More

    ಬೈಲೂರ ಜಾತ್ರೆ ನಾಡಿಗೆ ಮಾದರಿ

    ಇಟಗಿ: ಮಹಾತ್ಮರ ತತ್ತ್ವ ಅರಿಯಲು ಜಾತ್ರೆಗಳು, ಧಾರ್ಮಿಕ ಕಾರ್ಯಕ್ರಮಗಳು ಸಹಕಾರಿ ಎಂದು ಶಾಸಕ ಮಹಾಂತೇಶ ದೊಡಗೌಡರ ಹೇಳಿದರು. ಸಮೀಪದ ಬೈಲೂರ ಗ್ರಾಮದ ಶ್ರೀ ಚನ್ನಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ ಮಾತನಾಡಿದ ಅವರು, ವೈಚಾರಿಕತೆಗೆ ಸಾಕ್ಷಿಯಾದ ಬೈಲೂರು ಜಾತ್ರೆ ಪೂಜ್ಯ ನಿಜಗುಣಾನಂದ ಸ್ವಾಮೀಜಿ ಮಾರ್ಗದರ್ಶನದಲ್ಲಿ ಜರುಗುತ್ತಿದ್ದು, ನಾಡಿಗೆ ಮಾದರಿಯಾಗಿದೆ. ಹಲವು ಜನಪರ ಮತ್ತು ಸಾಮಾಜಿಕ ಚಿಂತನೆಗಳಿಗೆ ಅವಕಾಶ ಮಾಡಿಕೊಟ್ಟ ಹೆಮ್ಮೆಯ ಜಾತ್ರೆಯಾಗಿದೆ ಎಂದರು. ಮಾಜಿ ಶಾಸಕ ಹಾಗೂ ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ ಜಾತ್ರಾ ಮಹೋತ್ಸವ ಉದ್ಘಾಟಿಸಿ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಬೇಬಿಜಾನ್ ಗಡಾದ ಅಧ್ಯಕ್ಷತೆ ವಹಿಸಿದ್ದರು. ನಿಜಗುಣಾನಂದ ಸ್ವಾಮೀಜಿ, ಬಸವಾನಂದ ಸ್ವಾಮೀಜಿ, ಶ್ರೀ ಗೋಣಿರುದ್ರ ದೇವರು, ಮಾಜಿ ಶಾಸಕ ಅರವಿಂದ ಪಾಟೀಲ, ರಾಣಿ ಶುಗರ್ಸ್ ಚೇರ್ಮನ್ ನಾಸೀರ ಬಾಗವಾನ, ಉಪಾಧ್ಯೆಕ್ಷೆ ಲಕ್ಷ್ಮೀ ಅರಳಿಕಟ್ಟಿ, ಸಮಾಜ ಸೇವಕ ಹಬೀಬ್ ಶಿಲ್ಲೆದಾರ, ಜಿಪಂ ಸದಸ್ಯೆ ರೋಹಿಣಿ ಪಾಟೀಲ, ಕಿತ್ತೂರು ಪಪಂ ಅಧ್ಯಕ್ಷ ಹನುಮಂತ ಲಂಗೋಟಿ, ಡಿವೈಎಸ್‌ಪಿ ಶಿವಾನಂದ ಕಟಗಿ, ತಹಸೀಲ್ದಾರ್ ಸೋಮನಿಂಗ ಹಾಲಗಿ ಇದ್ದರು. ರಾಣಿ ಶುಗರ್ಸ್ ಆಡಳಿತ ಮಂಡಳಿ, ಗ್ರಾಪಂ ನೂತನ ಸದಸ್ಯರನ್ನು ಮತ್ತು ನಿವೃತ್ತ ಸೈನಿಕರನ್ನು ಸತ್ಕರಿಸಲಾಯಿತು. ಮಹಾಂತೇಶ ಇಟಗಿ ಪ್ರಾರ್ಥಿಸಿದರು. ವಿವೇಕ ಕುರಗುಂದ ನಿರೂಪಿಸಿದರು. ವಿ.ಎಸ್.ನಂದಿಹಳ್ಳಿ ಸ್ವಾಗತಿಸಿ, ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts