಿ ಎಂ.ವಿ 21ನೇ ರ್ಯಾಂಕ್ ಮತ್ತು ಅಕ್ಷಯ ಕಾಮತ 27ನೇ ರ್ಯಾಂಕ್ ಗಳಿಸಿದ್ದಾರೆ.
    ಸಿಂಚನಾ(272), ಅಂಕಿತಾ(265), ಸುಚಿನ್(268), ಸಂಪ್ರೀತಾ(238), ಐಶ್ವರ್ಯ(225), ಕೇದಾರ್ ಭಟ್(250), ಸುದರ್ಶನ್(252), ಅಭಿಷೇಕ್(243), ಐಷಾ ತುಬಾ(246), ಹರ್ಷ(228), ಅಜೇಟನ್(228), ಅಕಿಲಾ(232), ಮೇಘನಾ(228), ಶರಣು(235), ಪಲ್ಲವಿ(217), ಭೂಮಿಕಾ(217), ಅಮ್ರತಾ(207), ಕೆ.ಆರ್ ದೀಕ್ಷಾ(200), ಪ್ರನೀತಾ(200), ಶ್ರೀನಿಧಿ ಆಚಾರ್(219) ಅಂಕಗಳೊಂದಿಗೆ ತೆರ್ಗಡೆ ಹೊಂದಿದ್ದಾರೆ

    ಸಿಎ ಇಂಟರಮಿಡಿಯೇಟ್ ಪರೀಕ್ಷೆಯಲ್ಲಿ ರೋಶನಿ (278) ಮತ್ತು ಮೈತ್ರಿ(208) ಅಂಕಗಳೊಂದಿಗೆ ಉತ್ತೀರ್ಣರಾದರೆ. ಸಿಎಸ್‍ಫೌಂಡೇಶನ್ ಪರೀಕ್ಷೆಯಲ್ಲಿ ಸಂಸ್ಥೆಯ ವೆನೀಶಾ(256) ಮತ್ತು ಅರ್ಪಿತಾ (252) ಅಂಕಗಳೊಂದಿಗೆ ತೇರ್ಗಡೆ ಹೊಂದಿದ್ದಾರೆ. ಸಂಸ್ಥೆಯ ಮುಖ್ಯಸ್ಥರಾದ ಪ್ರತಾಪ್‍ಚಂದ್ರ ಶೆಟ್ಟಿ ಮತ್ತು ಭರತ್ ಶೆಟ್ಟಿ ಇವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದದರು. ಸಂಸ್ಥೆಯಲ್ಲಿ ಗುಣಮಟ್ಟದ ಶಿಕ್ಷಣ ಉತ್ತಮ ಭೋದಕ ಸಿಬ್ಬಂದಿಗಳ ಪರಿಶ್ರಮದಿಂದ ಉತ್ತಮ ಪಲಿತಾಂಶ ಬರಲು ಸಹಕಾರಿಯಾಗಿದೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.
    …..
    ಕೋಟ್….
    ಶಿಕ್ಷ ಪ್ರಭಾ ಅಕಾಡೆಮಿ ಆಫ್ ಕಾಮರ್ಸ್ ಎಜ್ಯುಕೇಶನ್ ಉತ್ತಮ ಭೋದಕ ಸಿಬ್ಬಂದಿ, ಗುಣಮಟ್ಟದ ಶಿಕ್ಷಣ ನಮ್ಮ ಆತ್ಮ ವಿಶ್ವಾಸವನ್ನು ಇಮ್ಮುಡಿಗೊಳಿಸಿತ್ತು. ಸ್ಪೇಸ್ ಸಂಸ್ಥೆಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ನೀಡುತ್ತಿರುವ ಶಿಕ್ಷಣ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಿದೆ. ್ಲ ನಮಗೆ ನಿರಂತರವಾಗಿ ಪೂರಕ ಪರೀಕ್ಷೆಯ ಜೊತೆಗೆ ರಿವಿಷನ್ ಕ್ಲಾಸ್ ನೆಡೆಸಿ ಪರೀಕ್ಷೆಯ ಹಿಂದಿನ ದಿನದವರೆಗೆ ನಮ್ಮ ಮೇಲಿನ ಕಾಳಜಿ ಮುತುವರ್ಜಿ ನಮ್ಮನ್ನು ಈ ಸ್ಥಾನದಲ್ಲಿ ನಿಲ್ಲಿಸಿದೆ. ವೈಷ್ಣವಿ ಎಂ.ವಿ., ಸಿಎ ಫೌಂಡೇಶನ್‍ನ 21ನೇ ರ್ಯಾಂಕ್ ವಿಜೇತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts