More

    ಆಧುನಿಕತೆಯಿಂದ ಕ್ಷೀಣಿಸುತ್ತಿದೆ ಗ್ರಾಮೀಣ ಸೊಗಡು

    ಲಿಂಗಸುಗೂರು: ಪಟ್ಟಣದ ಶ್ರೀಶೈಲ ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆಯ ಪಿಬಿಎ ಸಿಬಿಎಸ್‌ಸಿ ಶಾಲೆಯಲ್ಲಿ ಶನಿವಾರ ಸಂಕ್ರಾಂತಿ ಆಚರಿಸಲಾಯಿತು.


    ಶಾಲೆ ಆವರಣದಲ್ಲಿ ರಂಗೋಲಿ ಹಾಕಿ, ಕಬ್ಬು ಮತ್ತು ತಳಿರು ತೋರಣ ಕಟ್ಟಲಾಗಿತ್ತು. ಎಳ್ಳು, ಬೆಲ್ಲ, ಅಲಂಕೃತ ಗಡಿಗೆಗಳಿಗೆ ಸಂಸ್ಥೆ ಅಧ್ಯಕ್ಷ ಶರಣಪ್ಪ ಮೇಟಿ ಪೂಜೆ ಸಲ್ಲಿಸಿದರು. ಸಂಕ್ರಾಂತಿ ರೈತಾಪಿ ಕುಟುಂಬಗಳ ಮತ್ತು ಹೊಸ ವರ್ಷದ ದೊಡ್ಡ ಹಬ್ಬವಾಗಿದೆ. ಸಂಕ್ರಾಂತಿ ದಿನದಂದು ರೈತರು ಕುಟುಂಬ ಸಮೇತ ಪುಣ್ಯ ಕ್ಷೇತ್ರ, ನದಿ, ಹಳ್ಳ-ಕೊಳ್ಳಗಳಿಗೆ ತೆರಳಿ ಎಳ್ಳುಪುಡಿ ಹಚ್ಚಿಕೊಂಡು ಪುಣ್ಯಸ್ನಾನ ಮಾಡಿ ಹೊಸ ಬಟ್ಟೆ ಧರಿಸುತ್ತಾರೆ. ಬಳಿಕ ಭಕ್ಷೃ ಭೋಜನ ಸವಿದು ಮನೆಗೆ ತೆರಳುವುದು ಸಾಮಾನ್ಯ. ಆದರೆ, ಬಿಡುವಿಲ್ಲದ ಜೀವನ ಮತ್ತು ಆಧುನಿಕತೆ ಭರಾಟೆಯಲ್ಲಿ ಗ್ರಾಮೀಣ ಸೊಗಡು ಕ್ಷಿಣಿಸುತ್ತಿದೆ. ಶಾಲೆ-ಕಾಲೇಜು ಮಕ್ಕಳಲ್ಲಿ ಸಂಕ್ರಾಂತಿ ಹಬ್ಬದ ಸಂಭ್ರಮದ ಕುರಿತು ಜಾಗೃತಿ ಮೂಡಿಸಲು ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.


    ಕೃಷಿ ಸಲಕರಣೆಗಳು ಮತ್ತು ಕೃಷಿ ಉತ್ಪನ್ನಗಳ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಶಿಕ್ಷಕರಾದ ಮಾರನ್, ರವಿಂದ್ರ, ವೆಂಕಟೇಶ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts