More

    ಬೈಪಾಸ್ ಸೇತುವೆ ಉದ್ಘಾಟನೆ ಅನಧಿಕೃತವೋ: ಆಯನೂರು ಪ್ರಶ್ನೆ

    ಶಿವಮೊಗ್ಗ: ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಶಿಷ್ಟಚಾರ ಉಲಂಸಿ ಗಡಿಬಿಡಿಯಲ್ಲಿ ಬೈಪಾಸ್ ರಸ್ತೆಯ ಸೇತುವೆ ಉದ್ಘಾಟಿಸಿದ್ದು ಅಧಿಕೃತವೋ, ಅನಧಿಕೃತವೋ ಎಂಬುದನ್ನು ಸ್ಪಷ್ಟಪಡಿಸಬೇಕು. ಸೇತುವೆ ಉದ್ಘಾಟನೆ ಸರ್ಕಾರಿ ಕಾರ್ಯಕ್ರಮವಾಗದೆ ಬಿಜೆಪಿ ಕಾರ್ಯಕ್ರಮವಾಗಿತ್ತು ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಆರೋಪಿಸಿದರು.

    ಕಾಮಗಾರಿ ಪೂರ್ಣಗೊಂಡಿರುವ ಪ್ರಮಾಣಪತ್ರ ಇಲ್ಲದೇ, ಲೋಕೋಪಯೋಗಿ ಇಲಾಖೆ, ಜಿಲ್ಲಾಡಳಿತಕ್ಕೆ ಮಾಹಿತಿ ನೀಡದೇ ರಾಘವೇಂದ್ರ ಅವರು ಏಕಾಏಕಿ ಸೇತುವೆ ಉದ್ಘಾಟಿಸಿದ್ದು ಮುಂದೆ ಅನಾಹುತಗಳು ಸಂಭವಿಸಿದರೆ ಯಾರು ಜವಾಬ್ದಾರರೆಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
    ಸೇತುವೆ ಉದ್ಘಾಟನೆ ಇರುವುದು ಜಿಲ್ಲಾ ಮಂತ್ರಿಗಳಿಗೂ ಗೊತ್ತಿಲ್ಲ. ಅವರದ್ದೇ ಪಕ್ಷದ ಎಂಎಲ್‌ಸಿಗಳಾದ ಎಸ್.ರುದ್ರೇಗೌಡ, ಡಿ.ಎಸ್.ಅರುಣ್ ಇರಲಿಲ್ಲ. ಅಧಿಕಾರಿಗಳನ್ನು ಕೇಳಿದರೆ ತಮಗೆ ಗೊತ್ತೇ ಇಲ್ಲ ಎನ್ನುತ್ತಾರೆ. ಸರ್ಕಾರಿ ಕಾರ್ಯಕ್ರಮವಾಗಿದ್ದರೂ ಕೆಲ ಬಿಜೆಪಿ ಮುಖಂಡರನ್ನು ಇಟ್ಟುಕೊಂಡು ಈ ರೀತಿ ತರಾತುರಿಯಲ್ಲಿ ಉದ್ಘಾಟನೆ ಮಾಡಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ ಎಂದು ದೂರಿದರು.
    ಶಿವಮೊಗ್ಗದಲ್ಲಿ ನಡೆಯುತ್ತಿರುವ ಸೇತುವೆ, ರಿಂಗ್‌ರೋಡ್, ಮೇಲ್ಸೇತುವೆ ಸೇರಿದಂತೆ ಬಹುತೇಕ ಕಾಮಗಾರಿಗಳ ಆಸುಪಾಸು ಬಿಜೆಪಿ ನಾಯಕರ ಆಸ್ತಿಗಳಿವೆ. ಬಿಜೆಪಿ ನಾಯಕರಿಗೆ ಅನುಕೂಲವಾಗುವಂತೆ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಸಿಗಂದೂರು ಸೇತುವೆಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರೇ ಶಂಕುಸ್ಥಾಪನೆ ಮಾಡಿದ್ದರು. ಆ ಕೆಲಸ ಇದುವರೆಗೂ ಪೂರ್ಣಗೊಂಡಿಲ್ಲ. ಸಾಗರದಿಂದ ತುಮಕೂರುವರೆಗೆ ರಸ್ತೆ ಅಗಲೀಕರಣಕ್ಕೆ 6000 ಕೋಟಿ ರೂ. ನೀಡುವುದಾಗಿ ಗಡ್ಕರಿ ಅಂದು ಹೇಳಿದ್ದರು. ಇದೀಗ ರಾಘವೇಂದ್ರ ಅವರು ಸಾರಿಯಿಂದ ತಾಳಗುಪ್ಪವರೆಗೆ ಚತುಷ್ಪಥ ರಸ್ತೆ ಅಗಲೀಕರಣಕ್ಕೆ 650 ಕೋಟಿ ರೂ. ಮೀಸಲಿಡಲಾಗಿದೆ ಎಂದಿದ್ದಾರೆ. ಹಾಗಿದ್ದರೆ ಹಿಂದೆ ಗಡ್ಕರಿ ಅವರು ಹೇಳಿದ್ದ 6 ಸಾವಿರ ಕೋಟಿ ರೂ. ಏನಾಯಿತು. ಈ 650 ಕೋಟಿ ರೂ. ಅದಕ್ಕೆ ಹೆಚ್ಚುವರಿಯಾಗಿರುವ ಹಣವೇ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.
    ಕೆಪಿಸಿಸಿ ಸದಸ್ಯ ವೈ.ಎಚ್.ನಾಗರಾಜ್, ಪ್ರಮುಖರಾದ ಹಿರಣ್ಣಯ್ಯ, ಜಿ.ಪದ್ಮನಾಬ್, ಶಿ.ಜು.ಪಾಶ, ಧೀರರಾಜ್ ಹೊನ್ನವಿಲೆ, ಲೋಕೇಶ್, ಆಯನೂರು ಸಂತೋಷ್, ಕೃಷ್ಣ, ಐಡಿಯಲ್ ಗೋಪಿ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts