More

    ಜಲಮಂಡಳಿಯಿಂದ 3 ಹೊಸ ಪ್ರಯೋಗಾಲಯ| ನೀರಿನ ಮಾದರಿ ಪರೀಕ್ಷೆಯಲ್ಲಿ ಬದಲಾವಣೆ

    ಬೆಂಗಳೂರು: ಕಾವೇರಿ ನೀರಿನ ಗುಣಮಟ್ಟದ ಬಗ್ಗೆ ಬಿಐಎಸ್ (ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ್) ವರದಿ ಬಂದ ಬಳಿಕ ಎಚ್ಚೆತ್ತುಕೊಂಡ ಬೆಂಗಳೂರು ಜಲಮಂಡಳಿ, ನೀರು ಪರೀಕ್ಷೆ ವಿಧಾನದಲ್ಲಿ ಬದಲಾವಣೆ ತರಲು ಮೂರು ಹೊಸ ಪ್ರಯೋಗಾಲಯ ಸ್ಥಾಪನೆಗೆ ಮುಂದಾಗಿದೆ.

    ಇದುವರೆಗೆ ಸೇವಾ ಠಾಣೆಗಳ ಸಿಬ್ಬಂದಿ ಹಲವಾರು ಕೊಳಾಯಿಗಳ ನೀರನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸುತ್ತಿದ್ದರು. ಅಲ್ಲಿ ಪರೀಕ್ಷೆಗೆ ಒಳಪಡಿಸಲಾಗುತ್ತಿತ್ತು. ಕಳೆದ ನವೆಂಬರ್​ನಲ್ಲಿ ಬಿಐಎಸ್ ನೀಡಿದ ವರದಿ ಹಿನ್ನೆಲೆಯಲ್ಲಿ ಇದೀಗ ಜಲಮಂಡಳಿಯ ಪ್ರಯೋಗಾಲಯಗಳ ತಜ್ಞರೇ ನೇರವಾಗಿ ಮಾದರಿ ಸಂಗ್ರಹಿಸಿ ಪರೀಕ್ಷೆ ಮಾಡಲಿದ್ದಾರೆ.

    ಎಲ್ಲೆಲ್ಲಿ ಪ್ರಯೋಗಾಲಯ?: ಜಲಮಂಡಳಿಯು ಪ್ರಸ್ತುತ ಜಯನಗರ ಹಾಗೂ ಹೈಗ್ರೌಂಡ್ಸ್​ನಲ್ಲಿ ಮಾತ್ರ ಪ್ರಯೋಗಾಲಯಗಳನ್ನು ಹೊಂದಿದೆ. ತೊರೆಕಾಡನ ಹಳ್ಳಿಯಿಂದ ಬಂದ ನೀರು ಹಾರೋಹಳ್ಳಿಗೆ, ಅಲ್ಲಿಂದ ತಾತಗುಣಿಗೆ ಪೂರೈಕೆಯಾಗುತ್ತಿದೆ. ಇಲ್ಲಿಂದ ನಗರದ ಹಲವು ಭಾಗಗಳಿಗೆ ಸರಬರಾಜಾಗುತ್ತಿದ್ದು, ತಾತಗುಣಿಯಲ್ಲಿ ಹೊಸ ಪ್ರಯೋಗಾಲಯ ಆರಂಭಿಸಲು ತೀರ್ವನಿಸಲಾಗಿದೆ. ನಗರಕ್ಕೆ ಕಾವೇರಿ ನೀರು ಪೂರೈಕೆಯಾಗುವ ಮುನ್ನ ಪ್ರಯೋಗಾಲಯದಲ್ಲಿ ಪರೀಕ್ಷೆಗೊಳಪಡಿಸಲಾಗುವುದು. ಅಲ್ಲದೆ, ಮಲ್ಲೇಶ್ವರ ಹಾಗೂ ಇಂದಿರಾನಗರದಲ್ಲಿ ಇನ್ನೂ 2 ಪ್ರಯೋಗಾಲಯ ನಿರ್ವಿುಸಲು ಉದ್ದೇಶಿಸಲಾಗಿದೆ. ಪಶ್ಚಿಮ ಭಾಗದ ನೀರಿನ ಮಾದರಿಗಳನ್ನು ಮಲ್ಲೇಶ್ವರದಲ್ಲಿ, ಇಂದಿರಾನಗರ ಪ್ರಯೋಗಾಲಯದಲ್ಲಿ ಪೂರ್ವ ಭಾಗದ ಮಾದರಿಗಳನ್ನು ಪರೀಕ್ಷೆ ಮಾಡಬಹುದು. ಇದರಿಂದ ಹೆಚ್ಚು ಮಾದರಿಗಳ ಪರೀಕ್ಷೆ ಸಾಧ್ಯವಾಗಲಿದೆ ಎಂದು ಪ್ರಧಾನ ಮುಖ್ಯ ಇಂಜಿನಿಯರ್ ಕೆಂಪರಾಮಯ್ಯ ತಿಳಿಸಿದ್ದಾರೆ.

    ವೆಬ್​ಸೈಟ್​ನಲ್ಲಿ ಮಾಹಿತಿ: ನೀರಿನ ಗುಣಮಟ್ಟ ನಿರ್ವಹಣೆ ಯೋಜನೆಯಡಿಯಲ್ಲಿ ಮುಂದಿನ ದಿನಗಳಲ್ಲಿ 17 ಬಗೆಯ ಅಂಶಗಳನ್ನು ಹಾಗೂ ನೀರಿನ ಎಲ್ಲ ಮಾದರಿಗಳನ್ನು ಜಲಮಂಡಳಿಯ ಪ್ರಯೋಗಾಲಯಗಳಲ್ಲೇ ಪರೀಕ್ಷೆಗೆ ಒಳಪಡಿಸಿ, ಆಗ ಬರುವ ಮಾಹಿತಿಯನ್ನು ವೆಬ್​ಸೈಟ್​ನಲ್ಲಿ ಪ್ರಕಟಿಸಲಾಗುವುದು ಎಂದು ಜಲಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts