More

    ಸಂಘಟನೆಯಿಂದ ಸಮುದಾಯದ ಅಭಿವೃದ್ಧಿ

    ಚಿಕ್ಕೋಡಿ: ವಿದ್ಯಾರ್ಥಿಗಳಲ್ಲಿ ಗುರಿ ಮುಟ್ಟುವ ತುಡಿತ ನಿರಂತರವಾಗಿದ್ದರೆ ಸಾಧನೆಯ ಶಿಖರ ಏರಲು ಸಾಧ್ಯ ಎಂದು ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಸಚಿವ ಡಾ. ಬಿ.ಎಸ್. ನಾವಿ ಹೇಳಿದರು.

    ಪಟ್ಟಣದ ಸಾರ್ವಜನಿಕ ಲೋಕೋಪಯೋಗಿ ಸಭಾಭವನದಲ್ಲಿ ರಾಜ್ಯ ಹಡಪದ ನೌಕರರ ಸಂಘದ ಜಿಲ್ಲಾ ಘಟಕದಿಂದ ಶನಿವಾರ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿ, ಶಿಕ್ಷಕರು ಪ್ರತಿ ಹಂತದಲ್ಲೂ ವಿದ್ಯಾರ್ಥಿಗಳಿಗೆ ಸೂರ್ತಿಯಾಗಬೇಕು. ಹಿಂದುಳಿದ ಹಡಪದ ಸಮುದಾಯದವರು ಅಭಿವೃದ್ಧಿ ಹೊಂದಲು ಸಂಘಟನೆ ಅವಶ್ಯವಾಗಿದೆ ಎಂದರು.

    ಮುಖಂಡ ಭೀಮರಾಯ ವಂದಾಲ ಮಾತನಾಡಿ, ವಿದ್ಯಾರ್ಥಿಗಳ ಜೀವನ ಬಂಗಾರದ ಜೀವನ ಎನ್ನುತ್ತಾರೆ. ಆದರೆ, ಸ್ಪರ್ಧಾತ್ಮಕ ಯುಗದಲ್ಲಿ ಆ ಮಾತು ಸಾಧುವಲ್ಲ. ಶೋಷಣೆಯಿಂದ ಹೊರಬರಲು ಶಿಕ್ಷಣವೇ ಅಸ್ತ್ರ ಎಂದರು. ಜಿಲ್ಲೆಯ 53 ವಿದ್ಯಾರ್ಥಿಗಳನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಜಿಲ್ಲಾಧ್ಯಕ್ಷ ಕುಮಾರ ನಾವಿ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಈಶ್ವರಚಂದ್ರ ಬೆಟಗೇರಿ, ಮನೋಹರ ಕೋರೆ, ಅಣ್ಣಪ್ಪ ಕರೋಶಿ, ಮಹಾದೇವ ಹೊನಮಾನೆ, ಪ್ರಕಾಶ ಹೊನಮಾನೆ, ಅಶೋಕ ಹೊನಮಾನೆ, ಸುರೇಶ ನಾವಿ, ಶಿವಪುತ್ರ ನಾವದಗಿ, ವಿರೂಪಾಕ್ಷಿ ಜರಳಿ, ಮಹೇಶ ಕಟ್ಟಿಮನಿ, ರವೀಂದ್ರ ನಾವಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts